Advertisement

ಬಸ್‌ ನಿಲ್ದಾಣದಲ್ಲಿ ಸ್ವಚ್ಛತೆ ಮಾಯ

05:47 PM Sep 23, 2021 | Team Udayavani |

ಮಾದನಹಿಪ್ಪರಗಿ: ಸ್ಥಳಿಯ ಬಸ್‌ ನಿಲ್ದಾಣವು ಈಶಾನ್ಯ ಸಾರಿಗೆ ಸಂಸ್ಥೆ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಸಂಪೂರ್ಣ ಅಸ್ವತ್ಛತೆ ತುಂಬಿಕೊಂಡಿದ್ದು, ಗೊಬ್ಬೆದ್ದು ನಾರುತ್ತಿದೆ. ಇದರಿಂದ ಪ್ರಯಾಣಿಕರು ಮೂಗು ಮುಚ್ಚಿಕೊಂಡೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ವಲ ಒಂದೆರಡು ವರ್ಷದ ಹಿಂದೆ ಸುಮಾರು 77 ಲಕ್ಷ ರೂ. ವೆಚ್ಚದಲ್ಲಿ ಬಸ್‌ ನಿಲ್ದಾಣದ ನವೀಕರಣವಾಗಿದೆ. ಒಳಗೆ ಸಿಸಿ ರಸ್ತೆ ಹಾಗೂ ಕಟ್ಟಡ ನವೀಕರಣ ಮಾಡಲಾಗಿದೆ. ಶೌಚಾಲಯ ನಿರ್ಮಿಸಲಾಗಿದೆ. ಹೀಗಿದ್ದರೂ ಪ್ರಯಾಣಿಕರು ನಿಲ್ದಾಣದಲ್ಲಿರುವ ಕಟ್ಟಡದ ಒಳಗೆ ಬಾರದಷ್ಟು ಹೊಲಸೆದ್ದು ಹೋಗಿದೆ.

Advertisement

ಶೌಚಾಲಯದ ಸ್ಥಿತಿಯಂತೂ ಹೇಳತೀರದು. ರಾತ್ರಿ ಪುಂಡಪೋಕರಿಗಳ ಅನೈತಿಕ ಚಟುವಟಿಕೆ ತಾಣವಾಗಿದೆ. ಈ ಕುರಿತು ಹಲವು ಬಾರಿ ಸಂಬಂಧಿತ ಅಧಿಕಾರಿಗಳಿಗೆ ಹೇಳಿದರೂ ಯಾರೂ ಸ್ಪಂದಿಸುತ್ತಿಲ್ಲ. ಹೀಗಾಗಿ ಪ್ರಯಾಣಿಕರು ನಿಲ್ದಾಣದ ಆವರಣದಲ್ಲಿ ಇರುವ ಗಿಡದ ನೆರಳಲ್ಲಿ ಕೂರುತ್ತಾರೆ. ಆರು ತಿಂಗಳಿಂದ ಕಸ ಬಳಿಯದೇ ಇದ್ದುದರಿಂದ ಹೊಲಸಿನಲ್ಲಿ ಹಂದಿಗಳು ಮನೆಮಾಡಿಕೊಂಡಿವೆ.

ಇವು ಪ್ರಯಾಣಿಕರ ಬ್ಯಾಗುಗಳಿಗೆ ಬಾಯಿ ಹಾಕುತ್ತಿವೆ. ನಿಲ್ದಾಣದಲ್ಲಿ ಮಳಿಗೆಯ ಮಾಲೀಕರಾದ ಮಲ್ಲಪ್ಪ ಬಡದಾಳ, ಸಿದ್ಧಾರೂಢ ಈಕ್ಕಳಕಿ ಅವರು ರಾಷ್ಟ್ರೀಯ ಹಾಗೂ ರಾಜ್ಯ ಹಬ್ಬಗಳ ದಿನಾಚರಣೆಗಳಲ್ಲಿ ತಾವೇ ಕಸಗೂಡಿಸುತ್ತಾರೆ. ನಿಲ್ದಾಣದ ಹೊರಗೆ ಗ್ರಾಪಂ ಶೌಚಾಲಯ ನಿರ್ಮಿಸಬೇಕು ಎಂದು ಮಹಿಳೆಯರು ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ.

ನಿಲ್ದಾಣದ ಸಮಸ್ಯೆಗಳನ್ನು ಮೇಲಧಿಕಾರಿಗಳ ಗಮನಕ್ಕೆ ಹಲವು ಬಾರಿ ತಂದಿದ್ದೇನೆ. ಮೊದಲು ಕಸ ಗೂಡಿಸುವವರಿಗೆ 1000ರೂ. ಕೊಡುತ್ತಿದ್ದರು. ಈಗ ಹಣ ಕೊಡದೇ ಇರುವ ಕಾರಣದಿಂದ ಯಾರೂ ಕಸ ಗುಡಿಸಲು ಮುಂದೆ ಬರುತ್ತಿಲ್ಲ.
ಶ್ರೀಶೈಲ ಸ್ವಾಮಿ, ಸ್ಥಳೀಯ ಬಸ್‌ ನಿಯಂತ್ರಕ

ಹೊಸದಾಗಿ ಬಂದಿದ್ದೇನೆ. ಅಲ್ಲಿನ ಸಮಸ್ಯೆ ಕುರಿತು ನನ್ನ ಗಮನಕ್ಕೆ ಬಂದಿಲ್ಲ. ಪ್ರಯಾಣಿಕರ ಹಿತದೃಷ್ಟಿಯಿಂದ ಈಗ ಒಂದೆರಡು ದಿನಗಳಲ್ಲಿ ಸ್ಥಳಕ್ಕೆ ಬೇಟಿ ನೀಡಿ ಅಲ್ಲಿನ ಸಮಸ್ಯೆ ಶೀಘ್ರದಲ್ಲಿ ಬಗೆಹರಿಸಲಾಗುವುದು.
ರವೀಂದ್ರಕುಮಾರ,
ಡಿಟಿಒ, ಈಶಾನ್ಯ ಸಾರಿಗೆ
ವಿಭಾಗಿಯ ಕಚೇರಿ

Advertisement

ಸ್ಥಳೀಯ ಬಸ್‌ ನಿಯಂತ್ರಕರು ನಮಗೆ ಮಾಹಿತಿ ಕೊಟ್ಟಿದ್ದಾರೆ. ಬಸ್‌ ನಿಲ್ದಾಣಗಳ ಕಸ ಗೂಡಿಸಲು ಗುತ್ತಿಗೆ ನೀಡಲಾಗುತ್ತದೆ. ಹೀಗಾಗಿ ಅದರ ವ್ಯವಸ್ಥೆ ಮಾಡಲಾಗುವುದು. ಶೌಚಾಲಯದ ಬಗ್ಗೆ ಮೇಲಧಿಕಾರಿಗಳ ಜತೆ ಮಾತನಾಡಿ ಸಮಸ್ಯೆ ಬಗೆಹರಿಸಲಾಗುವುದು.
ಜೆ.ಡಿ.ದೊಡ್ಡಮನಿ,
ಡಿಪೋ ಮ್ಯಾನೇಜರ್‌

*ಪರಮೇಶ್ವರ ಭೂಸನೂರ

Advertisement

Udayavani is now on Telegram. Click here to join our channel and stay updated with the latest news.

Next