Advertisement
ನಗರದ ಕದ್ರಿ ಪಾರ್ಕ್ ಬಳಿ ಇರುವ ಹೊಟೇಲ್‌ವೊಂದರ ಪ್ರವೇಶ ದ್ವಾರದ ಒಂದು ಬದಿಯಲ್ಲಿ ಮಂಗಳೂರು ನಗರದ ಪ್ರಮುಖ ಚಿತ್ರಣವನ್ನು ಯಥಾ ರೂಪದಲ್ಲಿ ಪ್ರತಿಕೃತಿಯಾಗಿ ಸಾರ್ವಜನಿಕರ ವೀಕ್ಷಣೆಗೆ ಅನುಕೂಲವಾಗುವಂತೆ ಅಭಿವ್ಯಕ್ತಗೊಳಿಸಲಾಗಿದೆ. ಮಾಡೆಲ್ ರೂಪದಲ್ಲಿ ನಗರದ ಸಹಜರೂಪವನ್ನು ಮಿನಿಯೇಚರ್ ಶೈಲಿಯಲ್ಲಿ ರಚಿಸಿದ್ದು, ಇದು ವಾಸ್ತವಿಕ ಸಂಕೀರ್ಣದ ಪರಿಕಲ್ಪನೆಯಾಗಿದೆ.
ಹೊಟೇಲ್‌ಗೆ ದಿನನಿತ್ಯ ನೂರಾರು ಗ್ರಾಹಕರು ಬರುತ್ತಾರೆ. ಅದರಲ್ಲಿ ನಗರದ ಹೊರಭಾಗದಿಂದ ಬರುವ ಜನರು ಇರುತ್ತಾರೆ. ಅವರಿಗೆ ನಗರದ ಬಗ್ಗೆ ಮಾಹಿತಿ ನೀಡಲು ಹಾಗೂ ಸ್ವಲ್ಪ ಬದಲಾವಣೆಗಾಗಿ ಈ ಮಾಡೆಲ್‌ನ್ನು ಮಾಡಲಾಗಿದೆ ಎಂದು ಹೊಟೇಲ್ ಮಾಲಕರು ತಿಳಿಸುತ್ತಾರೆ. ಮಿನಿಯೇಚರ್ ಮಾಡೆಲ್ ಬಣ್ಣ ಬಣ್ಣಗಳಿಂದ ನೋಡಲು ಆಕರ್ಷಕವಾಗಿ ಕಾಣುವುದರಿಂದ ಮಕ್ಕಳು ಹೆಚ್ಚಾಗಿ ಇಷ್ಟಪಡುತ್ತಾರೆ.
Related Articles
ನಗರದ ಸಂಪೂರ್ಣ ಚಿತ್ರಣ ನೀಡುವ ಮಿನಿಯೇಚರ್ ಮಾಡೆಲ್ ಗ್ರಾಹಕರನ್ನು ಆಕರ್ಷಿಸುತ್ತಿದ್ದು, ಬಂದ ಗ್ರಾಹಕರು ಮಿನಿಯೇಚರ್ ಮಾಡೆಲ್‌ನ ಫೋಟೋ, ವೀಡಿಯೋ ತೆಗೆಯುವುದರಲ್ಲೇ ಹೆಚ್ಚು ಸಮಯ ಕಳೆಯುತ್ತಾರೆ. ಗ್ರಾಹಕರು ತಮ್ಮೊಂದಿಗೆ ಬಂದವರೊಂದಿಗೆ ಈ ದೃಶ್ಯದ ಸನ್ನಿವೇಶಗಳನ್ನು ನೋಡುತ್ತ ಪರಸ್ಪರ ವರ್ಣಿಸುವ ಸಂದರ್ಭ ಸಾಮಾನ್ಯವಾಗಿದೆ.
Advertisement
ಬದಲಾವಣೆಗಾಗಿ ಮಾಡೆಲ್ನಗರದಲ್ಲಿ ಹಲವಾರು ಹೊಟೇಲ್ ಗಳಿವೆ. ನಮ್ಮ ಹೊಟೇಲ್‌ನಲ್ಲಿ ಸ್ವಲ್ಪ ಬದಲಾವಣೆ ಇರಲಿ. ಹಾಗೂ ಜನರಿಗೆ ನಗರದ ಬಗ್ಗೆ ಮಾಹಿತಿ ಲಭಿಸುವಂತಾಗಲಿ ಎಂಬ ಕಾರಣಕ್ಕಾಗಿ ನಗರದ ಮಿನಿಯೇಚರ್ ಮಾಡೆಲ್ ಮಾಡಲಾಯಿತು. ಇದಕ್ಕೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.
– ಸ್ವರ್ಣ ಸುಂದರ,
ಹೊಟೇಲ್ ಮಾಲಕ