Advertisement
ಪಡೀಲ್: ಸ್ವಚ್ಛ ಪಡೀಲ್ ತಂಡದ ಸದಸ್ಯರಿಂದ 76ನೇ ನಿತ್ಯಜಾಗೃತಿ ಅಭಿಯಾನವನ್ನು ಮಂಗಳೂರು ಜಂಕ್ಷನ್ ರೈಲ್ವೇ ಸ್ಟೇಷನ್ ರೋಡ್‌ನಲ್ಲಿರುವ ಮಹಾದೇವಿ ಭಜನ ಮಂದಿರದಿಂದ ಪ್ರಾರಂಭಿಸಲಾಯಿತು. ಸುಮಾರು ಮೂವತ್ತು ಜನ ಸದಸ್ಯರು ಉದಯ ಕೆ.ಪಿ. ಮಾರ್ಗದರ್ಶನದಲ್ಲಿ ಸ್ಥಳೀಯ ಮನೆಗಳಿಗೆ ಭೇಟಿ ನೀಡಿ ಸ್ವತ್ಛ ಸಂಕಲ್ಪ ಕರಪತ್ರ ವಿತರಿಸಿ, ಸ್ವಚ್ಛತೆಯ ಕುರಿತು ಅರಿವು ಮೂಡಿಸಿದರು.
ಮನವಿ ಮಾಡಿದರು. ನಂತೂರು: ಹವ್ಯಕ ಸಭಾ ಸದಸ್ಯರಿಂದ ನಂತೂರ್ ಜಂಕ್ಷನ್ ರಸ್ತೆಯಲ್ಲಿ ಸ್ವಚ್ಛತೆಗಾಗಿ ಜನ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ಭಾರತಿ ಕಾಲೇಜಿನ ಸುಮಾರು 40 ವಿದ್ಯಾರ್ಥಿಗಳು ವೇಣುಗೋಪಾಲ್ ಭಟ್ ನೇತೃತ್ವದಲ್ಲಿ 78ನೇ ಆಭಿಯಾನದಲ್ಲಿ ಪಾಲ್ಗೊಂಡರು.
Related Articles
Advertisement
ಎಕ್ಕೂರು: ಸ್ವಚ್ಛ ಎಕ್ಕೂರು ಕಾರ್ಯಕರ್ತರು ಸ್ಥಳೀಯ ಮನೆಗಳಿಗೆ ತೆರಳಿ ತ್ಯಾಜ್ಯ ನಿರ್ವಹಣೆಗೆ ಹೆಚ್ಚಿನ ಒತ್ತು ನೀಡಿ, ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ವಿನಂತಿಸಿಕೊಂಡರು. ಪ್ರಶಾಂತ್ ಎಕ್ಕೂರು 80ನೇ ಜಾಗೃತಿ ಕಾರ್ಯಕ್ರಮ ಆಯೋಜಿಸಿದರು.
ಬಂದರು: ಸ್ವಚ್ಛ ಮಂಗಳೂರು ಅಭಿಯಾನದ ಮೂಲಕ ಸ್ವಚ್ಛಗೊಳಿಸಿದ ಮಹಮದ್ ಅಲಿ ರಸ್ತೆ, ಮಿಶನ್ ಸ್ಟ್ರೀಟ್ ರಸ್ತೆಗಳಲ್ಲಿ ಮತ್ತೆ ಕಸಬೀಳದಂತೆ ತಡೆಯಲು ಸಂತ ಅಲೋಶಿಯಸ್ ಎನ್ನೆಸ್ಸೆಸ್ ಕಾರ್ಯಕರ್ತರಿಂದ 81ನೇ ನಿತ್ಯ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ಎನ್ನೆಸ್ಸೆಸ್ ಸಂಚಾಲಕಿ ಪ್ರೇಮಲತಾ ಶೆಟ್ಟಿ ನೇತೃತ್ವದಲ್ಲಿ ಕಾರ್ಯಕರ್ತರು, ನೂರಕ್ಕೂ ಹೆಚ್ಚು ವರ್ತಕರನ್ನು ಭೇಟಿ ಮಾಡಿ ಜಾಗೃತಿ ಕೈಗೊಂಡರು.
ಕೋಡಿಕಲ್: ಸ್ವಚ್ಛ ಕೋಡಿಕಲ್ ತಂಡದ ಸದಸ್ಯರಿಂದ ಕೋಡಿಕಲ್ ಅಡ್ಡ ರಸ್ತೆಯಲ್ಲಿನ ಮನೆಗಳಿಗೆ ತೆರಳಿ ಸಂಕಲ್ಪ ಕರಪತ್ರ ನೀಡಿ ಜನರಿಗೆ ಸ್ವಚ್ಛತೆಗೆ ಬಗ್ಗೆ ಮಾಹಿತಿ ನೀಡಲಾಯಿತು. 82ನೇ ಜಾಗೃತಿ ಅಭಿಯಾನವನ್ನು ಕಿರಣ್ ಕೊಡಿಕಲ್ ಸಂಘಟಿಸಿದರು.
ಶಿವಭಾಗ್: ಸ್ವಚ್ಛ ಶಿವಭಾಗ್ ಕಾರ್ಯ ಕರ್ತರು ಶಿವಭಾಗ್‌ನ 1 ಮತ್ತು 2ನೇ ಅಡ್ಡ ರಸ್ತೆಗಳಲ್ಲಿನ ಮನೆಗಳನ್ನು ಸಂಪರ್ಕಿಸಿ ಸ್ವಚ್ಛತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವಂತೆ ಕೇಳಿಕೊಂಡರು. ಶೀಲಾ ಜಯಪ್ರಕಾಶ್, ಸೀಮಾ 83ನೇ ನಿತ್ಯ ಜಾಗೃತಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಜಪ್ಪು: ಬೋಳಾರ ರಸ್ತೆಯಲ್ಲಿ ಭಗಿನಿ ಸಮಾಜದ ಮಹಿಳೆಯರಿಂದ ರಸ್ತೆ ಬದಿಯಲ್ಲಿ ತ್ಯಾಜ್ಯವನ್ನು ಎಸೆಯುತ್ತಿರುವುದನ್ನು ನಿಲ್ಲಿಸುವ ಸಲುವಾಗಿ 86ನೇ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ರತ್ನಾ ಆಳ್ವ ಅಭಿಯಾನ ಸಂಯೋಜಿಸಿದರು.
ಅಳಕೆ: ಕೂಳೂರು ಫೆರ್ರಿ ರಸ್ತೆಯಲ್ಲಿ ಸ್ವಚ್ಛ ಅಳಕೆ ತಂಡದ ಯುವಕರು ರಸ್ತೆಬದಿಯಲ್ಲಿ ಬಿದ್ದಿದ್ದ ತ್ಯಾಜ್ಯವನ್ನು ತೆರವುಗೊಳಿಸಿದ್ದರು. ಇನ್ನು ಮುಂದೆ ಅಲ್ಲಿ ಕಸ ಎಸೆಯದಂತೆ ಸ್ಥಳೀಯ ಅಂಗಡಿ, ಮನೆಗಳಿಗೆ ತೆರಳಿ ಜಾಗೃತಿ ಕಾರ್ಯ ನಡೆಸಿದರು. ಕೃಷ್ಣ ಪ್ರಸಾದ್ ಶೆಟ್ಟಿ 87ನೇ ಅಭಿಯಾನವನ್ನು ಸಂಯೋಜಿಸಿದರು.
ಬೋಳಾರ: ನಿವೇದಿತ ಬಳಗದ ಸದಸ್ಯೆಯರು ಲೀವೆಲ್ ರಸ್ತೆಯಲ್ಲಿನ ಮನೆಗಳಿಗೆ ಮತ್ತು ಪಿಎನ್‌ಟಿ ಕ್ವಾಟ್ರಸ್ ಗೆ ತೆರಳಿ ಕರಪತ್ರ ನೀಡಿ, ಸುತ್ತಮುತ್ತಲಿನ ಪರಿಸರದಲ್ಲಿ ಸ್ವಚ್ಛತೆ ಕಾಪಾಡುವಂತೆ ತಿಳಿಸಿದರು. 89ನೇ ಅಭಿಯಾನವನ್ನು ಅಧ್ಯಾಪಕಿ ವಿಜಯಲಕ್ಷ್ಮೀ ಮಾರ್ಗದರ್ಶನ ನೀಡಿದರು.
ಹಳೆ ಬಸ್ ನಿಲ್ದಾಣ: ಶರವು ದೇವಸ್ಥಾನ ರಸ್ತೆ ಮತ್ತು ಸಿಟಿ ಸೆಂಟರ್ ಮಾಲ್ ಸಾಗುವ ಮಾರ್ಗದಲ್ಲಿ ಎಸ್‌ಕೆಬಿ ಆಟೋಪಾರ್ಕ್‌ನ ಸದಸ್ಯರು ಗಣೇಶ್ ಬೊಳಾರ್ ನೇತೃತ್ವದಲ್ಲಿ 90ನೇ ನಿತ್ಯಜಾಗೃತಿ ಅಭಿಯಾನವನ್ನು ಹಮ್ಮಿಕೊಂಡು ಜಾಗೃತಿ ಕರಪತ್ರ ವಿತರಿಸಿದರು.
ಗಣೇಶ್ ರಾವ್ ಲೇನ್: ಸುಬ್ರಹ್ಮಣ್ಯ ಸಭಾ ಸದನದ ಕಾರ್ಯಕರ್ತರು ಬಿಜೈನ ಗಣೇಶ್ ರಾವ್ ಲೇನ್ ಮನೆಗಳಿಗೆ ಭೇಟಿ ನೀಡಿ ಸ್ವಚ್ಛತಾ ಮಾಹಿತಿ ಪತ್ರವನ್ನು ನೀಡಿ ಮಂಗಳೂರನ್ನು ಸ್ವಚ್ಛವಾಗಿಡಲು ಸಹಕಾರ ಕೋರಿದರು. ಶ್ರೀಕಾಂತ್ ರಾವ್ 91ನೇ ಅಭಿಯಾನ ಸಂಯೋಜಿಸಿದರು.
ಪಾಂಡೇಶ್ವರ: ಶ್ರೀ ಶಾರದಾ ಮಹಿಳಾ ವೃಂದದ ಸದಸ್ಯೆಯರಿಂದ ಶಿವನಗರದಲ್ಲಿನ ನೂರಕ್ಕೂ ಅಧಿಕ ಮನೆಗಳಿಗೆ ಭೇಟಿ ನೀಡಿ ಸ್ವಚ್ಛ ಜಾಗೃತಿ ಕಾರ್ಯಕೈಗೊಳ್ಳಲಾಯಿತು. ಲತಾಮಣಿ ರೈ ಸೇರಿದಂತೆ ಸುಮಾರು ಮೂವತ್ತಕ್ಕೂ ಅಧಿಕ ಮಹಿಳೆಯರು 92ನೇ ಜಾಗೃತಿಯಲ್ಲಿ ಭಾಗವಹಿಸಿದರು.
ಹಂಪನಕಟ್ಟೆ: ಬಲ್ಮಠ ರಸ್ತೆಯಲ್ಲಿ ಹಿಂದೂ ವಾರಿಯರ್ಸ್ ಯುವ ಕಾರ್ಯಕರ್ತರಿಂದ 93ನೇ ನಿತ್ಯಜಾಗೃತಿ ಅಭಿಯಾನವನ್ನು ನೆರವೇರಿಸಲಾಯಿತು. ಕಾರ್ಯಕರ್ತರು ಯೋಗಿಶ್ ಕಾಯರ್ತಡ್ಕ ನೇತೃತ್ವದಲ್ಲಿ ಎರಡು ಗುಂಪುಗಳಲ್ಲಿ ಸ್ವಚ್ಛತಾ ಸಂಕಲ್ಪ ಕರಪತ್ರ ವಿತರಿಸಿ, ಜಾಗೃತಿ ಕಾರ್ಯ ಕೈಗೊಂಡರು.
ಬಿಬಿ ಅಲಾಬಿ ರಸ್ತೆ: ಮೈದಾನ್ ಮೂರನೇ ತಿರುವು ಮತ್ತು ಬಿಬಿ ಅಲಬಿ ರಸ್ತೆಗಳಲ್ಲಿನ ವ್ಯಾಪಾರಸ್ತರನ್ನು ಸಂಪರ್ಕಿಸಿದ ಸರಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಮತ್ತು ಕಸದ ಬುಟ್ಟಿಗಳನ್ನಿಡುವಂತೆ ಕೇಳಿಕೊಂಡರು. 94ನೇ ಅಭಿಯಾನದಲ್ಲಿ ಸುಮಾರುನಲವತ್ತು ಕಾಲೇಜು ಯುವಕ ಯುವತಿಯರು ಪಾಲ್ಗೊಂಡರು. ಪ್ರತಿದಿನ ಸಂಜೆ ನಡೆಯುತ್ತಿರುವ ಸ್ವಚ್ಛತಾ ಜಾಗೃತಿ ಅಭಿಯಾನದ ನೇತೃತ್ವವನ್ನು ಬ್ರಹ್ಮಚಾರಿ ಶಿವಕುಮಾರ, ಬ್ರಹ್ಮಚಾರಿ ವಿನೋದ್, ಬ್ರಹ್ಮಚಾರಿ ನಿಶ್ಚಯ, ಬ್ರಹ್ಮಚಾರಿ ಚಿದಾನಂದ, ಬ್ರಹ್ಮಚಾರಿ ಲೋಕೇಶ್, ಬ್ರಹ್ಮಚಾರಿ ರಾಜಶೇಖರ್ ವಹಿಸಿದ್ದರು. ಉಮಾನಾಥ ಕೋಟೆಕಾರ್ ಕಾರ್ಯಕ್ರಮ ಗಳನ್ನು ಸಂಘಟಿಸಿದರು. ಎಂಆರ್‌ಪಿಎಲ್ ಸಂಸ್ಥೆ ಈ ಅಭಿಯಾನಕ್ಕೆ ಪ್ರಾಯೋಜಕತ್ವ ನೀಡುತ್ತಿದೆ ಎಂದು ಅಭಿಯಾನದ ಸಂಚಾಲಕರಾದ ಸ್ವಾಮಿ ಏಕಗಮ್ಯಾನಂದ ಅವರು ತಿಳಿಸಿದರು. ನಗರದ ವಿವಿಧೆಡೆ ಸ್ವಚ್ಛ
ಉರ್ವಾಸ್ಟೋರ್: ಅಲ್ಪಸಂಖ್ಯಾಕ ವಿದ್ಯಾರ್ಥಿನಿಲಯದ ವಿದ್ಯಾರ್ಥಿನಿಯರಿಂದ 84ನೇ ನಿತ್ಯ ಜಾಗೃತಿ ಅಭಿಯಾನವನ್ನು ಊರ್ವಾ ಸ್ಟೋರ್‌ನಲ್ಲಿ ಹಮ್ಮಿಕೊಳ್ಳಲಾಯಿತು. ವಿದ್ಯಾರ್ಥಿನಿಯರು 3 ಗುಂಪುಗಳಲ್ಲಿ ತೆರಳಿ 150ಕ್ಕೂ ಹೆಚ್ಚಿನ ವ್ಯಾಪಾರಿಗಳನ್ನು ಭೇಟಿ ಮಾಡಿ ಸ್ವಚ್ಛತೆಯ ಕರಪತ್ರ ನೀಡಿದರು. ಬಿಜೈ: ಮಂಗಳೂರು ಹಿರಿಯ ನಾಗರಿಕರ ಒಕ್ಕೂಟದ ಸದಸ್ಯರಿಂದ ಬಿಜೈ ಚರ್ಚ್ ರಸ್ತೆಯಲ್ಲಿ 85ನೇ ಸ್ವಚ್ಛತಾ ಜಾಗೃತಿ ಕಾರ್ಯವನ್ನು ನೆರವೇರಿಸಲಾಯಿತು. ಸದಸ್ಯರು ರಸ್ತೆಯಲ್ಲಿ ಕಸ ಎಸೆದವರ ಮನೆಯನ್ನು ಪತ್ತೆಹಚ್ಚಿ ಆ ಕಸ ಹಿಂದಿರುಗಿಸಿ ಇನ್ನು ಮುಂದೆ ಈ ರೀತಿ ಅಚಾತುರ್ಯ ನಡೆಯದಂತೆ ಎಚ್ಚರಿಕೆ ವಹಿಸುವಂತೆ ಕೇಳಿಕೊಂಡರು. ಸೆಂಟ್ರಲ್ ಮಾರ್ಕೆಟ್: ರಥಬೀದಿ ಸರಕಾರಿ ಕಾಲೇಜು ವಿದ್ಯಾರ್ಥಿಗಳು 3 ಗುಂಪುಗಳಲ್ಲಿ 88ನೇ ಜಾಗೃತಿ ಕಾರ್ಯ ಕೈಗೊಂಡರು. ಸುಮಾರು150ವ್ಯಾಪಾರ ಮಳಿಗೆಗಳಿಗೆ ಭೇಟಿ ನೀಡಿ ಸ್ವಚ್ಛತೆಯ ಪ್ರಾಮುಖ್ಯತೆ ತಿಳಿಸಿಕೊಟ್ಟರು. ಪ್ರೊ| ಶೇಷಪ್ಪ ಅಮೀನ್ ನೇತೃತ್ವ ವಹಿಸಿದ್ದರು.