Advertisement
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ 1933ರ ನವೆಂಬರ್ 3ರಂದು ಬಡ ಮುಸ್ಲಿಂ ಕುಟುಂಬದಲ್ಲಿ ಜನಿಸಿದ ಜಾಫರ್ ಷರೀಫ್ 10ನೇ ವಯಸ್ಸಿನಲ್ಲಿಯೇ ಕ್ವಿಟ್ ಇಂಡಿಯಾ ಚಳವಳಿಗೆ ಧುಮುಕಿದರು. ಪ್ರಾಥಮಿಕ ಶಾಲೆಯ ಗುರುಗಳ ಮಾರ್ಗದರ್ಶನದಂತೆ ಸ್ವಾತಂತ್ರ್ಯ ಹೋರಾಟದಲ್ಲಿಯೂ ಭಾಗವಹಿಸಿದ್ದರು. ಚಿಕ್ಕವಯಸ್ಸಿನಲ್ಲಿಯೇ ತಿಂಗಳಿಗೆ 100 ರೂ.ಕೆಲಸಕ್ಕೆ ಕಾಂಗ್ರೆಸ್ ಕಚೇರಿಯನ್ನು ಸೇರಿದ ಅವರು ಬಳಿಕ ಅದನ್ನೇ ಮನೆಯನ್ನಾಗಿ ಮಾಡಿಕೊಂಡಿದ್ದರು. ನಂತರ ಕಾಂಗ್ರೆಸ್ ಸೇರ್ಪಡೆಯಾಗಿ ಯುವ ಕಾಂಗ್ರೆಸ್ ಘಟಕದಲ್ಲಿ ಗುರುತಿಸಿಕೊಂಡರು.
Related Articles
Advertisement
ಗೇಜ್ ಪರಿವರ್ತಕ:ರೈಲ್ವೆ ಸಚಿವರಾಗಿದ್ದಾಗ ಜಾಫರ್ ಷರೀಫ್ ರೈಲ್ವೆ ಹಳಿಗಳನ್ನು ಗೇಜ್ ಪರಿವರ್ತನೆ ಮಾಡಿ ರೈಲ್ವೆ ಗೇಜ್ ಮಂತ್ರಿ ಎಂದೇ ಪ್ರಖ್ಯಾತರಾಗಿದ್ದರು. ನ್ಯಾರೋ ಗೇಜ್, ಮೀಟರ್‌ಗೆàಜ್‌ಗಳನ್ನು ಬ್ರಾಡ್‌ಗೆàಜ್‌ಗೆ ಪರಿವರ್ತಿಸಿ ದೇಶದಲ್ಲಿ ರೈಲ್ವೆ ಕ್ರಾಂತಿಯನ್ನೇ ಮಾಡಿದರು. ಬೆಂಗಳೂರಿನಲ್ಲಿ ರೈಲ್ವೆ ಗಾಲಿ ಮತ್ತು ಅಚ್ಚು ಕಾರ್ಖಾನೆ ಆರಂಭವಾಗುವಲ್ಲಿ ಜಾಫರ್ ಷರೀಫ್ ಅತ್ಯಂತ ಮಹತ್ವದ ಪಾತ್ರ ವಹಿಸಿದ್ದರು. ಬೆಂಗಳೂರು-ಹಾಸನ ರೈಲು ಮಾರ್ಗ ಮತ್ತು ರಾಜ್ಯಕ್ಕೆ ಕೊಂಕಣ ರೈಲ್ವೆ ಆರಂಭಿಸುವಲ್ಲಿಯೂ ಜಾಫರ್ ಪಾತ್ರ ಮುಖ್ಯವಾಗಿತ್ತು. ಸಂಸದರ ನಿಧಿ ಬಳಕೆ:
ಜಾಫರ್ ಷರೀಫ್ ಸಂಸದರಾಗಿ ತಮಗೆ ಬರುವ ಸಂಸದರ ನಿಧಿ ಹಣವನ್ನು ಶಾಲೆ, ಕಾಲೇಜುಗಳ ತರಗತಿ ನವೀಕರಣ, ಅನಾಥ ಮಕ್ಕಳಿಗೆ ಕಂಪ್ಯೂಟರ್ ಕೇಂದ್ರಗಳ ಸ್ಥಾಪನೆ ಮಾಡುವ ಮೂಲಕ ಸಂಸದರ ನಿಧಿ ಸದ್ಭಳಕೆ ಮಾಡಿ, ಇತರ ಸಂಸದರಿಗೆ ಮಾದರಿಯಾಗಿದ್ದರು. ಭ್ರಷ್ಟಾಚಾರದ ಆರೋಪ:
1995ರಲ್ಲಿ ಜಾಫರ್ ಷರೀಫ್ ರೈಲ್ವೆ ಸಚಿವರಾಗಿದ್ದಾಗ ಹೃದಯ ರೋಗ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಲಂಡನ್‌ಗೆ ತೆರಳಿದಾಗ ತಮ್ಮೊಂದಿಗೆ ಇಬ್ಬರು ಸಹಾಯಕರನ್ನು ಕರೆದುಕೊಂಡು ಹೋಗಿದ್ದು, ಇದರಿಂದ ಸರ್ಕಾರಕ್ಕೆ 7.5 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಅವರ ವಿರುದ್ಧ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಸಿಬಿಐ ತನಿಖೆ ಕೂಡ ನಡೆಸಲಾಗಿತ್ತು. ಈ ಬಗ್ಗೆ ಇಲಾಖಾ ತನಿಖೆ ನಡೆಸುವಂತೆ ಸಿಬಿಐ ಕೋರ್ಟ್ ಸೂಚಿಸಿ ಅವರ ವಿರುದ್ಧದ ಪ್ರಕರಣ ಕೈ ಬಿಟ್ಟಿತ್ತು. ವರ್ಗಾವಣೆಗೆ ಕೇಳಿ ಬೈಸಿಕೊಂಡಿದ್ದರು
1972ರಲ್ಲಿ ಡಿ.ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಾಫರ್ ಷರೀಫ್ ಕನಕಪುರ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದರು. ಈ ವೇಳೆ ಕೋಲಾರ ಸಂಸದ ಜಿ.ವೈ. ಕೃಷ್ಣನ್ ಅವರ ಅಳಿಯನ ವರ್ಗಾವಣೆ ಮಾಡುವಂತೆ ಬಾಲಬ್ರೂಯಿ ಅತಿಥಿ ಗೃಹಕ್ಕೆ ತೆರಳಿ ಅರಸು ಅವರ ಬಳಿ ಮನವಿ ಮಾಡಿಕೊಂಡಿದ್ದರು. ಇಬ್ಬರೂ ಕಾಂಗ್ರೆಸ್ ಪಕ್ಷದ ಸಂಸದರಾಗಿದ್ದರಿಂದ ದೇವರಾಜ ಅರಸು ಅವರು, ತಮ್ಮ ಬೇಡಿಕೆಗೆ ಸ್ಪಂದಿಸುತ್ತಾರೆಂದು ಮನವಿ ಮಾಡಿದ್ದರು. ಆದರೆ, ಅರಸು ಅವರು, ಇಬ್ಬರೂ ಸಂಸದರನ್ನು ತಾಕೀತು ಮಾಡಿದ್ದರು. ಜತೆಗೆ ಅಧಿಕಾರಿಗಳನ್ನೂ ತರಾಟೆಗೆ ತೆಗೆದುಕೊಂಡಿದ್ದರು. ಇದರಿಂದ ಬೇಸರಗೊಂಡ ಜಾಫರ್ ಷರೀಫ್ ಅವರನ್ನು ಕರೆದು ಸಮಾಧಾನ ಮಾಡಿ ತಿಂಡಿ ನೀಡಿ ಕಳುಹಿಸಿದ್ದರಂತೆ. – ಶಂಕರ ಪಾಗೋಜಿ