Advertisement
ಕೆಲ ತಿಂಗಳ ಹಿಂದಿನ ಕತೆ. ಆ ಶಾಲೆಗೆ ಹೋಗಿ ಮೂರು ದಿವಸದ ಬಳಿಕ ಪಾಠ ಬೋಧನೆಗೆಂದು, 8ನೇ “ಸಿ’ ತರಗತಿಗೆ ಮಾರ್ಗದರ್ಶಕರೊಂದಿಗೆ ಹೋಗಿದ್ದೆ. ಜೊತೆಯಲ್ಲಿ ಶಿಕ್ಷಕ ತರಬೇತಿ ಕೇಂದ್ರದ ಅಧ್ಯಾಪಕಿಯೂ ಇದ್ದರು. ಅಬ್ಟಾ! ತರಗತಿ ಪೂರ್ತಿ ವಿದ್ಯಾರ್ಥಿಗಳು. ಪಾಠ ಬೋಧಿಸುತ್ತಿರುವ ವೇಳೆ ಕೆಲವು ವಿದ್ಯಾರ್ಥಿಗಳ “ತಾಳಮದ್ದಳೆ’ ಬೇರೆ! ಆ ದಿವಸ ನಾನೇನೂ ಮಾತಾಡಿರಲಿಲ್ಲ.
Related Articles
Advertisement
ಇಷ್ಟಾಗುವ ಹೊತ್ತಿಗೆ ನನ್ನ ತರಗತಿಯ ವಿದ್ಯಾರ್ಥಿಗಳೆಲ್ಲರ ಮುಖದಲ್ಲಿಯೂ ಹೂ ನಗು ಅರಳಿತ್ತು. ವಿದ್ಯಾರ್ಥಿಗಳೊಂದಿಗೆ ಚೆನ್ನಾಗಿಯೇ ಬೆರೆತು ಹೋಗಿದ್ದೆ. ದಿನಗಳುರುಳಿ ಓಣಂ ಹಬ್ಬದ ಸಲುವಾಗಿ ವಿದ್ಯಾರ್ಥಿಗಳಿಗೆ ರಜೆ ನೀಡಲಾಗಿತ್ತು. ತರಗತಿ, ಪಾಠ- ಇವು ಯಾವುದೂ ಇಲ್ಲದ ಕಾರಣ ಮನೆಯಲ್ಲಿ ಹಾಯಾಗಿದ್ದೆ. ಅದೊಂದು ದಿವಸ ನನ್ನ ಗೆಳತಿಯರಿಬ್ಬರು ಬಂದು, “ಕಾಸರಗೋಡಿನ ಕುರಿತು ಫಿಲ್ಮ್ ನಾಡಿದ್ದು ಬಿಡುಗಡೆ ಆಗ್ತಿದೆ, ಹೋಗೋಣಾÌ?’ ಎಂದು ನನ್ನಲ್ಲಿ ಕೇಳಿದರು. ನನ್ನ ಕೈಯಲ್ಲಿ ನಯಾಪೈಸೆ ಇಲ್ಲದಿದ್ದುದರಿಂದ, “ನಾನಿಲ್ಲಪ್ಪಾ’ ಎಂದು ಕೈಮುಗಿದೆ. ಅವರಿಬ್ಬರೂ ಫಿಲ್ಮ್ನ ಟ್ರೇಲರ್ ನೋಡಿದ್ದ ಕಾರಣ ಅದನ್ನೇ ಚರ್ಚಿಸುತ್ತಾ, “ಟ್ರೇಲರ್ ತುಂಬಾ ಚೆನ್ನಾಗಿದೆ, ಕಾಸರಗೋಡಿನ ಕುರಿತು ಹೇಳುವ ಆ ವಾಯೆ ಮಜಾ ಇದೆ’ ಎಂದೊಡನೆಯೇ ಟ್ರೇಲರ್ ವೀಕ್ಷಿಸಿದ್ದೆ.
ಟ್ರೇಲರ್‌ನಲ್ಲಿ ಕಣ್ಣುಗಳು ಮುಂದಿನ ದೃಶ್ಯಗಳನ್ನು ಸವಿಯುತ್ತಿರಲು, ಟೊಪ್ಪಿ ಹಾಕಿಕೊಂಡ ಹುಡುಗನನ್ನು ಕೂಡಲೇ ಗಮನಿಸಿತು. ಅವನೇ, ನನ್ನಲ್ಲಿ ನಗುತ್ತಿದ್ದ ಆ ಪುಟ್ಟ ಬಾಲಕ. ಆ ಕ್ಷಣಗಳಲ್ಲಿ ನನ್ನ ಕಣ್ಣುಗಳನ್ನೇ ನಂಬಲಾಗಲಿಲ್ಲ. ಅದೆಷ್ಟು ಖುಷಿಯಾಗಿತ್ತು ಗೊತ್ತಾ? ಜತೆಯಲ್ಲಿದ್ದ ಗೆಳತಿಯರಲ್ಲಿ ಆತನ ಕುರಿತು ಹೇಳಿಕೊಂಡು ಸಂಭ್ರಮಿಸಿದೆ. ಅವತ್ತೇ ನಿರ್ಧರಿಸಿದೆ- ಸಾಲ ಮಾಡಿಯಾದರೂ ಫಿಲ್ಮ್ ನೋಡಲೇಬೇಕೆಂದು. ಆ ರಾತ್ರಿ ಕಣ್ಣಿಗೆ ನಿದ್ದೆ ಹತ್ತಲು ಗಂಟೆಗಳೇ ಬೇಕಾದವು. ಹೀಗೆ ಶಾಲಾ ಬಾಗಿಲು ತೆರೆಯುವುದಕ್ಕೆ ಮುನ್ನ ಗೆಳತಿಯರೊಂದಿಗೆ “ಸರಕಾರಿ ಹಿರಿಯ ಪ್ರಾಥಮಿಕ ಶಾಲೆ- ಕಾಸರಗೋಡು’ ಚಿತ್ರ ನೋಡಲು ಹೋಗಿದ್ದೆ.
ರಜೆ ಕಳೆದು ತರಗತಿಗಳು ಆರಂಭಗೊಂಡವು. ಮತ್ತೆ ನನ್ನ ಪುಟ್ಟ ನಾಯಕನಿಗಾಗಿ ಕಾದು ಕುಳಿತೆ. ಅದೊಂದು ದಿವಸ ಊಟ ಮುಗಿಸಿಕೊಂಡು ಕೈ ತೊಳೆಯುತ್ತಿರುವಾಗ ಒಬ್ಟಾಕೆ ಬಂದು, “ಟೀಚರ್, ಶಾಲೆಗೆ ಮಮ್ಮೂಟ್ಟಿ ಬಂದಿದ್ದಾನೆ’ ಎಂದೊಡನೆಯೇ 8ನೇ “ಸಿ’ ತರಗತಿಯತ್ತ ಓಡಿದ್ದೆ. ಸಂಪತ್ ತನ್ನ ಸಹಪಾಠಿಗಳ ಜತೆ ಮಾತಾಡುತ್ತಿದ್ದ. ನಾನು ಹೋಗಿ ಬಾಗಿಲ ಬಳಿ ನಿಂತಿರುವುದನ್ನು ಗಮನಿಸಿದ ಆತನ ಗೆಳೆಯ ವೈಶಾಖ್, ಸಂಪತ್‌ನಲ್ಲಿ ವಿಷಯ ತಿಳಿಸಿದ. ತತ್‌ಕ್ಷಣ ಆತ ಓಡಿ ಬಂದು “ಟೀಚರ್ ಹೇಳಿ’ ಎನ್ನುತ್ತಾ ಮಾತಾಡಿಸಿದ. ಶಾಲಾ ವಿದ್ಯಾರ್ಥಿ ಸಮೂಹವೇ ಮೈದಾನದಲ್ಲಿ ಸೇರಿತ್ತು. ಹೆಚ್ಚೇನೂ ಮಾತಾಡಲು ಸಾಧ್ಯವಾಗಲಿಲ್ಲ. ಕಾರಣ, ಉಳಿದವರೆಲ್ಲ “ಮಮ್ಮೂಟ್ಟಿ… ಮಮ್ಮೂಟ್ಟಿ’ ಎನ್ನುತ್ತಾ ಮಾತಾಡೋಕೆ ಪ್ರಯತ್ನಿಸುತ್ತಿದ್ದರು. ಇದನ್ನೆಲ್ಲ ಆತನ ಹೆತ್ತವರು ಮೂಕವಿಸ್ಮಿತರಾಗಿ ವೀಕ್ಷಿಸುತ್ತಿದ್ದರು. ಆಗ ಸಂಪತ್‌ನ ಅಮ್ಮ, “ಅವನು ಸೋಮವಾರದಿಂದ ಶಾಲೆಗೆ ಬರ್ತಾನೆ’ ಅಂದರು. “ಇನ್ನು ಬರ್ತಾನಲ್ಲ’ ಎಂಬ ಖುಷಿಯಲ್ಲಿ “ಸರಿ’ ಎನ್ನುತ್ತಾ ಹೆತ್ತವರಿಗೂ, ಸಂಪತ್‌ಗೂ ವಿದಾಯ ಹೇಳಿದೆ.
ಮುಂದೆ ಸಂಪತ್ ನಮ್ಮೊಂದಿಗಿದ್ದ ದಿನಗಳಾಗಿದ್ದವು. ನಾನು ಎಲ್ಲೇ ಇದ್ದರೂ ಓಡಿಬಂದು ಕೈಹಿಡಿದು, “ಟೀಚರ್’ ಎಂದು ಅವನದ್ದೇ ಧಾಟಿಯಲ್ಲಿ ಹೇಳುತ್ತಿದ್ದ. ಆವಾಗ ನಮ್ಮ ಮಾತುಕತೆ ಶುರುವಾಗುತ್ತಿತ್ತು. ಕೆಲವೊಂದು ಸಲ ಏನು ಮಾತಾಡಬೇಕೆಂದೂ ತೋಚುತ್ತಿರಲಿಲ್ಲ. ಇದರಿಂದ ನನ್ನ ಸಹಪಾಠಿಗಳಿಗೆ ಕೊಂಚ ಅಸೂಯೆ ಆಗಿದ್ದೂ ಉಂಟು. ನಾನು ಅವನಿಗೆ ಹೇಗೆ, ಯಾಕೆ ಇಷ್ಟವಾದೆನೋ ಗೊತ್ತಿಲ್ಲ. ಆದರೆ, ಆತ ನನ್ನ ಪಾಲಿಗೆ, “ಟೀಚರ್’ ಎಂದು ಕರೆದು ಪ್ರೀತಿ ತೋರಿದ ಮೊದಲ ವಿದ್ಯಾರ್ಥಿ, “ಮೈ ಪೆಟ್ ಸ್ಟೂಡೆಂಟ್’.
ಅರ್ಪಿತಾ, ಬಿ.ಇಡಿ ವಿದ್ಯಾರ್ಥಿನಿ, ಕಾಸರಗೋಡು