Advertisement

ಪೌರ ಕಾರ್ಮಿಕರಿಗೆ 7 ತಿಂಗಳಿಂದ ಕೂಲಿ ಇಲ್ಲ

04:17 PM May 28, 2018 | |

ನಂಜನಗೂಡು: ನಗರಸಭೆಯಲ್ಲಿ ಪ್ರತಿನಿತ್ಯ ದುಡಿಯುತ್ತಿರುವ ಸುಮಾರು 52 ಸಿಬ್ಬಂದಿಗಳಿಗೆ 7 ತಿಂಗಳಿಂದ ಸಂಬಳವೇ ನೀಡಿಲ್ಲ. ಹೀಗಾಗಿ ಆ ಕಾರ್ಮಿಕರು ತಾವು ಮಾಡಿದ ಕೆಲಸಕ್ಕೆ ಕೂಲಿ ನೀಡಿ ಎಂದು ನಂಜನಗೂಡು ನಗರಸಭೆಯ ಆವರಣದಲ್ಲಿ ಕೆಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

Advertisement

ಶುಕ್ರವಾರದಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದ ಪೌರ ಕಾರ್ಮಿಕರು ಭಾನುವಾರ ಬೆಳಗ್ಗೆ ಬಂದು ನೋಡಿದಾಗ ಶಾಮಿಯಾನ ನೆಲಕಚ್ಚಿದ್ದು ಕಂಡುಬಂದಿತು. ಹಾಗಾಗಿ ಶಾಮಿಯಾನವಿಲ್ಲದೇ ಪ್ರತಿಭಟನೆ ಮುಂದುವರಿಸಿದ್ದು, ನಗರಸಭಾದಾ ದ್ಯಂತ ಕಸ ಎತ್ತುವವರಿಲ್ಲದೆ ನಂಜನಗೂಡು ನಗರಸಭೆ ಕಸದ ತೊಟ್ಟಿಯಾಗಲಾರಂಭಿಸಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾ ಕಾರರು, ಪೌರಕಾರ್ಮಿಕರ ನ್ಯಾಯವಾದ ಬೇಡಿಕೆ ಈಡೇರಿಸುವ ಬದಲು ಅಧಿಕಾರಿಗಳು ಕೆಲವು ಕಾರ್ಮಿಕರನ್ನು ಹೆದರಿಸಿ, ಕೆಲಸದಿಂದ ವಜಾ ಮಾಡುವುದಾಗಿ,ಬೆದರಿಸುತ್ತ ಪ್ರತಿಭಟನೆ ಯನ್ನು ಹತ್ತಿಕ್ಕುವ ಕುತಂತ್ರ ಆರಂಭಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಕೂಸು ಹುಟ್ಟುವ ಮೊದಲೇ ಕುಲಾವಿ: ಸ್ವತ್ಛ ಭಾರತದ ಕಲ್ಪನೆಯಡಿ ನಗರಸಭೆ ಚಾಲಕರನ್ನು ನೇಮಿಸಿಕೊಳ್ಳದೆಯೇ ವಾಹನಗಳನ್ನು ಖರೀದಿಸಿ ನಂತರ ಆ ವಾಹನಗಳಲ್ಲಿ ಕಸ ತುಂಬಿ ಸಾಗಾಣಿಕೆ ಮಾಡಲು ಹೊರಗುತ್ತಿಗೆ ಕಾರ್ಮಿಕರ ಮೊರೆ ಹೋಗಿ ಈಗ ಅವರಿಗೂ ಸಂಬಳ ನೀಡಲಾಗದೆ ಪರದಾಟ ನಡೆಸಿದೆ. ಕಸ ತೆಗೆಯಲು 38 ಸಿಬ್ಬಂದಿ ಹಾಗೂ ಅದರ ಸಾಕಾಣಿಕೆಗಾಗಿ 14 ಮಂದಿ ಒಟ್ಟೂ 52 ಕಾರ್ಮಿಕರಿಂದ ದುಡಿಸಿಕೊಂಡ ನಗರಸಭೆ ಈಗ ಅವರಿಗೆ ಸಂಬಳ ಎಂದಾಗ ರಾಜ್ಯ ಸರ್ಕಾರದತ್ತ ಮುಖ ಮಾಡಿ ಮೌನವಾಗಿದೆ.

ಕಳೆದ ನವೆಂಬರ್‌ ತಿಂಗಳನಲ್ಲೇ ಹೊರಗುತ್ತಿಗೆ ಯನ್ನು ರಾಜ್ಯಾದ್ಯಂತ ರದ್ದುಗೊಳಿಸಿದ ಸರ್ಕಾರ ಅದಕ್ಕೆ ಪರ್ಯಾಯ ಮಾರ್ಗವನ್ನೂ ರೂಪಿಸದೆ ಇರುವದರಿಂದಾಗಿ ರಾಜ್ಯಾದ್ಯಂತ ಬಡ ಕಾರ್ಮಿಕರು ದುಡಿದ ಕೆಲಸಕ್ಕೆ ಕೂಲಿ ನೀಡಿ ಎಂದು ಗೋಗರೆಯುವಂತಾಗಿದೆ.

Advertisement

ನಮ್ಮ ಶ್ರಮಕ್ಕೆ ಕೂಲಿ ನೀಡಿ ಎಂದು ನಡೆಸುತ್ತಿರುವ ಪ್ರತಿಭಟನೆಯ ನೇತೃತ್ವವನ್ನು ಹೊರಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಚಲುವರಾಜು, ಹೇಮಂತ್‌, ಕಮಲೇಶ್‌ ವಹಿಸಿದ್ದಾರೆ. ನಾಗಪ್ಪ, ರಂಗನಾಥ್‌, ರವಿ, ಮಣಿ, ಆರ್ಮುಗಮ್‌ ಸೇರಿದಂತೆ 56ಕ್ಕೂ ಹೆಚ್ಚು ಕಾರ್ಮಿಕರು ಸಾಥ್‌ ನೀಡುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next