Advertisement

ಸುಂದರ ನಗರ ನಿರ್ಮಾಣಕ್ಕೆ ಸ್ವತ್ಛ ಪರಿಸರ ಅಗತ್ಯ: ಔದ್ರಾಮ

04:30 PM Sep 29, 2018 | |

ವಿಜಯಪುರ: ಪ್ರತಿಯೊಬ್ಬ ನಾಗರಿಕರು ತಮ್ಮ ಮನೆ, ಅಂಗಳ ಮತ್ತು ಸುತ್ತ ಮುತ್ತಲಿನ ಪ್ರದೇಶದಲ್ಲಿ ಸ್ವತ್ಛತೆ ಕಾಪಾಡಲು ಮುಂದಾದಲ್ಲಿ ಮಾತ್ರ ವಿಜಯಪುರ ಸುಂದರ ನಗರವಾಗಲು ಸಾಧ್ಯ ಎಂದು ಮಹಾನಗರ ಪಾಲಿಕೆ ಆಯುಕ್ತ ಔದ್ರಾಮ್‌ ಹೇಳಿದರು.

Advertisement

ಕೇಂದ್ರ ಸರಕಾರದ ಕ್ಷೇತ್ರ ಜನ ಸಂಪರ್ಕ ಕಾರ್ಯಾಲಯ, ವಿಜಯಪುರ, ಮಹಾನಗರ ಪಾಲಿಕೆ, ಶಿಶು ಅಭಿವೃದ್ಧಿ ಯೋಜನೆ, ನೆಹರು ಯುವ ಕೇಂದ್ರ, ಬಂಜಾರಾ ಕಲಾ, ವಾಣಿಜ್ಯ ಮತ್ತು ವಿರ್ಜಾನ ಕಾಲೇಜು ಹಾಗೂ ಸ್ವತ್ಛ ಭಾರತ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದ್ದ ಸ್ವತ್ಛ ಭಾರತ ಮಿಷನ್‌ (ನಗರ) ಕುರಿತ ವಿಶೇಷ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವತ್ಛತೆ ಕಾಪಾಡಬೇಕೆನ್ನುವ ಜಾಗೃತಿ ನಾಗರಿಕರಲ್ಲಿ ಇನ್ನೂ ಪೂರ್ಣ ಪ್ರಮಾಣದಲ್ಲಿ ಮೂಡಿ ಬಂದಿಲ್ಲ. ಆದ್ದರಿಂದ ಮುಂದಿನ
ದಿನಗಳಲ್ಲಾದರೂ ಎಲ್ಲರ ಮನಸ್ಸಿನಲ್ಲಿ ಬದಲಾವಣೆ ಗಾಳಿ ಬೀಸಲಿ ಎಂದು ಆಶಿಸಿದರು.

ಕಸ ನಿರ್ವಹಣೆಗೆ ಪಾಲಿಕೆ ಜೊತೆಗೆ ನಾಗರಿಕರು ಸಹಕರಿಸಿದರೆ ಕಸ ನಿರ್ವಹಣೆಗೆ ಮಾಡುತ್ತಿರುವ ಜನರ ತೆರಿಗೆ ಹಣವನ್ನು ಉಳಿಸಬಹುದಾಗಿದೆ ಎಂದ ಅವರು, ವಿಜಯಪುರ ನಗರವನ್ನು ಸುಂದರವಾಗಿಸಲು ಸಾರ್ವಜನಿಕರು ಪಾಲಿಕೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
 
ಕ್ಷೇತ್ರ ಜನ ಸಂಪರ್ಕ ಅಧಿಕಾರಿಗಳಾದ ಜಿ.ತುಕಾರಾಮಗೌಡ ಪ್ರಾಸ್ತಾವಿಕ ಮಾತನಾಡಿ, ಪರಿಸರ ಮಾಲಿನ್ಯದಿಂದ ಸುಮಾರು 60ಕ್ಕೂ ಹೆಚ್ಚು ಕಾಯಿಲೆಗಳು ಹಬ್ಬುತ್ತಿವೆ. ಇದನ್ನು ನಿಯಂತ್ರಿಸಲು ಸ್ವತ್ಛತೆಗೆ ಹೆಚ್ಚಿನ ಗಮನ ಹರಿಸಬೇಕು. ಮಹಿಳೆಯರು ಮನೆ ಕಾಯಿಲೆಗಳ ನಿಯಂತ್ರಣಕ್ಕೆ ಸಹಕರಿಸಬೇಕು. ಕಸ ಗುಡಿಸಿದಾಗ ಯಾವುದೇ ಕಾರಣಕ್ಕೂ ತ್ಯಾಜ್ಯವನ್ನು ಮೋರಿಗೆ ಹಾಕಬಾರದು. 

ಇದರಿಂದ ಚರಂಡಿಗಳಲ್ಲಿ ಕೊಳಚೆ ನಿರ್ಮಾಣವಾಗಿ ರೋಗಾಣು ಸೃಷ್ಟಿಯಾಗಿ ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗಲಿದೆ ಎಂದರು. ಪಾಲಿಕೆ ಪರಿಸರ ಅಭಿಯಂತರ ಎಸ್‌.ಆರ್‌. ಜಗದೀಶ ಮಾತನಾಡಿ, ನಗರದಲ್ಲಿ 3.50 ಲಕ್ಷ ಜನಸಂಖ್ಯೆಯಿದ್ದು ನಿತ್ಯವೂ ಸುಮಾರು 125 ಟನ್‌ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ನಗರದ ಹೊರ ವಲಯದಲ್ಲಿ 34 ಎಕರೆ ಪ್ರದೇಶದಲ್ಲಿ ತ್ಯಾಜ್ಯ ಸಂಗ್ರಹಿಸಲಾಗುತ್ತಿದೆ. 

ಅದರೆ ದಿನ ಕಳೆದಂತೆ ತ್ಯಾಜ್ಯ ಹೆಚ್ಚಾದರೆ ಅದರ ಶೇಖರಣೆಗೆ ಸ್ಥಳಾಭಾವ ಸೃಷ್ಟಿಯಾಗಲಿದೆ. ಈ ಸಮಸ್ಯೆ ಪರಿಹಾರಕ್ಕೆ ಪ್ರತಿ
ಮನೆಗಳಲ್ಲಿ ಕಸವನ್ನು ಗೊಬ್ಬರವನ್ನಾಗಿ ಪರಿವರ್ತಿಸಿಕೊಳ್ಳಬೇಕು. ಇದರಿಂದ ಕಸ ನಿರ್ವಹಣೆಗೆ ಮಾಡುತ್ತಿರುವ ಜನರ ತೆರಿಗೆ ಹಣ ಉಳಿಸಬಹುದಾಗಿದೆ ಎಂದರು.

Advertisement

ಐಸಿಡಿಎಸ್‌ ಮೇಲ್ವಿಚಾರಕಿ ಅಶ್ವಿ‌ನಿ ಸನಿದಿ ಮಾತನಾಡಿ, ಊಟ ಮಾಡುವ ಮುನ್ನ ಕೈ ತೊಳೆದು ಆಹಾರ ಸೇವೆನೆ ಮಾಡಿದಲ್ಲಿ ರೋಗಗಳಿಂದ ದೂರ ಇರಲು ಸಾಧ್ಯವಿದೆ. ಇದಕ್ಕಾಗಿ ಪ್ರತಿಯೊಬ್ಬರೂ ಸ್ವತ್ಛತೆಗೆ ಆದ್ಯತೆ ನೀಡಬೇಕು ಎಂದರು. 

ಚಿತ್ರಕಲೆ, ರಂಗೋಲಿ ಮತ್ತು ಆಶುಭಾಷಣ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಚೈತನ್ಯ ಕಲಾ ತಂಡ, ಹಂಸ ಧ್ವನಿ ಜನ ಜಾಗೃತಿ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ಮೂಲಕ ಸ್ವತ್ಛತೆ ಬಗ್ಗೆ ಅರಿವು ಮೂಡಿಸಲಾಯಿತು. ಮೇಯರ್‌ ಶ್ರೀದೇವಿ ಲೋಗಾಂವಿ ಕಾರ್ಯಕ್ರಮ ಉದ್ಘಾಟಿಸಿದರು. ಬಂಜಾರಾ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಿ.ಎಲ್‌. ಚವ್ಹಾಣ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಯುವ ಸಮನ್ವಯಾಧಿಕಾರಿ ಡಿ.ದಯಾನಂದ, ಜಿ.ಕೆ. ಅಗಸರ, ಮುರಳೀಧರ ಕಾರಭಾರಿ, ಸೋಮಶೇಖರ ರಾಥೋಡ ಮತ್ತು ಕಾಲೇಜಿನ ಉಪನ್ಯಾಸಕರು, ಅಂಗನವಾಡಿ ಕಾರ್ಯಕರ್ತೆಯರು, ಸ್ವಸಹಾಯ ಸಂಘದ ಸದಸ್ಯರು ಮತು ಪಾಲಿಕೆ ಸಿಬ್ಬಂದಿ ಇದ್ದರು. ಇದಕ್ಕೂ ಮುನ್ನ ನಗರದ ವಿವಿಧ ವಾರ್ಡ್‌ಗಳಲ್ಲಿ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು. ಪಾಲಿಕೆ ಸದಸ್ಯ ಎಂ.ಎಸ್‌. ಕರಡಿ ಮೆರವಣಿಗೆಗೆ ಚಾಲನೆ ನೀಡಿದರು. ಸಿ.ಕೆ. ಸುರೇಶ ನಿರೂಪಿಸಿದರು. ಎ.ಪಿ. ಬಿರಾದಾರ ಸ್ವಾಗತಿಸಿದರು. ವಿಜಯಕುಮಾರ ಕೋತವಾಲ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next