Advertisement

J&K; ಕಾಶ್ಮೀರದಲ್ಲಿ ಸೇನಾ ವಾಹನದ ಮೇಲೆ ದಾಳಿ: ಯೋಧರು ಸೇರಿ ನಾಲ್ವರ ಸಾ*ವು

12:23 AM Oct 25, 2024 | Team Udayavani |

ಶ್ರೀನಗರ: ಜಮ್ಮು-ಕಾಶ್ಮೀರದ ಗುಲ್ಮಾರ್ಗ್‌ ಬಳಿ ಗುರುವಾರ ಸೇನಾ ವಾಹನವನ್ನು ಗುರಿಯಾಗಿಸಿ ಉಗ್ರರು ಗುಂಡಿನ ದಾಳಿ ನಡೆಸಿ ದ್ದಾರೆ. ಈ ಸಂದರ್ಭದಲ್ಲಿ ಇಬ್ಬರು ಯೋಧರು, ಇಬ್ಬರು ಸೇನಾ ವಾಹನ ಚಾಲಕರು ಮೃತಪಟ್ಟಿದ್ದಾರೆ. ಇನ್ನಿಬ್ಬರು ಯೋಧರು ಗಾಯ ಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ಬಾರಾಮುಲ್ಲದ ಬುಟಾ ಪಾಥ್ರಿ ಎಂಬಲ್ಲಿನ ಗಡಿ ನಿಯಂತ್ರಣ ರೇಖೆ ಬಳಿ ಉಗ್ರರು ಈ ಕೃತ್ಯವೆಸಗಿದ್ದಾರೆ. ಈ ವೇಳೆ ಸೇನಾ ವಾಹನವು ಬೆಂಕಿಗಾಹುತಿಯಾಗಿದೆ. ಘಟನೆಯನ್ನು ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಮತ್ತು ಡಿಸಿಎಂ ಸುರೇಂದರ್‌ ಚೌಧರಿ ಖಂಡಿಸಿದ್ದಾರೆ. ಕಳೆದ ರವಿವಾರ ಗಾಂದೆರ್‌ಬಾಲ್‌ ಜಿಲ್ಲೆಯಲ್ಲಿ ಲಷ್ಕರ್‌ ಉಗ್ರ ಸಂಘಟನೆ ನಡೆಸಿದ್ದ ದಾಳಿಯಲ್ಲಿ ಒಬ್ಬ ವೈದ್ಯ ಸೇರಿ 7 ಮಂದಿ ಅಸುನೀಗಿದ್ದರು. ಆ ಘಟನೆ ಬಳಿಕ 2ನೇ ದೊಡ್ಡ ದಾಳಿಯಾಗಿದೆ.

ಕಾರ್ಮಿಕನಿಗೆ ಗುಂಡು: ಇನ್ನೊಂದೆಡೆ, ಪುಲ್ವಾಮಾ ಜಿಲ್ಲೆಯ ತ್ರಾಲ್‌ನಲ್ಲಿ ಉತ್ತರ ಪ್ರದೇಶ ಮೂಲದ ಕಾರ್ಮಿಕರೊಬ್ಬರನ್ನು ಉಗ್ರರು ಗುಂಡು ಹಾರಿಸಿ ಗಾಯಗೊಳಿಸಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next