Advertisement

Delhi; ಪ್ರವೇಶಿಸುವ ವಾಹನಕ್ಕೆ ವಾಹನ ದಟ್ಟಣೆ ತೆರಿಗೆ ವಿಧಿಸಲು ಚಿಂತನೆ

01:16 AM Oct 14, 2024 | Team Udayavani |

ಹೊಸದಿಲ್ಲಿ: ದಿಲ್ಲಿ ನಗರದ ಸಂಚಾರ ದಟ್ಟಣೆ ಮತ್ತು ಪರಿಸರ ಮಾಲಿನ್ಯ ನಿಯಂತ್ರಿಸಲು ಆಪ್‌ ಸರಕಾರ “ವಾಹನ ದಟ್ಟಣೆ’ ತೆರಿಗೆ ವಿಧಿಸಲು ಮುಂದಾಗಿದೆ. ರಾಷ್ಟ್ರ ರಾಜಧಾನಿಗೆ 13 ಮಾರ್ಗಗಳ ಮೂಲಕ ಪ್ರವೇಶ ಮಾಡುವ ವಾಹನಗಳಿಗೆ ಈ ನಿಯಮ ಜಾರಿಗೊಳಿಸಲು ಪರಿಶೀಲನೆ ನಡೆಯುತ್ತಿದೆ. ಬೆಳಗ್ಗೆ 8 ಗಂಟೆಯಿಂದ 10ರ ವರೆಗೆ ಸಂಜೆ 5.30ರಿಂದ ರಾತ್ರಿ 7.30ರೊಳಗೆ ಆಗಮಿಸುವ ವಾಹನಗಳಿಗೆ ಫಾಸ್ಟಾಗ್‌ ಮೂಲಕ ಈ ತೆರಿಗೆ ವಿಧಿಸಲು ಸರಕಾರ ಯೋಜಿಸಿದೆ. ಅದನ್ನು ಜಾರಿ ಮಾಡಲು ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತರಬೇಕಾಗಿದೆ ಎಂದು ಅಧಿಕಾರಿ­ಗಳು ಹೇಳಿದ್ದಾರೆ. 2009ರಲ್ಲಿ ದಿಲ್ಲಿ ಮಾಜಿ ಸಿಎಂ ಶೀಲಾ ದೀಕ್ಷಿತ್‌ ರಾಜಧಾನಿ ಪ್ರವೇಶಿಸುವ ಖಾಸಗಿ ವಾಹನಗಳಿಗೆ ತೆರಿಗೆ ವಿಧಿಸುವ ಪ್ರಸ್ತಾವ ಮಾಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next