Advertisement

ಸ್ವಚ್ಛತಾ ಅಭಿಯಾನ, ಕರಪತ್ರ ವಿತರಣೆ

11:19 AM Jan 01, 2018 | Team Udayavani |

ಮಹಾನಗರ: ಲಯನ್ಸ್‌ ಕ್ಲಬ್‌ ಮೆಟ್ರೋಗೋಲ್ಡ್‌ ಮತ್ತು ರಾಮಕೃಷ್ಣ ಮಿಷನ್‌ ಮಂಗಳಾದೇವಿ ಪ್ರೇರಣಾ ತಂಡ ಸಹಯೋಗದಲ್ಲಿ ಪಿ.ವಿ.ಎಸ್‌. ಸರ್ಕಲ್‌ನಿಂದ ಕೊಡಿಯಾಲ್‌ಬೈಲ್‌ನ ಸುಮಾರು 200 ಮನೆ, ಅಂಗಡಿ ಭೇಟಿಯ ಮುಖಾಂತರ ಸ್ವಚ್ಛ ಭಾರತ ಅಭಿಯಾನ ಬಗ್ಗೆ ಅರಿವು, ಕರಪತ್ರವನ್ನು ವಿತರಿಸುವ ಕಾರ್ಯಕ್ರಮವನ್ನು ರಾಮಕೃಷ್ಣ ಮಿಷನ್‌ ಮಂಗಳಾದೇವಿ ಶ್ರೀ ಏಕಗಮ್ಯಾನಂದ ಸ್ವಾಮೀಜಿ ಉದ್ಘಾಟಿಸಿದರು.

Advertisement

 ಕ್ಲಬ್‌ನ ಅಧ್ಯಕ್ಷ ಚಿನ್ನಶೇಖರ ಭಂಡಾರಿ ಬಾರಿಂಜೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕ್ಲಬಿನ ಕಾರ್ಯದರ್ಶಿ ಜಿ.ಕೆ. ಹರಿಪ್ರಸಾದ್‌ ರೈ ಕಾರಮೊಗರುಗುತ್ತು, ಉಮಾ ಎಸ್‌. ರಾವ್‌, ಸದಾನಂದ ಪೇಜಾವರ, ರಾಮಚಂದ್ರ ರಾವ್‌, ಚಂದ್ರಶೇಖರ, ವಿನೀತ್‌, ಪದ್ಮನಾಭ ಡಿ., ನಿತೀನ್‌ ಚಂದ್ರ ಕೆ., ಮಾಧವ ಉಳ್ಳಾಲ ಮೊದಲಾದವರು ಉಪಸ್ಥಿತರಿದ್ದರು. ಸಂಘಟಕ ಸದಾನಂದ ಉಪಾಧ್ಯಾಯ ಸ್ವಾಗತಿಸಿದರು. ಮಂದಾಕಿನಿ ಉಪಾಧ್ಯಾಯ ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next