ಗಂಗಾವತಿ: ಐತಿಹಾಸಿಕ ಹಿನ್ನೆಲೆಯುಳ್ಳ ಸ್ಮಾರಕ ಸ್ಥಳಗಳಲ್ಲಿ ಪ್ರತಿಯೊಬ್ಬರೂ ಸ್ವಚ್ಛತೆ ಕಾಪಾಡಿಕೊಳ್ಳಬೇಕೆಂದು ಜಿ. ಪಂ. ಸಿಇಓ ಬಿ.ಫೌಜಿಯಾ ತರನ್ನುಮ್ ಹೇಳಿದರು.
ತಾಲೂಕಿನ ಆನೆಗುಂದಿ ಗ್ರಾಮದ ತಳವಾರ ಘಟ್ಟದಲ್ಲಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಸಹಯೋಗದಲ್ಲಿ ಶುಕ್ರವಾರದಂದು ಹಮ್ಮಿಕೊಂಡಿದ್ದ ಸ್ವಚ್ಛತಾ ಹೀ ಸೇವಾ ಆಂದೋಲನ ಹಾಗೂ ಸ್ವಚ್ಛತಾ ಶುಕ್ರವಾರ ಶ್ರಮದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸ್ವಚ್ಛತಾ ಹೀ ಸೇವಾ ಆಂದೋಲನದಡಿ ಆನೆಗುಂದಿಯ ಐತಿಹಾಸಿಕ ತಳವಾರಘಟ್ಟ ಸ್ವಚ್ಛತೆ ಶ್ರಮದಾನ ಹಮ್ಮಿಕೊಂಡು ಸ್ವಚ್ಛ ಮಾಡುವುದರಿಂದ ನಾವು ಇತಿಹಾಸ ಪ್ರಸಿದ್ಧ ಸ್ಮಾರಕಗಳನ್ನು ಉಳಿಸಿದಂತೆ, ಪ್ರತಿನಿತ್ಯ ಸಾಕಷ್ಟು ದೇಶ ವಿದೇಶಗಳಿಂದ ಪ್ರವಾಸಿಗರು ಬಂದು ಹೋಗುತ್ತಾರೆ. ಅಂತಹ ಸ್ಥಳವನ್ನು ಸ್ವಚ್ಛತೆಯಾಗಿಡುವುದರಿಂದ ಅಲ್ಲಿನ ಸ್ಥಳವು ಇನ್ನಷ್ಟು ದಿನಗಳ ಕಾಲ ನೋಡುಗರಿಗೆ ತೋರಿಸಲು ಒಂದು ಅದ್ಭುತ ಅವಕಾಶಗಳನ್ನು ನೀಡಿದಂತೆಯಾಗುತ್ತದೆ. ಅದ್ದರಿಂದ ಸ್ವಚ್ಛತೆಯ ಬಗ್ಗೆ ಗ್ರಾಮ ಪಂಚಾಯತಿಯವರು ಗ್ರಾಮದಲ್ಲಿ ಅರಿವು ಮೂಡಿಸಬೇಕು. ಸರ್ಕಾರದ ಆದೇಶದಂತೆ ಸ್ವಚ್ಛಯೇ ಸೇವಾ ಮಹಾ ಅಭಿಯಾನ ಯಶಸ್ವಿಯಾಗಲು ಎಲ್ಲಾ ಸಹಕರಿಸಬೇಕು ಎಂದರು.
ಜಿ. ಪಂ. ಯೋಜನಾ ನಿರ್ದೇಶಕ ಕೃಷ್ಣಮೂರ್ತಿ ಟಿ. ಮಾತನಾಡಿ, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡುವಲ್ಲಿ ಈ ಗ್ರಾಮದ ಸಾರ್ವಜನಿಕರ ಸಹಕಾರ ತುಂಬಾ ಮುಖ್ಯ, ಗ್ರಾಮ ಪಂಚಾಯತಿಯಿಂದ ವಿತರಿಸಿದ ಕಸ ಸಂಗ್ರಹಣ ಬುಟ್ಟಿಗಳಲ್ಲಿ ಒಣ ಕಸ ಮತ್ತು ಹಸಿ ಕಸವನ್ನು ಪ್ರತ್ಯೇಕವಾಗಿ ಹಾಕಲು ನೀವು ಮೊದಲಿನಿಂದಲೆ ಪ್ರಾರಂಭಿಸಿ ಹಾಗೂ ಗ್ರಾಮವನ್ನು ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಮಾದರಿಯಾಗಲು ನೀವೆಲ್ಲರೂ ನಮ್ಮೊಂದಿಗೆ ಕೈ ಜೋಡಿಸಬೇಕು ಎಂದರು.
ಇ.ಓ. ಮಹಾಂತಗೌಡ ಪಾಟೀಲ್ ಮಾತನಾಡಿ, ಜಿ.ಪಂ. ವತಿಯಿಂದ ಅ.2 ರವರೆಗೆ ಸ್ವಚ್ಛತಾ ಹೀ ಸೇವಾ ಆಂದಲೋನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ತಾಲೂಕಿನಲ್ಲಿರುವ ಗ್ರಾಮಗಳಲ್ಲಿ ಸ್ವಚ್ಛತೆಯ ಕಾಪಾಡುವಲ್ಲಿ ಗ್ರಾಮಸ್ಥರ ಸಹಕಾರದಿಂದ ಮಾತ್ರ ಸಾಧ್ಯ ಎಂದರು.
ಕಾಮಗಾರಿಗಳ ಪರಿಶೀಲನೆ: ತಳವಾರಘಟ್ಟದ ಪಕ್ಕದಲ್ಲಿ ನರೇಗಾದಡಿ ಅನುಷ್ಠಾನವಾದ ಗ್ರಾಮೀಣಾ ಉದ್ಯಾನವನ್ನು ವೀಕ್ಷಿಸಿ, ಎನ್ ಆರ್ ಎಲ್ ಎಮ್ ಸಂಜೀವಿನಿ ಸ್ವ-ಸಹಾಯ ಸಂಘದ ಕಟ್ಟಡ ಆವರಣ ಸಸಿಯನ್ನಿಟ್ಟು ಆವರಣದಲ್ಲಿ ಮೈದಾನ ಅಭಿವೃದ್ಧಿ ಸಂಬಂಧಿಸಿದಂತೆ ತಾ.ಪಂ ಇಒ ಮಹಾಂತಗೌಡ ಪಾಟೀಲ್ ಅವರೊಂದಿಗೆ ಚರ್ಚಿಸಿದರು.
ತಾ ಪಂ. ಯೋಜನಾಧಿಕಾರಿ ಗುರುಪ್ರಸಾದ್ ಎಸ್, ಗ್ರಾ. ಪಂ. ಅಧ್ಯಕ್ಷ ಕೆ.ಬಾಳೆಕಾಯಿ ತಿಮ್ಮಪ್ಪ, ಅಭಿವೃದ್ಧಿ ಅಧಿಕಾರಿ ಕೃಷ್ಣಪ್ಪ ಕೆ., ಸ್ವಚ್ಛ ಭಾರತ ಮಿಷನ್ ಜಿಲ್ಲಾ ಸಂಯೋಜಕರಾದ ಮಾರುತಿ ಎನ್., ಬಸಮ್ಮ ಹುಡೇದ್, ಎನ್.ಆರ್.ಎಲ್.ಎಮ್. ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಅಂಬಣ್ಣ, ಕಿಷ್ಕಿಂದಾ ಟ್ರಸ್ಟ್ ಸಂಸ್ಥಾಪಕ ಶಮಾ ಪವಾರ್, ಪ್ರಾಥಮಿಕ ಆರೋಗ್ಯ ಕೇಂದ್ರ ಡಾ.ನವೀನ್, ಗ್ರಾಮ ಪಂಚಾಯತಿ ಸದಸ್ಯರು, ಎಸ್ ಬಿಎಮ್ ವಿಷಯ ನಿರ್ವಾಹಕರು, ಎನ್ ಆರ್ ಎಲ್ ಎಮ್ ತಾಲೂಕು ವ್ಯವಸ್ಥಾಪಕರು, ಸಂಜೀವಿನಿ ಸ್ವ-ಸಹಾಯ ಸಂಘದ ಮಹಿಳೆಯರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಮತ್ತು ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಸಾರ್ವಜನಿಕರು, ಗ್ರಾ.ಪಂ ಸಿಬ್ಬಂದಿಗಳು ಭಾಗವಹಿಸಿದ್ದರು.