ಮುಂಡರಗಿ: ಪಟ್ಟಣದ ಜನರಿಗೆ ನಿರಂತರವಾಗಿ24 ಗಂಟೆ ಶುದ್ಧ ಕುಡಿಯುವ ನೀರು ಒದಗಿಸುವಯೋಜನೆ ಕಾಮಗಾರಿ ಕಳೆದ ಮೂರುವರ್ಷಗಳಿಂದ ಪೂರ್ಣಗೊಳ್ಳದೇ ಸ್ಥಗಿತಗೊಂಡಿದೆ.ಇದರಿಂದ ಪಟ್ಟಣ ವ್ಯಾಪ್ತಿಯ ಸುಮಾರು 25ಸಾವಿರ ಜನರು ನಿರಂತರ ಕುಡಿಯುವ ನೀರು ಸಿಗದೇ ಪರದಾಡುವಂತಾಗಿದೆ.
ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಜನರು ಶುದ್ಧ ಕುಡಿಯುವ ನೀರುಯೋಜನೆಯಿಂದ ವಂಚಿತ ವಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪಟ್ಟಣದಲ್ಲಿರುವಶುದ್ಧ ನೀರಿನ ಘಟಕಗಳು ಸರಿಯಾಗಿ ಕಾರ್ಯ ನಿರ್ವಹಣೆ ಇಲ್ಲದೇ ಇರುವುದರಿಂದಶುದ್ಧ ಕುಡಿಯುವ ನೀರು ಕುಡಿಯಲುಯೋಗ್ಯವೋ ಅಲ್ಲವೋ ಎಂದು ಜನರು ಪ್ರಶ್ನಿಸುವಂತಾಗಿದೆ.
17.26 ಕೋಟಿ ರೂ. ಕಾಮಗಾರಿ: ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತುಹಣಕಾಸು ಮಂಡಳಿಯಡಿ 17.43 ಕೋಟಿವೆಚ್ಚದಲ್ಲಿ ಪುರಸಭೆ ವ್ಯಾಪ್ತಿಯ ಜನರಿಗೆ 24ಗಂಟೆ ನಿರಂತರವಾಗಿ ಶುದ್ಧ ಕುಡಿಯುವ ನೀರಿನ ಯೋಜನೆ ಕಾಮಗಾರಿ 2018ರ ಫೆಬ್ರವರಿಯಲ್ಲಿಆರಂಭವಾಗಿ ಸ್ಥಗಿತಗೊಂಡಿದೆ. ಮೇಲ್ಮಟ್ಟದಜಲಸಂಗ್ರಹಾಗಾರದ ಕಾಮಗಾರಿಗೆ ಕಾಲಂಹಾಕಿರುವುದು ಮತ್ತು ಪಟ್ಟಣದ ವಾರ್ಡ್‌ಗಳಲ್ಲಿ ನೀರು ಸರಬರಾಜು ಮಾಡಲು ಪೈಪ್‌ಲೈನ್‌ಹಾಕಿದ್ದು ಬಿಟ್ಟರೆ ಕಾಮಗಾರಿಯಲ್ಲಿ ಯಾವುದೇ ಪ್ರಗತಿ ಇಲ್ಲವಾಗಿದೆ.
23 ವಾರ್ಡ್‌ಗಳಿಗೆ ಶುದ್ಧ ನೀರು: ಪಟ್ಟಣದ 23 ವಾರ್ಡ್‌ಗಳಲ್ಲಿರುವ ಮನೆಗಳ 5509ನಲ್ಲಿಗಳಿಗೆ ನಿರಂತರವಾಗಿ ದಿನದ 24 ಗಂಟೆ ಶುದ್ಧಕುಡಿಯುವ ನೀರು ಒದಗಿಸುವ ಈ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ವಾರ್ಡ್‌ನಲ್ಲಿ ನೀರುಸರಬರಾಜು ಮಾಡಲು ಅಂದಾಜು 121 ಕಿಮೀಪೈಪ್‌ಲೈನ್ ಕಾಮಗಾರಿ ಪೂರ್ಣವಾಗಬೇಕಿದೆ.ಆದರೆ, ಈಗ ಬರೀ 69 ಕಿಮೀ ವ್ಯಾಪ್ತಿಯಲ್ಲಿ ಮಾತ್ರ ಪೈಪ್‌ಲೈನ್ ಕಾಮಗಾರಿ ನಡೆದಿದೆ ಎನ್ನಲಾಗುತ್ತಿದೆ. ಅಂದರೆ, ಶೇ. 50ರಷ್ಟು ಪೈಪ್‌ಲೈನ್ ಕಾಮಗಾರಿ ಇನ್ನೂ ಬಾಕಿ ಉಳಿದಿದೆ. ಮೇಲ್ಮಟ್ಟದ ಜಲ ಸಂಗ್ರಹಾಗಾರ(ಟ್ಯಾಂಕ್)ದ ಕಾಮಗಾರಿ ನೆಲ ಬಿಟ್ಟು ಮೇಲಕ್ಕೆ ಏಳುತ್ತಿಲ್ಲ.
ಪಟ್ಟಣದ ಜನತೆಗೆ ನಿರಂತರವಾಗಿ ಶುದ್ಧ ಕುಡಿಯುವ ನೀರು ಒದಗಿಸುವ ಈ ಯೋಜನೆಯ ಕಾಮಗಾರಿ ಸ್ಥಗಿತಗೊಂಡಿದ್ದು,ಜಲ ಸಂಗ್ರಹಾಗಾರದ ಕಾಲಮ್‌ಗಳು ಕಾಣುತ್ತಿವೆ.ಪಟ್ಟಣದ ಜನರು ಇನ್ನೆಷ್ಟು ದಿನ ಶುದ್ಧ ಕುಡಿಯುವ ನೀರಿಗೆ ಕಾಯಬೇಕೋ ಎನ್ನುವಂತಾಗಿದೆ.
ಕಾಮಗಾರಿ ನಡೆಸುತ್ತಿರುವ ಖಾಸಗಿ ಕಂಪನಿಗೆಈಗಾಗಲೇ ನಾಲ್ಕೈದು ನೋಟಿಸ್‌ಗಳನ್ನು ನೀಡಲಾಗಿದೆ. ವಿಳಂಬದಕುರಿತು ಯಾವದೇ ಸ್ಪಷ್ಟಕಾರಣವನ್ನು ಕಂಪನಿ ನೀಡುತ್ತಿಲ್ಲ. –
ಸಂತೋಷ ಕುಮಾರ ಎಸ್., ಕಾಮಗಾರಿ ಮೇಲುಸ್ತುವಾರಿ ಅಧಿಕಾರಿ
ನಿರಂತರವಾಗಿ ಶುದ್ಧ ಕುಡಿಯುವ ನೀರುಯೋಜನೆ ಕರ್ನಾಟಕ ನಗರ ಮೂಲಭೂತಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದಮೇಲುಸ್ತುವಾರಿಯಲ್ಲಿ ಕಾಮಗಾರಿ ನಡೆಯುತ್ತಿದೆ.ಕಾಮಗಾರಿ ವಿಳಂಬದ ಬಗ್ಗೆ ನೋಟೀಸ್ ನೀಡಿದ್ದರೂ,ಕಾಮಗಾರಿ ನಿರ್ವಹಿಸುತ್ತಿರುವ ಖಾಸಗಿ ಕಂಪನಿ ಸ್ಪಂದಿಸುತ್ತಿಲ್ಲ.
–ವೀರೇಂದ್ರಸಿಂಗ್ ಕಾಟೇವಾಲೆ, ಪುರಸಭೆ ಅಭಿಯಂತರ
ಕಾಮಗಾರಿಗೆ ಸಂಬಂಧಿಸಿ ಈಗಾಗಲೇ ಮೂರು ಸಭೆಗಳು ನಡೆದಿವೆ. ಕಾಮಗಾರಿ ಪೂರ್ಣಗೊಳಿಸಲು ನೋಟಿಸ್ ಕೂಡಾ ನೀಡಲಾಗಿದೆ. ಹೈದರಾಬಾದಿನ ಖಾಸಗಿ ಕಂಪನಿ ಕಾಮಗಾರಿ ನಿರ್ವಹಿಸುತ್ತಿದ್ದು, ಕಾಮಗಾರಿಯನ್ನು ಪೂರ್ಣಗೊಳಿಸಲು ವಿಳಂಬ ಮಾಡುತ್ತಿದೆ.
–ಎನ್.ಕೆ. ಡೊಂಬರ, ಪುರಸಭೆ ಮುಖ್ಯಾಧಿಕಾರಿ
– ಹು.ಬಾ. ವಡ್ಡಟ್ಟಿ