Advertisement

ಕರ್ನಾಟಕ ಸಂಘ ಕಲಾ ಭಾರತಿಯಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ

04:01 PM Mar 28, 2018 | Team Udayavani |

ಮುಂಬಯಿ: ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ  ಕರ್ನಾಟಕ ಸಂಘ ಮುಂಬಯಿ ಇದರ ಕಲಾವೇದಿಕೆಯಾದ  ಕಲಾಭಾರತಿ ಆಶ್ರಯದಲ್ಲಿ  ಮಾ. 11 ರಂದು ಬೆಳಗ್ಗೆ  10 ರಿಂದ   ಆಮದ್‌ ಪ್ರತಿಷ್ಠಾನದವರ ಪ್ರಾಯೋಜಕತ್ವದಲ್ಲಿ  ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ  ಕಾರ್ಯಕ್ರಮ  ಆಯೋಜಿಸಲಾಗಿತ್ತು.

Advertisement

ಕಲಾವಿದರುಗಳಾದ  ಪ್ರವೀಣ್‌  ಕರಕರೆ ಅವರಿಂದ  ಏಕವ್ಯಕ್ತಿ ತಬಲಾ ವಾದನ  ಮತ್ತು  ಯಾದವರಾಜ್‌ ಫಾಡ್‌ ಅವರಿಂದ ಶಾಸ್ತ್ರೀಯ ಗಾಯನ ನಡೆಯಿತು.  ಪಕ್ಕವಾದಕರಾಗಿ ಸಿದ್ಧೇಶ್‌ ಬಿಚೋಲ್ಕರ್‌ ಮತ್ತು  ಗೋಪಾಲ ಸೂರ್ಯವಂಶಿ ಹಾಗೂ ಅವಿನಾಶ್‌ ಪಾಟೀಲ್‌ ಸಹಕರಿಸಿದರು.  ಸಂಘದ ಸಮರಸ ಭವನದಲ್ಲಿ ಜರಗಿದ ಕಾರ್ಯಕ್ರಮದಲ್ಲಿ  ಕಲಾರಸಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next