ಪಿರಿಯಾಪಟ್ಟಣ: ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಇದೆ. ಜನರಿಗೆ ಕಾವೇರಿ ನೀರುಣಿಸುವ ಕೆಲಸ ಮಾಡಿರುವುದು ಶ್ಲಾಘನೀಯ ಕೆಲಸ. 3 ಗ್ರಾಪಂ ವ್ಯಾಪ್ತಿಯ 25ಕ್ಕೂ ಹೆಚ್ಚು ಗ್ರಾಮಗಳಿಗೆ ಕುಡಿಯುವ ನೀರನ್ನು ಒದಗಿಸಲಿದೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ತಾಲೂಕಿನ ಕಣಗಾಲು, ಕೊಪ್ಪ ಮತ್ತು ದೊಡ್ಡ ಹರವೆ ಗ್ರಾಮಗಳಲ್ಲಿ ಕಾವೇರಿ ನದಿ ಮೂಲದಿಂದ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಿ ಮಾತನಾಡಿ, ಲಾಕ್‌ಡೌನ್ ಸಮಸ್ಯೆಯನ್ನು ಎದುರಿಸಲು ಸರ್ಕಾರಗಳು ಬದ್ಧವಾಗಿವೆ. ಮೆ 31ರ ನಂತರ ಕೇಂದ್ರದ ಆದೇಶದ ಮೇರೆಗೆ ರಾಜ್ಯ ಸರ್ಕಾರ ಕೆಲವು ಮಹತ್ವದ ನಿರ್ಣಯ ಕೈಗೊಳ್ಳಲಿದೆ.
ಲಾಕ್ ಡೌನ್ ಸಡಿಲಿಗೆ ನಂತರ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿದೆ. ಸರ್ಕಾರದ ಆದೇಶವನ್ನು ಪಾಲಿಸುವ ಮೂಲಕ ಆರೋಗ್ಯವನ್ನು ರಕ್ಷಿಸಿಕೊಳ್ಳಬೇಕು. ಅಭಿವೃದಿಯೇ ನಮ್ಮ ಸರ್ಕಾರದ ಮೂಲ ಮಂತ್ರವಾಗಿದ್ದು, ತಾಲೂಕಿನ ಸಮಗ್ರ ಅಭಿವೃದಿಗೆ ಅಗತ್ಯ ಸಹಕಾರ ನೀಡಲಾಗುವುದು ಎಂದರು.
ಡೀಸಿ ಅಭಿರಾಮ್ ಜಿ.ಶಂಕರ್, ಶಾಸಕ ಕೆ.ಮಹದೇವ್, ಸಂಸದ ಪ್ರತಾಪ್ ಸಿಂಹ, ಜಿಪಂ ಸಿಇಒ ಪ್ರಶಾಂತ್ ಕುಮಾರ್ ಮಿಶ್ರ, ಹುಣಸೂರು ಉಪವಿಭಾಗಧಿಕಾರಿ ಬಿ.ಎನ್.ವೀಣಾ, ತಹಶೀಲ್ದಾರ್ ಶ್ವೇತಾ ಎನ್.ರವೀಂದ್ರ, ತಾಪಂ ಇಒ ಡಿ.ಸಿ.ಶೃತಿ, ಜಿಪಂ ಅಧ್ಯಕ್ಷೆ ಪರಿಮಳ ಶ್ಯಾಂ, ಉಪಾಧ್ಯಕ್ಷೆ ಗೌರಮ್ಮ, ಸದಸ್ಯರಾದ ಜಯಕುಮಾರ್, ರಾಜೇಂದ್ರ, ಮಂಜುನಾಥ್, ರುದ್ರಮ್ಮ,
ತಾಪಂ ಸದಸ್ಯರಾದ ರಾಮು, ಆರ್.ಎಸ್.ಮಹದೇವ್, ಮಾನು ಇನಾಯತ್, ಜಯಂತಿ, ಮಲ್ಲಿಕಾರ್ಜುನ್, ರಂಗಸ್ವಾಮಿ, ಸುಮಿತ್ರಾ, ಮೋಹನ್ ರಾಜ, ಮುತ್ತು, ಗ್ರಾಪಂ ಅಧ್ಯಕ್ಷ ಸುಂದರೇಶ್, ರೇಣುಕಮ್ಮ, ಭಾಗ್ಯಮ್ಮ ಹಾಜರಿದ್ದರು.