ಉಡುಪಿ: ಸ್ವಾತಂತ್ರ್ಯೋತ್ಸವದ ಅಂಗವಾಗಿ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಹಿಂದು ಹಿರಿಯ ಪ್ರಾಥಮಿಕ ಶಾಲೆ ಕಲ್ಯಾಣಪುರ,ಡಾ| ಟಿ.ಎಂ.ಎ.ಪೈ ಪ್ರೌಢಶಾಲೆ ವಿದ್ಯಾರ್ಥಿಗಳನೊಳಗೊಂಡು ಕಲ್ಯಾಣಪುರ ಸಂತೆಕಟ್ಟೆಯಿಂದ ಕಲ್ಯಾಣಪುರದವರೆಗೆ ರಸ್ತೆಯ ಎರಡು ಬದಿಯಲ್ಲಿ ಸ್ವತ್ಛತಾ ಕಾರ್ಯಕ್ರಮಕ್ಕೆ ಲೆಪ್ಟಿಡೆಂಟ್ ಕಮಾಂಡರ್ ಸುದರ್ಶನ್ ಆರ್. ಪೈ ಚಾಲನೆ ನೀಡಿದರು.
ನಮ್ಮ ದೇಶದ ಭೂಮಿಯ ಗಾತ್ರ ಇದ್ದಷ್ಟೆ ಇದೆ ಅದು ದೊಡ್ಡದಾಗುವುದಿಲ್ಲ. ಆದರೆ ದೇಶದ ಜನಸಂಖ್ಯೆ ಜಾಸ್ತಿ ಆಗುತ್ತಿದೆ. ಮಾತ್ರವಲ್ಲದೆ ಭೂಮಿಗೆ ಬೀಳುವ ಕಸದ ರಾಶಿಗಳು ತ್ಯಾಜ್ಯವಸ್ತುಗಳು ಜಾಸ್ತಿ ಆಗುತ್ತಿದೆ ಇದನ್ನು ತಡೆಗಟ್ಟಲು ನಮ್ಮಿಂದ ಸಾಧ್ಯವಾಗುತ್ತಿಲ್ಲ ಎಂದು ಡಾ| ಟಿ.ಎಂ.ಎ.ಪೈ ಪ್ರೌಡಶಾಲೆಯ ಮುಖ್ಯೋಪಾಧ್ಯಾಯ ಶೇಖರ ಪಿ.ಹೇಳಿದರು.
ಕಲ್ಯಾಣಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಎಲ್ಲಿಯು ಕಸದ ತೊಟ್ಟಿಗಳು ಇಲ್ಲದೆ ಇರುವುದರಿಂದ ಸಾರ್ವಜನಿಕರು ಕಸವನ್ನು ರಸ್ತೆಯಲ್ಲೆ ಹಾಕುತ್ತಾರೆ ಎಂಬ ಸಾರ್ವಜನಿಕರ ದೂರಿಗೆ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿದೆ ಎಂದು ಸಂಘವು ತಿಳಿಸಿದೆ.
ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಗುಲಾಬಿ, ಬಾಲ ಮಾರುತಿ ವ್ಯಾಯಾಮ ಶಾಲೆಯ ಅಧ್ಯಕ್ಷ ಕೃಷ್ಣ ದೇವಾಡಿಗ, ಉದ್ಯಮಿಗಳಾದ ಸುಬ್ಬಣ್ಣ ಪೈ., ಸಚಿನ್ ಪೈ ಉಪಸ್ಥಿತರಿದ್ದರು.
ಬಾಲಮಾರುತಿ ವ್ಯಾಯಾಮ ಶಾಲೆಯ ಪ್ರಧಾನ ಕಾರ್ಯದರ್ಶಿ ಗಣೇಶ ಶೇರಿಗಾರ ಸ್ವಾಗತಿಸಿದರು. ಉಪನ್ಯಾಸಕ ದಯಾನಂದ ಕಾರ್ಯಕ್ರಮ ನಿರೂಪಿಸಿದರು.