Advertisement
ರವಿವಾರ ಸಂಜೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ನೇತೃತ್ವದಲ್ಲಿ ಇಲ್ಲಿನ ದಾಜಿಬಾನಪೇಟೆ, ಪೆಂಡಾರ ಗಲ್ಲಿ, ಬೆಳಗಾಂವ ಗಲ್ಲಿ, ಕಲಾದಗಿ ಓಣಿ ಹಾಗೂ ದುರ್ಗದ ಬಯಲಿನಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಯಿತು. ಪೊಲೀಸರ ಸಹಕಾರದೊಂದಿಗೆ ರಸ್ತೆ ಹಾಗೂ ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡಿದ್ದ ಅಂಗಡಿಗಳು, ಡಬ್ಟಾ ಅಂಗಡಿಗಳನ್ನು ತೆರವುಗೊಳಿಸಿದರು. ಪಾದಚಾರಿಮಾರ್ಗಗಳಲ್ಲಿ ಇಟ್ಟಿದ್ದ ವಸ್ತುಗಳನ್ನು ಜಪ್ತಿ ಮಾಡಲಾಯಿತು.
Related Articles
Advertisement
ಜಿಲ್ಲಾಧಿಕಾರಿ ನಿತೇಶ ಪಾಟೀಲ ಮಾತನಾಡಿ, ಈ ಹಿಂದೆ ಸ್ಥಳ ಪರಿಶೀಲನೆ ಮಾಡಿ ಸೂಚನೆ ನೀಡಲಾಗಿತ್ತು. ಅಂಗಡಿಯನ್ನು ಗೋದಾಮುಗಳನ್ನು ಮಾಡಿಕೊಂಡು ಪಾದಚಾರಿ ಮಾರ್ಗಗಳನ್ನು ಮಾರಾಟ ಸ್ಥಳವನ್ನಾಗಿ ಮಾಡಿಕೊಂಡಿದ್ದಾರೆ. ಮಹಾನಗರ ಪಾಲಿಕೆ ರಸ್ತೆಗಳು ದೊಡ್ಡದಾಗಿದ್ದು, ಒತ್ತುವರಿಯಿಂದ ವಾಹನಗಳು, ಜನರು ಓಡಾದಂತಹಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಜನರಿಂದ ಸಾಕಷ್ಟು ದೂರುಗಳು ಬಂದಿದ್ದವು.ಕಳೆದ 10 ದಿನಗಳ ಹಿಂದೆ ಕಲಾದಗಿ ಓಣಿಯಲ್ಲಿ ತೆರವು ಮಾಡಿದ್ದರು. ಪುನಃ ಒತ್ತುವರಿ ಮಾಡಿಕೊಂಡಿದ್ದಾರೆ. ಹೀಗಾಗಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.
ಮುಲಾಜಿಲ್ಲದೆ ಜಪ್ತಿ : ಸೂಚನೆ ನೀಡಿದ ನಂತರವೂ ತೆರವುಗೊಳಿಸದ ಹಿನ್ನೆಲೆಯಲ್ಲಿ ಪಾದಚಾರಿ ಮಾರ್ಗಗಳ ಮೇಲೆ ಮಾರಾಟಕ್ಕೆ ಇಟ್ಟಿದ್ದ ವಸ್ತುಗಳನ್ನುಮುಲಾಜಿಲ್ಲದೆ ಪಾಲಿಕೆ ವಾಹನಗಳಿಗೆ ತುಂಬಿದರು. ಇನ್ನೂ ಕೆಲವೆಡೆ ಡಬ್ಟಾ ಅಂಗಡಿ, ತಳ್ಳುವ ಗಾಡಿಗಳನ್ನು ವಶಕ್ಕೆ ಪಡೆದರು. ಹೆಚ್ಚುವರಿಯಾಗಿ ಕಟ್ಟಿದ್ದ ಮೆಟ್ಟಿಲು, ಕಟ್ಟೆಗಳನ್ನು ಜೆಸಿಬಿಯಿಂದ ಕೆಡವಿದರು. ಇನ್ನೂ ಅಂಗಡಿಗಳ ಮುಂಭಾಗದಲ್ಲಿ ಹಾಕಿದ್ದ ತಗಡಿನ ಶೆಡ್‌ಗಳನ್ನು ಕೂಡ ಬೀಳಿಸಿ ವಶಕ್ಕೆ ಪಡೆದರು. ಸುಮಾರು ಆರೇಳು ಟ್ರ್ಯಾಕ್ಟರ್ ಮೂಲಕ ವಸ್ತುಗಳನ್ನು ಜಪ್ತಿ ಮಾಡಲಾಯಿತು. ಜಪ್ತಿ ಮಾಡಿದ ವಸ್ತುಗಳನ್ನು ತುಂಬಲು ವಾಹನಗಳು ಇಲ್ಲದಂತಾಗಿತ್ತು. ಇಂತಹ ಕಾರ್ಯಾಚರಣೆ ಕಾಲಕಾಲಕ್ಕೆ ನಡೆದಿದ್ದರೆ ರಸ್ತೆಗಳು ಇಷ್ಟೊಂದು ಒತ್ತುವರಿಯಾಗುತ್ತಿರಲಿಲ್ಲ ಎನ್ನುವ ಅಭಿಪ್ರಾಯ ಸಾರ್ವಜನಿಕರಿಂದ ವ್ಯಕ್ತವಾಯಿತು.
ಒತ್ತುವರಿ ತೆರವು ಕಾರ್ಯಾಚರಣೆಯನ್ನು ಕಾಲ ಕಾಲಕ್ಕೆ ಮಾಡುವಂತೆ ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದ್ದೇನೆ. ಪ್ರತಿ ವಾರ ಒಂದೊಂದು ರಸ್ತೆಯಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗುವುದು. ವಾಹನ ಪಾರ್ಕಿಂಗ್‌ಗಾಗಿ 94 ರಸ್ತೆಗಳನ್ನುಗುರುತಿಸಲಾಗಿದೆ. ಶೀಘ್ರವಾಗಿ ಪೊಲೀಸ್ ಆಯುಕ್ತರು ಅಧಿ ಸೂಚನೆ ಹೊರಡಿಸುವರು.54 ಬೀದಿ ಬದಿ ವ್ಯಾಪಾರಿ ಸ್ಥಳಗಳನ್ನು ಸಹ ಗುರುತಿಸಿ ಅ ಧಿಸೂಚಿಸಲಾಗಿದೆ. ಕೊಪ್ಪಿಕರ್‌ಹಾಗೂ ದಾಜಿಬಾನ್ ಪೇಟೆ ರಸ್ತೆಗಳು 18 ಮೀಟರ್ ಅಗಲವಾಗಿವೆ. ನಕ್ಷೆಯ ಅನುಸಾರ ರಸ್ತೆಯನ್ನು ಅಳೆದು ಒತ್ತುವರಿಯಾಗಿದ್ದರೆ ತೆರವುಗೊಳಿಸಲಾಗುವುದು. – ನಿತೇಶ ಪಾಟೀಲ, ಜಿಲ್ಲಾಧಿಕಾರಿ