Advertisement

ಒತ್ತುವರಿ ತೆರವುಗೊಳಿಸಿ

08:22 AM Jul 28, 2020 | Suhan S |

ಕೆ.ಆರ್‌.ಪೇಟೆ: ತಾಲೂಕಿನ ಕತ್ತರಘಟ್ಟದ ಮೂಲಕ ದೊದ್ದನಕಟ್ಟೆಯವರೆಗಿನ ಹೇಮಾವತಿ ಮುಖ್ಯ ಕಾಲುವೆಯ 55ನೇ ವಿತರಣಾ ವ್ಯಾಪ್ತಿಯ ಕಾಲುವೆಯನ್ನು ಕೆಲವರು ಮುಚ್ಚಿ ಒತ್ತುವರಿ ಮಾಡಿಕೊಂಡಿದ್ದಾರೆ. ಸದರಿ ಒತ್ತುವರಿಯನ್ನು ತೆರವುಗೊಳಿಸಿ, ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ತಾಲೂಕು ಕರ್ನಾಟಕ ರಕ್ಷಣಾ ಸೇನೆಯ ಸದಸ್ಯರು ಒತ್ತಾಯಿಸಿದ್ದಾರೆ.

Advertisement

ಪಟ್ಟಣದ ಚನ್ನರಾಯಪಟ್ಟಣ ರಸ್ತೆಯಲ್ಲಿರುವ ಹೇಮಾವತಿ ನಾಲಾ ಯೋಜನೆಯ ನಂ.3 ವಿಭಾಗೀಯ ಕಚೇರಿ ಎಂಜಿನಿಯರ್‌ ಅವರಿಗೆ ಮನವಿ ಸಲ್ಲಿರುವ ಕರ್ನಾಟಕ ಸೇನೆಯ ಸದಸ್ಯರು, ಹೇಮಾವತಿ ವಿತರಣಾ ನಾಲೆಗಳನ್ನು ಕೆಲವೆಡೆ ರೈತರು ಮುಚ್ಚಿ ಹಾಕಿದ್ದಾರೆ. ಮತ್ತೆ ಕೆಲವೆಡೆ ಕಾಲುವೆ ಏರಿಯನ್ನು ಒತ್ತುವರಿ ಮಾಡಿ, ರೈತರ ಕೃಷಿ ಪರಿಕರಗಳ ಸಾಗಾಣಿಕೆಗೆ ರಸ್ತೆಯಿಲ್ಲದಂತೆ ಮಾಡಿದ್ದಾರೆ. ಹೇಮಾವತಿ ಯೋಜನೆಯ ಎಂಜಿನಿಯರುಗಳು ತಾಲೂಕಿನಲ್ಲಿ ಹಾದು ಹೋಗಿರುವ ಹೇಮಾವತಿ ಜಲಾಶಯ ಯೋಜನೆಯ ಎಲ್ಲಾ ವಿತರಣಾ ನಾಲೆಗಳು ಮತ್ತು ಕಾಲುವೆ ಏರಿಗಳ ಸ್ಥಳ ಸಂಚಾರ ಮಾಡಿ, ಒತ್ತುವರಿ ತೆರವುಗೊಳಿಸುವ ಮೂಲಕ ರೈತರಿಗೆ ಅನುಕೂಲ ಮಾಡಟಿಕೊಡಬೇಕು. ಕಾಲುವೆಗಳನ್ನು ಮುಚ್ಚಿ ರೈತರ ಕೃಷಿ ಚಟುವಟಿಕೆಗಳಿಗೆ ಅಡ್ಡಿಪಡಿಸುತ್ತಿರುವವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕಾವೇರಿ ನೀರಾವರಿ ನಿಗಮದ ಸಹಾಯಕ ಎಂಜಿನಿಯರ್‌ ಈರಣ್ಣ ಅವರಿಗೆ ಮನವಿ ಸಲ್ಲಿಸಲಾಯಿತು. ಕರ್ನಾಟಕ ರಕ್ಷಣಾ ಸೇನೆಯ ಅಧ್ಯಕ್ಷ ಪ್ರಶಾಂತ್‌, ಕಾರ್ಯದರ್ಶಿ ಶಿವಕುಮಾರ್‌, ಪ್ರಚಾರ ಸಮಿತಿಯ ಅಧ್ಯಕ್ಷ ವಿನೋದ್‌, ಅನಂತ, ಮಂಜು, ಕಿರಣ, ಕೀರ್ತಿ, ಪ್ರಭಾಕರ್‌, ಜಗದೀಶ್‌, ಕತ್ತರಘಟ್ಟ ಬಸವರಾಜು, ಐಚನಹಳ್ಳಿ ರಂಗಸ್ವಾಮಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next