Advertisement
ಮೈಸೂರು ಮಹಾ ನಗರಪಾಲಿಕೆ ವತಿಯಿಂದ ನಗರದ ಹೆಬ್ಟಾಳದ ಬಸವನಗುಡಿ ಉದ್ಯಾನದಲ್ಲಿ ಆಯೋಜಿಸಿದ್ದ ಕ್ಲೀನ್ ಮೈಸೂರು ಸ್ವಚ್ಛತಾ ಅಭಿಯಾನದ 2ನೇ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮೈಸೂರಿನ ಸ್ವಚ್ಛತಾ ರಾಯಭಾರಿ, ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಮುಂದಾಳತ್ವದಲ್ಲಿ ಸಾರ್ವಜನಿಕರಿಗೆ ಸ್ವಚ್ಛತೆಯ ಬಗ್ಗೆ ತಿಳುವಳಿಕೆ ಮೂಡಿಸಲಾಯಿತು.
Related Articles
Advertisement
ಸ್ವಚ್ಛತಾ ಸಂಕಲ್ಪ ಮಾಡಿ: ರಾಮಕೃಷ್ಣ ಆಶ್ರಮದ ಮೋಕ್ಷ ಆತ್ಮಾನಂದ ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯೂ ಹೊರಗೆ ಕಸ ಬಿಸಾಡುವುದಿಲ್ಲ ಎಂದು ಸಂಕಲ್ಪ ಮಾಡಬೇಕು. ಹೀಗೆ ಸಂಕಲ್ಪ ಮಾಡುವುದರಿಂದ ಮಾತ್ರ ಸಿದ್ಧಿ ದೊರೆಯಲು ಸಾಧ್ಯವಾಗುತ್ತದೆ. ಅಲ್ಲದೆ ಪ್ರತಿಯೊಬ್ಬರಿಗೂ ಸ್ವಚ್ಛತೆ ಅರಿವು ಮುಖ್ಯವಾಗಿದ್ದು, ಆಗ ಮಾತ್ರ ಮೈಸೂರು ಸ್ವಚ್ಛ ಮೈಸೂರಾಗಿ ರೂಪುಗೊಳ್ಳಲಿದೆ ಎಂದರು.
ಜನರಲ್ಲಿ ಸ್ವಚ್ಛತೆ ಅರಿವು: ಹೆಬ್ಟಾಳಿನಲ್ಲಿ ನಡೆದ ಸ್ವಚ್ಛತಾ ಅಭಿಯಾನದ ಅಂಗವಾಗಿ ಜನರಿಗೆ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲಾಯಿತು. ಅಭಿಯಾನದ ಸಂದರ್ಭ ಮನೆ ಮನೆಗೆ ತೆರಳಿದ ಸ್ವಚ್ಛತಾ ರಾಯಭಾರಿಗಳು ಹಾಗೂ ಇನ್ನಿತರ ಗಣ್ಯರು ಸ್ವಚ್ಛತೆಗೆ ಸಂಬಂಧಿಸಿದ ಭಿತ್ತಿಪತ್ರಗಳನ್ನು ಹಂಚಿದರು. ಇದೇ ವೇಳೆ ವಿದ್ಯಾರ್ಥಿಗಳು ಸ್ವಚ್ಛತೆಗೆ ಸಂಬಂಧಿಸಿದಂತೆ ಪ್ರತಿಜಾnವಿಧಿ ಸ್ವೀಕರಿಸಿದರು.
ಬಳಿಕ ನಡೆದ ಸಹಿ ಸಂಗ್ರಹ ಕಾರ್ಯಕ್ರಮದಲ್ಲಿ ಹಾಜರಿದ್ದ ಸಾರ್ವಜನಿಕರು ಸ್ವಚ್ಛತೆಗೆ ಕೈ ಜೋಡಿಸುವುದಾಗಿ ಸಹಿ ಹಾಕಿದರು. ಈ ಸಂದರ್ಭದಲ್ಲಿ ಮೇಯರ್ ಎಂ.ಜೆ.ರವಿಕುಮಾರ್, ವಿಧಾನ ಪರಿಷತ್ ಸದಸ್ಯ ಡಿ.ಮಾದೇಗೌಡ, ಮಾಜಿ ಉಪ ಮೇಯರ್ ಮಹದೇವಪ್ಪ ಹಾಗೂ ಇನ್ನಿತರರು ಭಾಗವಹಿಸಿದ್ದರು.
ಮಕ್ಕಳು ಬದಲಾದರೆ ಕುಟುಂಬವೇ ಬದಲಾಗಲಿದೆ. ಹೀಗಾಗಿ ಇಂದಿನ ಸಮಾಜದಲ್ಲಿ ಮಕ್ಕಳಿಂದಲೇ ಬದಲಾವಣೆ ಆಗಬೇಕಿದೆ. ಸ್ವಚ್ಛತೆ ಬಗ್ಗೆ ಮೈಸೂರಿನ ಜನರಲ್ಲಿ ಜಾಗೃತಿ ಇದ್ದು, ಪೂರ್ಣ ಪ್ರಮಾಣದಲ್ಲಿ ಇದು ಸಾಕಾರಗೊಳಿಸುವ ಪ್ರಯತ್ನ ಮಾಡಬೇಕಿದೆ. ಈ ಪ್ರಯತ್ನ ಸಫಲವಾದಲ್ಲಿ ನಾವು ಮತ್ತೂಮ್ಮೆ ಸ್ವಚ್ಛ ನಗರಿ ಪಟ್ಟ ಪಡೆಯಲಿದ್ದೇವೆ.-ಜಿ.ಜಗದೀಶ್, ಪಾಲಿಕೆ ಆಯುಕ್ತ