Advertisement

ಗ್ರಾಮದ ಪ್ರತಿಯೊಬ್ಬರ ಜನ್ಮದಿನಕ್ಕೂ ಗಿಡನೆಟ್ಟು ಪೋಷಿಸುವ ಕ್ಲೀನ್ ಅಂಡ್ ಗ್ರೀನ್ ಫೋರ್ಸ್

10:37 AM May 12, 2020 | keerthan |

ಗಂಗಾವತಿ: ತಾಲೂಕಿನ ಶ್ರೀರಾಮನಗರದಲ್ಲಿ ಇರುವ ಕ್ಲೀನ್ ಅಂಡ್ ಗ್ರೀನ್ ಪೋರ್ಸ್ ಪರಿಸರ ಸಂರಕ್ಷಣೆ ಮತ್ತು ಸ್ವಚ್ವತಾ ಅಭಿಯಾನಕ್ಕೆ ಜಿಲ್ಲೆಯಲ್ಲಿ ಮಾದರಿಯಾಗಿದೆ.

Advertisement

ಗ್ರಾಮದಲ್ಲಿ ಜನ್ಮ ದಿನ ಆಚರಣೆ ಮಾಡುವ ಪರಿಸರ ಆಸಕ್ತಿ ಮತ್ತು ಕಾಳಜಿಯುಳ್ಳವರನ್ನು ಪತ್ತೆ ಮಾಡಿ ಗ್ರಾಮದ ಮಧ್ಯ ಹರಿಯುವ ತುಂಗಭದ್ರಾ ಎಡದಂಡೆ ಕಾಲುವೆ ಉಪಕಾಲುವೆ ಎರಡು ಬದಿಯಲ್ಲಿ ಮತ್ತು ಶಾಲಾ ಕಾಲೇಜು ಜೆಸ್ಕಾಂ ಮತ್ತು ಗ್ರಾ.ಪಂ.ಕಾರ್ಯಾಲಯದ ಆವರಣದಲ್ಲಿ ಸಸಿ ನೆಟ್ಟು ಪೋಷಣೆ ಮಾಡುವ ಜವಾಬ್ದಾರಿ ನೀಡಲಾಗುತ್ತದೆ. ಆಗಾಗ ಕ್ಲೀನ್ ಅಂಡ ಗ್ರೀನ್ ಪೋರ್ಸ್ ತಂಡದವರು ಭೇಟಿ ನೀಡಿ ಸಸಿಗಳ ಬೆಳವಣಿಗೆ ಪರಿಶೀಲಿಸುತ್ತಾರೆ.

ಪರಿಸರ ಪ್ರಜ್ಞೆ: ಜನರಿಗೆ ಪರಿಸರ ಸಂರಕ್ಷಣೆ ಜಾಗೃತಿ ಮೂಡಿಸಲು ಕ್ಲೀನ್ ಅಂಡ ಗ್ರೀನ್ ಪೋರ್ಸ್ ಕಾರ್ಯ ಮಾಡುತ್ತಿದೆ. ಶ್ರೀರಾಮನಗರದ ಪ್ರತಿಯೊಬ್ಬರು ಸಂಸ್ಥೆ ಜತೆ ಕೈಜೋಡಿಸಿದ್ದು ಜನ್ಮದಿನ ಮದುವೆ ವಾರ್ಷಿಕೋತ್ಸವ ವಿಶೇಷ ಸಂದರ್ಭದಲ್ಲಿ ಸಸಿ ನೆಟ್ಟು ಪೋಷಣೆ ಮಾಡುವ ಜವಾಬ್ದಾರಿ ನೀಡಲಾಗುತ್ತದೆ. ಸಂಸ್ಥೆ ಪರಿಸರ ಜಾಗೃತಿ ಪ್ಲಾಸ್ಟಿಕ್ ನಿಂದಾಗುವ ತೊಂದರೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಪರಿಸರ ನಾಶ ಮನುಕುಲದ ನಾಶ ಎನ್ನುವ ಮೂಲಕ ಪ್ರತಿಯೊಬ್ಬರಲ್ಲಿ ಅರಣ್ಯದ ಮಹತ್ವ ಸಾರಲಾಗುತ್ತಿದೆ ಎಂದು ಸಂಸ್ಥೆಯ ಚಾಲಕ ಹಾಗೂ ತಾ.ಪಂ.ಸದಸ್ಯ ಮಹಮದ್ ರಫಿ ಉದಯವಾಣಿ ಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next