ಕಲಾದಗಿ: ಸಮೀಪದ ಉದಗಟ್ಟಿ ಶುದ್ಧ ಕುಡಿಯುವ ನೀರಿನ ಘಟಕ ಪದೇ ಪದೇ ರಿಪೇರಿಗೆ ಬರುತ್ತಿದ್ದು, ನಾಮಕಾವಾಸ್ತೆ ದುರಸ್ತಿ ಕೈಗೊಳ್ಳಲಾಗುತ್ತಿದೆ ಎಂಬ ಆರೋಪ ಕೇಳಬಂದಿದೆ.
ಜನರು ಶುದ್ಧ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಬೇಸಿಗೆಯಲ್ಲಿ ದುರಸ್ತಿಗೆ ತುರ್ತು ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿರುವ ಉದಗಟ್ಟಿ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಅಸಮದಾನ ವ್ಯಕ್ತ ಪಡಿಸಿದ್ದಾರೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ರಿಪೇರಿಗೆ ಬಂದು ಒಂದು ತಿಂಗಳ ಕಾಲ ಬಂದ್ ಆಗಿತ್ತು, ದುರಸ್ತಿ ಮಾಡಿ ನೀರು ಲಭ್ಯವಾಗುವಂತೆ ಮಾಡಲಾಗಿತ್ತು. ಈಗ ಮತ್ತೆ ರಿಪೇರಿಗೆ ಬಂದಿದ್ದು, ವಾರದಿಂದ ಬಂದ್‌ಆಗಿದೆ. ಪದೇ ಪದೇ ದುರಸ್ತಿಗೆ ಬರುವ ಗ್ರಾಮದಶುದ್ಧ ಕುಡಿಯುವ ನೀರಿನ ಘಟಕ ಗ್ರಾಮಸ್ಥರಿಗೆಇದ್ದು ಇಲ್ಲದಂತಾಗಿದೆ, ದುರಸ್ತಿಗೊಳಿಸಿದ ಕೆಲವೇ ದಿನ ಮಾತ್ರ ನೀರು ಬಂದು, ಮತ್ತೆ ದುರಸ್ತಿಗೆ ಬಂದು ನಿಲ್ಲುತ್ತದೆ. ಇಂತಹ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಗ್ರಾಮಸ್ಥರು ಬೇಸತ್ತಿದ್ದಾರೆ. ಗ್ರಾಮೀಣಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ,ಪಂಚಾಯತ್ ರಾಜ್ ಇಲಾಖೆ ಅಧಿ ಕಾರಿಗಳು ಗಮನಹರಿಸುತ್ತಿಲ್ಲ.
ಗ್ರಾಮದಲ್ಲಿ 1,500 ಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ. ಮೂರ್‍ನಾಲ್ಕು ಕಿಲೋಮೀಟರ್ ದೂರದಗ್ರಾಮ ಜುನ್ನೂರು ಗ್ರಾಮಕ್ಕೆ ಇಲ್ಲವೇ ಪಕ್ಕದ ಶಾರದಾಳಗ್ರಾಮಕ್ಕೆ ಹಣ ಖರ್ಚು ಮಾಡಿ ಶುದ್ದ ಕುಡಿಯುವನೀರು ತರುವಂತಾಗಿದೆ. ಘಟಕವನ್ನು ಸಮರ್ಪಕವಾಗಿದುರಸ್ತಿಗೊಳಿಸಿ ಉದಗಟ್ಟಿ ಗ್ರಾಮಸ್ಥರ ನೀರಿಗಾಗಿ ಅಲೆದಾಟ ತಪ್ಪಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಗ್ರಾಮದಲ್ಲಿರುವ ಶುದ್ಧ ಕುಡಿಯುವನೀರಿನ ಘಟಕ ಬರೀ ದುರಸ್ತಿಗೆ ಬರುತ್ತಿದೆ.ಇದ್ದು ಇಲ್ಲದಂತಾಗಿರುವ ನೀರಿನ ಘಟಕದಸಮರ್ಪಕ ದುರಸ್ತಿಯಾಗುತ್ತಿಲ್ಲ. ಈ ನೀರಿನಘಟಕದ ಬದಲು ಹೊಸ ಘಟಕ ಮಂಜೂರು ಮಾಡಿಸಿ ಜನರಿಗೆ ಅನುಕೂಲ ಮಾಡಬೇಕು.
-ರಾಜು ಕಮನಾರ್, ಉದಗಟ್ಟಿ ಗ್ರಾಮಸ್ಥ
ಘಟಕ ದುರಸ್ತಿ ಟೆಂಡರ್ ಏಜೆನ್ಸಿಯವರಿಗೆ ಕರೆ ಮಾಡಿ ಮಾತನಾಡಿ ಶೀಘ್ರ ದುರಸ್ತಿಕೈಗೊಳ್ಳಲು ತಿಳಿಸಲಾಗಿದೆ. ಮತ್ತೂಮ್ಮೆ ದುರಸ್ತಿಮಾಡಲು ಸೂಚನೆ ನೀಡಲಾಗುವುದು. ವಿಳಂಬಮಾಡಿದಲ್ಲಿ ಸೂಕ್ತ ಕ್ರಮಕ್ಕೆ ಮೇಲಧಿಕಾರಿಗೆ ತಿಳಿಸಲಾಗುವುದು
– ಆರ್.ವಾಯ್. ಅಪ್ಪನ್ನವರ್, ಖಜ್ಜಿಡೋಣಿ ಗ್ರಾಪಂ, ಪ್ರಭಾರ ಪಿಡಿಒ
ಚಂದ್ರಶೇಖರ ಹಡಪದ