ಕಲಬುರಗಿ: ಕಾಂಗ್ರೆಸ್ ಸಂಸದೀಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಎನ್. ಧರ್ಮಸಿಂಗ್, ಮಾಜಿ ಸಚಿವ, ಶಾಸಕ ಖಮರುಲ್ ಇಸ್ಲಾಂ, ವೈದ್ಯಕೀಯ ಶಿಕ್ಷಣ ಸಚಿವ ಡಾ| ಶರಣಪ್ರಕಾಶ ಪಾಟೀಲ ಅವರ ಸಂಕಲ್ಪದಿಂದ ಮಹಾನಗರದಾದ್ಯಂತ ರಸ್ತೆ ಅಭಿವೃದ್ಧಿ ಕಾರ್ಯ ಶರವೇಗದಲ್ಲಿ ನಡೆದಿದೆ ಎಂದು ಪಾಲಿಕೆ ಸದಸ್ಯ ಶರಣು ಮೋದಿ ಹೇಳಿದರು.
ಮಹಾನಗರದ ವಾರ್ಡ್‌ನಂಬರ್ 17ರ ವ್ಯಾಪ್ತಿಯಲ್ಲಿ ಬರುವ ಲೋಹಾರ ಗಲ್ಲಿಯ ಮಹಾಮಂದಿರದಿಂದ ಮಹಾದೇವ ನಗರ ಮುಖ್ಯದ್ವಾರದವರೆಗಿನ10 ಲಕ್ಷ ರೂ. ಮೊತ್ತದ ಸಿಸಿ ರಸ್ತೆ ಹಾಗೂ ಒಳಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಎಚ್‌ಕೆಆರ್‌ಡಿಬಿಗೆ ಸರ್ಕಾರದ ಸಾವಿರ ಕೋಟಿ ರೂ. ಅನುದಾನ ನೀಡುತ್ತಿರುವುದರಿಂದ ಹಾಗೂ ಈ ಅನುದಾನದಲ್ಲಿ ಹೆಚ್ಚಿನ ಹಣವನ್ನು ಮಹಾನಗರದ ಅಭಿವೃದ್ಧಿಗೆ ಮೀಸಲಿಟ್ಟಿದ್ದರಿಂದ ಬಹುತೇಕ ಎಲ್ಲ ರಸ್ತೆಗಳಿಗೆ ಅಭಿವೃದ್ಧಿ ಭಾಗ್ಯ ಸಿಕ್ಕಿದೆ ಎಂದರು.
ಪ್ರಸಕ್ತ ಬಜೆಟ್‌ನಲ್ಲಿ ಎಚ್‌ಕೆಆರ್‌ಡಿಬಿಗೆ 1500 ಕೋಟಿ ರೂ. ನೀಡುವಂತೆ ಪಕ್ಷದ ವರಿಷ್ಠರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಆದ್ದರಿಂದ ಸಿಎಂ ಘೋಷಿಸುವ ವಿಶ್ವಾಸ ಹೊಂದಲಾಗಿದೆ. 1500 ಕೋಟಿ ರೂ. ಎಚ್‌ಕೆಆರ್‌ಡಿಬಿಗೆ ಅನುದಾನ ನಿಗದಿಯಾದಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಮುಖಂಡರಾದ ಶಿವಶರಣಪ್ಪ ಹೀರಾಪುರ, ಶಾಮಜೋಶಿ, ಅಲ್ಲಿಂ ಪಟೇಲ್, ಚನ್ನಮಳಿ, ಬಾಬುರಾವ್, ದೀಪಕ ಪವಾರ, ಮಲ್ಲಿಕಾರ್ಜುನ ಹಿರೇಗೌಡ, ಜೈ ಕಿಶನ್ ಗಿಲಡಾ, ಶರಣಬಸಪ್ಪ ಹಿರೇಗೌಡ, ಗುಂಡಪ್ಪ ಎಂ.ಎಸ್. ಪಾಟೀಲ, ರತ್ನ ಜಗತಾಬ, ಸಂದೀಪ ಮೀಸರಾ ಹಾಜರಿದ್ದರು.