Advertisement

ಜಿ20 ಕಾರಣ ದಿಲ್ಲಿಯಲ್ಲಿ ಒತ್ತುವರಿ ತೆರವು ತೀವ್ರ

01:05 AM May 24, 2023 | Team Udayavani |

ಹೊಸದಿಲ್ಲಿ: ಭಾರತದ ಅಧ್ಯಕ್ಷತೆಯಲ್ಲಿ ಈ ಬಾರಿ ಜಿ20 ರಾಷ್ಟ್ರಗಳ ಶೃಂಗಸಭೆ ನಡೆಯುತ್ತಿದೆ. ಇದಕ್ಕಾಗಿ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಸಕಲ ಸಿದ್ಧತೆಗಳು ಕೈಗೊಳ್ಳಲಾಗುತ್ತಿದೆ. ಇದಕ್ಕೆ ಪರ್ಯಾಯವಾಗಿ ಒತ್ತುವರಿದಾರರು ಮತ್ತು ಅಕ್ರಮವಾಗಿ ಮನೆಗಳನ್ನು ಕಟ್ಟಿದವರಿಗೆ ಕಟ್ಟಡ ತೆರವುಗೊಳಿಸುವಂತೆ ದಿಲ್ಲಿಯ ವಿವಿಧ ಇಲಾಖೆಗಳು ಸರಣಿ ನೋಟಿಸ್‌ಗಳನ್ನು ಜಾರಿಗೊಳಿಸುತ್ತಿವೆ.

Advertisement

ಅಕ್ರಮವಾಗಿ ನಿರ್ಮಿಸಿದ್ದಾರೆ ಎನ್ನಲಾದ ಮನೆಗಳನ್ನು ಮಾನವೀಯ ನೆಲೆಯಲ್ಲಿ ಧ್ವಂಸ ಮಾಡುವುದನ್ನು ಇಲಾಖೆಗಳು ಕೈಬಿಡಬೇಕು ಎಂದು ಮಾನವ ಹಕ್ಕುಗಳ ಹೋರಾಟಗಾರರು ಮತ್ತು ಸಾಮಾಜಿಕ ಕಾರ್ಯಕರ್ತರು ಆಗ್ರಹಿಸಿದ್ದಾರೆ. “ಕಳೆದ ನವೆಂಬರ್‌ನಲ್ಲಿ ಭಾರತಕ್ಕೆ ಜಿ20 ಅಧ್ಯಕ್ಷೆತೆ ಪಟ್ಟ ದೊರೆಯಿತು. ಡಿಸೆಂಬರ್‌ನಿಂದ ಇದಕ್ಕಿದ್ದಂತೆ ಒತ್ತುವರಿ ತೆರವು ನೋಟಿಸ್‌ಗಳು ನಾಗರಿಕರಿಗೆ ಬರಲು ಆರಂಭವಾಯಿತು.

ದಿಲ್ಲಿಯ ಮೆಹೌಲಿಯಲ್ಲಿ 700 ಕಟ್ಟಡಗಳಿಗೆ ಒತ್ತುವರಿ ತೆರವು ನೋಟಿಸ್‌ ನೀಡಲಾಗಿದೆ. ಈ ಪೈಕಿ ಈಗಾಗಲೇ 25 ಮನೆಗಳನ್ನು ಧ್ವಂಸಗೊಳಿಸಲಾಗಿದೆ. ಇನ್ನೊಂದೆಡೆ ತುಘಲಕಾಬಾದ್‌ನಲ್ಲಿ ಸುಮಾರು 3,000 ಮನೆಗಳನ್ನು ಧ್ವಂಸಗೊಳಿಸಲಾಗಿದೆ. ಇದರಿಂದ ಜನರು ಆತಂಕಗೊಂಡಿದ್ದಾರೆ. ಎರಡೂ ಸ್ಥಳಗಳಲ್ಲಿ ಮನೆಗಳು ಮತ್ತು ಅಪಾರ್ಟ್‌ಮೆಂಟ್‌ಗಳನ್ನು ಕೆಡವಲಾಗಿದೆ’ ಎಂದು ಲ್ಯಾಂಡ್‌ ಕಾನ್ಫಿ$Éಕ್ಟ್ ವಾಚ್‌ ಸಂಸ್ಥೆಯ ಪೃಥ್ವಿರಾಜ್‌ ದೂರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next