ನವದೆಹಲಿ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ್ ಅವರ ಸೇವಾವಧಿ ಆಗಸ್ಟ್ 26ರಂದು ಕೊನೆಗೊಳ್ಳಲಿದ್ದು, ಮುಂದಿನ ನೂತನ ಸಿಜೆಐ ಉದಯ್ ಉಮೇಶ್ ಲಲಿತ್ ಅವರ ಹೆಸರನ್ನು ಗುರುವಾರ (ಆಗಸ್ಟ್ 04) ಶಿಫಾರಸು ಮಾಡಿದ್ದಾರೆ.
ಇದನ್ನೂ ಓದಿ:ಮಂಗಳೂರಿನಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಇನ್ನು ಹೊಸ ನಿಯಮ…
“ತಮ್ಮ ಸೇವಾವಧಿ ನಂತರ ಯುಯು ಲಲಿತ್ ಅವರು ಸಿಜೆಐ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂಬುದಾಗಿ ಎನ್ ವಿ ರಮಣ್ ಅವರು ಕಾನೂನು ಮತ್ತು ನ್ಯಾಯ ಸಚಿವಾಲಯಕ್ಕೆ ಅಧಿಕೃತ ಶಿಫಾರಸು ಪತ್ರ ಕಳುಹಿಸಿರುವುದಾಗಿ ವರದಿ ತಿಳಿಸಿದೆ.
ಶಿಫಾರಸು ಪತ್ರವನ್ನು ಸಿಜೆಐ ರಮಣ್ ಅವರು ಖುದ್ದು ಜಸ್ಟೀಸ್ ಲಲಿತ್ ಅವರಿಗೆ ನೀಡಿದ್ದು, ಮುಂದಿನ ಪ್ರಕ್ರಿಯೆಗಾಗಿ ಶಿಫಾರಸು ಪತ್ರವನ್ನು ಕಾನೂನು ಮತ್ತು ನ್ಯಾಯ ಸಚಿವಾಲಯಕ್ಕೆ ರವಾನಿಸಿರುವುದಾಗಿ ವರದಿ ವಿವರಿಸಿದೆ.
ಸಿಜೆಐ ಎಸ್ ಎ ಬೋಬ್ಡೆ ಅವರ ನಿವೃತ್ತಿ ನಂತರ 2021ರ ಏಪ್ರಿಲ್ 21ರಂದು ರಮಣ್ ಅವರು ಸಿಜೆಐ ಆಗಿ ನೇಮಕಗೊಂಡಿದ್ದರು. ಆಗಸ್ಟ್ 26ರಂದು ರಮಣ್ ಅವರ ಸೇವಾವಧಿ ಅಂತ್ಯಗೊಳ್ಳಲಿದೆ.
ಯು.ಯು ಲಲಿತ್ ಅವರು ಸುಪ್ರೀಂಕೋರ್ಟ್ ನ ಹಿರಿಯ ವಕೀಲರಾಗಿ ಕಾರ್ಯನಿರ್ವಹಿಸಿದ್ದು, ನಂತರ ಜಸ್ಟೀಸ್ ಆಗಿದ್ದರು. ಇದೀಗ 49ನೇ ಸಿಜೆಐ ಆಗಿ ಲಲಿತ್ ಅವರು ನೇಮಕವಾಗಲಿದ್ದು, 2022ರ ನವೆಂಬರ್ 8ರಂದು ನಿವೃತ್ತಿಯಾಗಲಿದ್ದಾರೆ.