Advertisement

ಮತೆ ತೆರವು; ಬುಲ್ಡೋಜರ್‌ ಆರ್ಭಟ

02:27 PM Feb 06, 2021 | Team Udayavani |

ಬೀದರ: ನಗರದ ಹಲವೆಡೆ ಸಿಎ ಸೈಟ್‌, ರಸ್ತೆ ಮತ್ತು ಉದ್ಯಾನವನ ಸೇರಿದಂತೆ ಸಾರ್ವಜನಿಕ ಸ್ಥಳಗಳನ್ನು ಒತ್ತುವರಿ ಮಾಡಿರುವವರ ವಿರುದ್ಧ ಇಲ್ಲಿನ ನಗರಾಭಿವೃದ್ಧಿ ಪ್ರಾಧಿ ಕಾರಿ ಹಾಗೂ ನಗರಸಭೆ ಜಂಟಿ ಕಾರ್ಯಾಚರಣೆ ಶುರು ಮಾಡಿದ್ದು,   ಭೂಮಾಫಿಯಾಗಳಿಗೆ ಬಿಸಿ ಮುಟ್ಟಿಸಿದೆ.

Advertisement

ನಗರದಲ್ಲಿ ಮತ್ತೂಮ್ಮೆ ಸರ್ಕಾರಿ ಸ್ಥಳ ಒತ್ತುವರಿ ತೆರವುಗೊಳಿಸಲು ಬುಲ್ಡೋಜರ್‌ ಸದ್ದು ಕೇಳಿ ಬರಲಾರಂಭಿಸಿದೆ. ನಗರದ ಮನ್ನಳ್ಳಿ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಕಟ್ಟಲಾಗಿದ್ದ ಸುತ್ತುಗೋಡೆಯನ್ನು ಗುರುವಾರ ಬುಲ್ಡೋಜರ್‌ಮೂಲಕ ತೆರವುಗೊಳಿಸುವ ಮೂಲಕ  ಕಾರ್ಯಾಚರಣೆ ಆರಂಭಿಸಲಾಗಿದೆ. ಜತೆಗೆ, ಶಿವನಗರ ಸಾರ್ವಜನಿಕ ರಸ್ತೆಯಲ್ಲೂ ನಿರ್ಮಿಸಿದ್ದ ಸುತ್ತುಗೋಡೆ ಹಾಗೂ ಕರ್ನಾಟಕ ಕಾಲೇಜು ಬಳಿಯ ಶೆಡ್‌ ಅನ್ನೂ ತೆರವು ಮಾಡಲಾಗಿದೆ. ಬಿಡಿಎ ಮತ್ತು ನಗರಸಭೆ ಕಾರ್ಯಾಚರಣೆ ಸರ್ಕಾರಿ ಸ್ವತ್ತನ್ನು ತಮ್ಮದಾಗಿಸಿಕೊಳ್ಳಲು ಯತ್ನಿಸಿದ್ದವರಿಗೆ ಸಂಕಟ ತಂದಿದೆ.

ಅನ ಧಿಕೃತ ಕಟ್ಟಡ, ಶೀಘ್ರ ನೋಟಿಸ್‌: ನಗರದಲ್ಲಿ ಅತಿಕ್ರಮಣ ತೆರವು ಕಾರ್ಯಚರಣೆ ಕುರಿತುಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಬೀದರ ನಗರಾಭಿವೃದ್ಧಿ ಪ್ರಾ ಧಿಕಾರದ ಅಧ್ಯಕ್ಷ ಬಾಬು ವಾಲಿ, ನಗರದ ಮಧ್ಯ ಭಾಗವಾದ ಮೋಹನ್‌ ಮಾರ್ಕೆಟ್‌ ಏರಿಯಾದಲ್ಲಿ ಪರವಾನಗಿ ಇಲ್ಲದೇ ನಿರ್ಮಿಸಲಾಗುತ್ತಿರುವ ಎರಡು ಅನಧಿಕೃತ ಕಟ್ಟಡಗಳ ಮಾಲೀಕರಿಗೂ ನೋಟಿಸ್‌ ಜಾರಿಗೊಳಿಸಲಾಗುತ್ತದೆ. ಒಂದು ಕಟ್ಟಡಕ್ಕೆ ಹಳೆಯ ಮನೆ ಕಟ್ಟಲು ಹಾಗೂ ಗ್ರೌಂಡ್‌ ಫ್ಲೋರ್ ಗೆ ಮಾತ್ರ ಅನುಮತಿ ಪಡೆದಿದ್ದು, ಆದರೆ, ನಾಲ್ಕು ಅಂತಸ್ತು ನಿರ್ಮಿಸಲಾಗುತ್ತಿದೆ. ಮತ್ತೂಂದ ಬೃಹತ್‌ ಕಟ್ಟಡಕ್ಕೆ ಅನುಮತಿಯನ್ನೇ ಪಡೆದಿಲ್ಲ. ಇವರ ವಿರುದ್ಧ ಕ್ರಮಕ್ಕೆ ಈಗಾಗಲೇ ನಗರಸಭೆ ಪೌರಾಯುಕ್ತರು, ಎಇಇ ಅವರಿಗೂ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಕೃಷಿ ಕಾಯ್ದೆ ವಿರೋಧಿಸಿ ರಸ್ತೆ ತಡೆ: ಬೆಳಗಾವಿಯಲ್ಲಿ ರೈತರನ್ನು ವಶಕ್ಕೆ ಪಡೆದ ಪೊಲೀಸರು

ಬೀದರ ನಗರದ ಮಧ್ಯ ಭಾಗದಲ್ಲಿ  ಬಿಡಿಎ ವತಿಯಿಂದ ಅನುಮತಿ ಪಡೆಯದೇ ಹಾಗೂ ನಗರಸಭೆಯಿಂದ ಕಟ್ಟಡ ಕಟ್ಟಲುಅನುಮತಿ ಪಡೆಯದೇ ಬೃಹತ್‌ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಅನಧಿಕೃತ ಲೇ ಔಟ್‌ ಗಳು ತಲೆ ಎತ್ತುತ್ತಿವೆ. ಜತೆಗೆ, ಲೇಔಟ್‌ಗಳಲ್ಲಿ ಮ್ಯಾಪ್‌ ಅಪ್ರೂವಲ್‌ ಮೇಲೆಯೇ ನೋಂದಣಿ (ರಿಜಿಸ್ಟ್ರೇಶನ್‌) ಮಾಡಿಕೊಡಲಾಗುತ್ತಿರುವುದು ಅಪರಾಧವಾಗುತ್ತದೆ. ಇದರಿಂದ ಸರಕಾರಕ್ಕೆ ಸೇರಬೇಕಾದ ಶುಲ್ಕ ಪೋಲಾಗುತ್ತಿದೆ. ಇವೆಲ್ಲದ್ದಕ್ಕೂ ಬಿಡಿಎ ವತಿಯಿಂದ ಕಡಿವಾಣ ಹಾಕಲಾಗುವುದು ಎಂದು ಬಾಬು ವಾಲಿ ಎಚ್ಚರಿಕೆ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next