Advertisement

ಶುದ್ದ ನೀರಿನ ಘಟಕ ಪುನಾರಂಭ

11:08 AM Oct 21, 2021 | Team Udayavani |

ಆಳಂದ: ಗ್ರಾಪಂ ಕೇಂದ್ರಸ್ಥಾನ ಕೊಡಲಹಂಗರಗಾ ಗ್ರಾಮದಲ್ಲಿ ಕಳೆದ ಮೂರು ವರ್ಷಗಳಿಂದಲೂ ಕೆಟ್ಟುನಿಂತಿದ್ದ ಶುದ್ಧ ಕುಡಿಯುವ ನೀರಿನ ಘಟಕದ ಪುನಾರಂಭಕ್ಕೆ ಗ್ರಾಪಂ ಅಧ್ಯಕ್ಷೆ ಕಮಲಾಬಾಯಿ ಆರ್‌. ಗುತ್ತೇದಾರ ಚಾಲನೆ ನೀಡಿದರು.

Advertisement

ಬಳಿಕ ಮಾತನಾಡಿದ ಅವರು, ಗ್ರಾಮದಲ್ಲಿ ಜನರ ಆರೋಗ್ಯದ ಹಿತದೃಷ್ಟಿಯಿಂದ ಶುದ್ಧ ಕುಡಿಯುವ ನೀರಿನ ಅಗತ್ಯ ಮನಗಂಡು ತುಕ್ಕು ಹಿಡಿದಿದ್ದ ನೀರಿನ ಘಟಕ ದುರಸ್ತಿಗೊಳಿಸಿ ಪುನಾರಂಭಿಸಲಾಗಿದೆ. ಗ್ರಾಪಂಗೆ ಬರುವ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಲು ಗ್ರಾಮಸ್ಥರು ಹಾಗೂ ಸರ್ವ ಸದಸ್ಯರು ಸಹಕಾರ ನೀಡಿದರೆ ಯೋಜನೆಗಳನ್ನು ಜಾರಿಗೆ ತರಲು ಅನುಕೂಲವಾಗುತ್ತದೆ ಎಂದು ಹೇಳಿದರು.

ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಂಜೂರ್‌ ಪಟೇಲ ಮಾತನಾಡಿ, ಕಲುಷಿತ ನೀರಿನಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಮನಗಂಡು ಗ್ರಾಪಂ ಆಡಳಿತ ಮಂಡಳಿ ಶುದ್ಧ ನೀರು ಸರಬರಾಜಿಗೆ ಕ್ರಮ ಕೈಗೊಂಡಿದೆ ಎಂದರು.

ತಾಪಂ ಮಾಜಿ ಸದಸ್ಯ ಚಂದುರಾವ್‌ ಕುಲಕರ್ಣಿ ಮಾತನಾಡಿ, ಅಭಿವೃದ್ಧಿ ಕಾರ್ಯಗಳನ್ನು ಪಕ್ಷಭೇದ ಮರೆತು ಮಾಡಬೇಕು ಎಂದು ಹೇಳಿದರು. ಗ್ರಾಪಂ ಸದಸ್ಯ ರಾಜು ಕಾಂದೆ, ಗ್ರಾಮದ ಗುಂಡಪ್ಪ ಜಮಾದಾರ, ಉಮೇಶ ಗುತ್ತೇದಾರ, ದತ್ತು ಬಾವಿಮನಿ, ಸುಧಾಕರ, ತುಕಾರಾಮ ಮೇಲಿನಕೇರಿ ಮತ್ತಿತರರು ಇದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next