Advertisement

ಮನ ಪರಿವರ್ತನೆಯಾದಾಗ ಸ್ವಚ್ಚತಾ ಅಭಿಯಾನ ಯಶಸ್ವಿ

06:00 AM Jul 29, 2018 | Team Udayavani |

ಉಡುಪಿ: ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ನೀಡಿದ ಮೊದಲ ಸಂದೇಶ ಸ್ವಚ್ಚ ಭಾರತ. ಅವರ ಸಂದೇಶದ ಬಳಿಕ ಜನರಲ್ಲಿ ಸ್ವಚ್ಚತೆಯ ಬಗ್ಗೆ ವಿಶೇಷ ಜಾಗೃತಿ ಮೂಡಿದೆ. ಆದರೆ ಇದು ಪೂರ್ಣ ಯಶಸ್ಸಾಗಬೇಕಾದರೆ ಜನರ ಮನಃಪರಿವರ್ತನೆಯಾಗಬೇಕು ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್‌ ಅವರು  ಅಭಿಪ್ರಾಯಪಟ್ಟರು.

Advertisement

ಜು. 28ರಂದು ಉಡುಪಿ ತಾಲೂಕು ಪಂಚಾಯತ್‌ಸಭಾಂಗಣದಲ್ಲಿ ಜರಗಿದ ಸಮಾರಂಭದಲ್ಲಿ ಉಡುಪಿ ಜಿಲ್ಲಾ ಪಂಚಾಯತ್‌, ಸತ್ಛ ಭಾರತ್‌ ಮಿಷನ್‌ನ “ಸ್ವಚ್ಚ ಸರ್ವೇಕ್ಷಣಾ  ಗ್ರಾಮೀಣ 2018’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 

ತಾಲೂಕು ಪಂಚಾಯತ್‌ ಅಧ್ಯಕ್ಷೆ ನಳಿನಿ ಪ್ರದೀಪ್‌ ರಾವ್‌ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್‌ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಸಿಇಒ ಶಿವಾನಂದ ಕಾಪಶಿ, ತಾ.ಪಂ. ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ಇಒ ಮೋಹನ್‌ರಾಜ್‌, ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ ಭುಜಂಗ ಶೆಟ್ಟಿ ಉಪಸ್ಥಿತರಿದ್ದರು. ಹರಿಕೃಷ್ಣ ಶಿವತ್ತಾಯ ಕಾರ್ಯಕ್ರಮ ನಿರ್ವಹಿಸಿದರು. ಸಮೀಕ್ಷೆಯ ಕುರಿತಾದ ಭಿತ್ತಿಪತ್ರವನ್ನು ಇದೇ ಸಂದರ್ಭದಲ್ಲಿ ಅನಾವರಣಗೊಳಿಸಲಾಯಿತು.

ಗ್ರಾಮಮಟ್ಟದ ಪ್ರಥಮ ಸಮೀಕ್ಷೆ 
ದೇಶಾದ್ಯಂತ ಪ್ರಥಮ ಬಾರಿಗೆ ಗ್ರಾಮಮಟ್ಟದಲ್ಲಿ ನಡೆಯುತ್ತಿರುವ ಸ್ವಚ್ಚತಾ ಸಮೀಕ್ಷೆಯೇ “ಸ್ವಚ್ಚ ಸರ್ವೇಕ್ಷಣಾ ಗ್ರಾಮೀಣ ಅಭಿಯಾನ -2018′. ಕೇಂದ್ರ ಸರಕಾರದ ಏಜೆನ್ಸಿ ಗ್ರಾಮಗಳಿಗೆ ಬಂದು ಸಮೀಕ್ಷೆ ನಡೆಸಿ ರ್‍ಯಾಂಕಿಂಗ್‌ ನೀಡಲಿದೆ. ಉತ್ತಮ ಗ್ರಾ.ಪಂ.ಗಳಿಗೆ ಅ.2ರಂದು ಪ್ರಶಸ್ತಿ ನೀಡಲಿದೆ. ಇದು ಕೇವಲ ಅಂಕಿ ಅಂಶದ ಆಧಾರದಲ್ಲಿ ಮಾತ್ರವಲ್ಲದೆ ಸ್ಥಳಕ್ಕೆ ಖುದ್ದಾಗಿ ತೆರಳಿ ನಡೆಸುವ ಸಮೀಕ್ಷೆ. ಇದರಲ್ಲಿ ಜನರ ಅಭಿಪ್ರಾಯಗಳಿಗೆ ಹೆಚ್ಚಿನ ಮಾನ್ಯತೆ ಇದೆ. ಶೇ.35ರಷ್ಟು ಅಂಕಗಳು ಬಯಸಲು ಶೌಚಮುಕ್ತವಾಗಿರುವುದಕ್ಕೆ, ಶೇ. 30 ಅಂಕಗಳು ಗ್ರಾಮದ ಅಂಗನವಾಡಿ, ಪೇಟೆ, ಅಂಗಡಿ, ಧಾರ್ಮಿಕ ಸ್ಥಳ, ಆಸ್ಪತ್ರೆಗಳಲ್ಲಿನ ಸ್ವಚ್ಚತೆಗೆ, ಶೇ.35 ಅಂಕಗಳು ಸಾರ್ವಜನಿಕರ ಅಭಿಪ್ರಾಯಕ್ಕೆ ಇರುತ್ತವೆ ಎಂದು ಜಿ.ಪಂ. ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ್‌ ರಾವ್‌  ತಿಳಿಸಿದರು. 

ಗ್ರಾಮ ಸ್ವಚ್ಚತೆ ಸಾಕಾರಗೊಳ್ಳಬೇಕಿದೆ
ಕಸ ವಿಲೇವಾರಿ ಸವಾಲು. ನಗರದಲ್ಲಿ ಈ ಸಮಸ್ಯೆ ಗಂಭೀರವಾಗಿದೆ. ಸ್ವಚ್ಚತಾ ಅಭಿಯಾನಗಳು ಯಶಸ್ವಿಯಾಗಬೇಕಾದರೆ ಜನರು, ಜನಪ್ರತಿನಿಧಿಗಳ ಪೂರ್ಣ ಸಹಕಾರದ ಅಗತ್ಯವಿದೆ. ಬಯಲು ಶೌಚ ಮುಕ್ತ ಭಾರತ ಪರಿಕಲ್ಪನೆ ಶೇ.100ರಷ್ಟು ಸಾಕಾರಗೊಳ್ಳುತ್ತಿದೆ. ಇದೇ ರೀತಿ ಗ್ರಾಮ ಸ್ವಚ್ಚತೆ ಪರಿಕಲ್ಪನೆ ಕೂಡ ಸಾಕಾರಗೊಳ್ಳಬೇಕಿದೆ.
– ರಘುಪತಿ ಭಟ್‌, 
ಉಡುಪಿ ಶಾಸಕರು

Advertisement

ಸ್ವಯಂಸ್ಫೂರ್ತಿ ಯಿಂದ ಆಗಲಿ
ಸ್ವಚ್ಚತಾ ಕಾರ್ಯಕ್ರಮಗಳು ಸ್ವಯಂಸ್ಪೂರ್ತಿಯಿಂದ ನಡೆಯಬೇಕು. ಮನೆಗಳ ಪಕ್ಕದಲ್ಲಿ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಲು ಸಾಧ್ಯವಿದ್ದರೆ ಅದನ್ನು ಮಾಡಬೇಕು. ಅಂತೆಯೇ ತ್ಯಾಜ್ಯ ಘಟಕಗಳ ನಿರ್ವಹಣೆಗೂ ಹೆಚ್ಚಿನ ಆದ್ಯತೆ ನೀಡಬೇಕಿದೆ. ಮಂಗಳೂರಿನಲ್ಲಿ ರಾಮಕೃಷ್ಣ ಮಿಷನ್‌ ನೇತೃತ್ವದಲ್ಲಿ ಸ್ವತ್ಛತಾ ಕೆಲಸ ನಿರಂತರವಾಗಿ ನಡೆಯುತ್ತಿದೆ. ಸುಶಿಕ್ಷಿತರ ಜಿಲ್ಲೆಯೆಂದು ಗುರುತಿಸಲ್ಪಟ್ಟ ಉಡುಪಿ ಜಿಲ್ಲೆಯಲ್ಲಿ ಮತ್ತಷ್ಟು ಜಾಗೃತಿ ಮೂಡಬೇಕು.
– ಲಾಲಾಜಿ ಆರ್‌.ಮೆಂಡನ್‌, 
ಕಾಪು ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next