Advertisement

ಸಂಪ್‌ ಸ್ವಚ್ಛಗೊಳಿಸಲು ಹೋದವರು ವಿದ್ಯುತ್‌ಗೆ ಬಲಿ

12:22 PM Mar 24, 2017 | |

ಬೆಂಗಳೂರು: ಹೋಟೆಲ್‌ನ ನೀರಿನ ಸಂಪ್‌ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ವಿದ್ಯುತ್‌ ಸ್ಪರ್ಶಿಸಿ ವ್ಯವಸ್ಥಾಪಕ ಸೇರಿ ಇಬ್ಬರು ಮೃತಪಟ್ಟಿರುವ ಘಟನೆ ದೊಮ್ಮಲೂರಿನ ಶ್ರೀನಿಧಿ ಸಾಗರ್‌ ಹೋಟೆಲ್‌ನಲ್ಲಿ ಗುರುವಾರ ಸಂಜೆ ನಡೆದಿದೆ. ಹೋಟೆಲ್‌ ವ್ಯವಸ್ಥಾಪಕ ಕುಂದಾಪುರ ಮೂಲದ ವಿಶ್ವನಾಥ್‌ (39) ಮತ್ತು ಸಿಬ್ಬಂದಿ ಭದ್ರಾವತಿಯ ಗುರು(26) ಮೃತರು.

Advertisement

ಕುಂದಾಪುರ ಮೂಲದ ಉದ್ಯಮಿ ಶ್ರೀನಿಧಿ ಸಾಗರ್‌ ಹೋಟೆಲ್‌ನ ಮಾಲೀಕರಾಗಿದ್ದು, ಇವರ ಸಂಬಂಧಿ ವಿಶ್ವನಾಥ್‌ ಹೋಟೆಲ್‌ನ ವ್ಯವಸ್ಥಾಪಕರಾಗಿದ್ದಾರೆ. ಭದ್ರಾವತಿಯ ಗುರು ವಾರದ ಹಿಂದೆ ಕೆಲಸಕ್ಕೆ ಸೇರಿಕೊಂಡಿದ್ದ. ದುರಸ್ಥಿಗೊಂಡಿದ್ದ ಸಂಪ್‌ ಸ್ವಚ್ಛಗೊಳಿಸಲು ಬಲ್ಪ್ ಹಿಡಿದು ಗುರು ಇಳಿದಿದ್ದಾನೆ.

ಈ ವೇಳೆ ಬಲ್ಪ್ ಒಡೆದು ನೀರಿಗೆ ವೈಯರ್‌ ಬಿದಿದ್ದೆ. ಅಲ್ಲದೇ ಸಂಪ್‌ನಲ್ಲಿದ್ದ ಮೋಟರ್‌ ಕೂಡ ಚಾಲನೆಯ ಲ್ಲಿತ್ತು. ಈ ವೇಳೆ ವಿದ್ಯುತ್‌ ಸ್ಪರ್ಶಿಸಿ ಗುರು ಪ್ರಜ್ಞೆ ಕಳೆದುಕೊಂಡಿದ್ದಾನೆ. ಕೂಡಲೇ ಕೂಗಿಕೊಂಡು ಆತ ನೀರಿನಲ್ಲಿ ಮುಳುಗಿದ್ದಾನೆ. ಕೂಡಲೇ ಮ್ಯಾನೇಜರ್‌ ವಿಶ್ವನಾಥ್‌ ಸಂಪ್‌ಗೆ ಇಳಿದು ಗುರು ರಕ್ಷಿಸಲು ಯತ್ನಿಸಿದ್ದು, ಈತನಿಗೂ ಸಹ ವಿದ್ಯುತ್‌ ಪ್ರವಹಿಸಿದೆ.

ಕೂಡಲೇ ಮೋಟರ್‌ ನಿಲ್ಲಿಸಿ ಪ್ರಜ್ಞೆ ಕಳೆದುಕೊಂಡಿದ್ದ ಇಬ್ಬರನ್ನು ಮೇಲೆತ್ತಿ ಮಣಿಪಾಲ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫ‌ಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಪ್ರಕರಣ ಹಲಸೂರು ಠಾಣೆಯಲ್ಲಿ ದಾಖಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next