ಹೊಸದಿಲ್ಲಿ: ಫ್ರಾನ್ಸ್‌ನ ಕಾರು ಕಂಪೆನಿ ಸಿಟ್ರಾನ್, ಭಾರತದ ಮಾರುಕಟ್ಟೆಗೆ ತನ್ನ ಹೊಚ್ಚ ಹೊಸ ಸಿ3 ಏರ್‌ಕ್ರಾಸ್ ಎಸ್‌ಯುವಿ ಕಾರನ್ನು ಬಿಡುಗಡೆಗೊಳಿಸಿದೆ.
5 ಸೀಟರ್ ಹಾಗೂ 7 ಸೀಟರ್‌ಗಳಲ್ಲಿ ಕಾರು ಲಭ್ಯವಿದೆ. 1.2 ಲೀ. ಟರ್ಬೋ ಎಂಜಿನ್, ಆಟೊ ಸ್ಟಾಪ್/ಸ್ಟಾರ್ಟ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ಹಿಲ್ ಹೋಲ್ಡ್ ಅಸಿಸ್ಟೆಂಟ್, ಟಯರ್ ಪ್ರಶರ್ ಮಾನಿಟರಿಂಗ್ ಸಿಸ್ಟಮ್ ಹೊಂದಿದೆ.
ಜತೆಗೆ 17.78 ಸೆಂ.ಮೀ. ಇಂಟೆಲ್ಲಿ-ಸ್ಮಾರ್ಟ್ ಟಿಎಫ್ಟಿ ಕ್ಲಸ್ಟರ್, 26 ಸೆಂ.ಮೀ. ಇನ್ಫೋಟೇನ್ಮೆಂಟ್ ಸ್ಕ್ರೀನ್, ವೈರ್‌ಲೆಸ್ ಆ್ಯಂಡ್ರಾಯ್ಡ ಆಟೊ ಮತ್ತು ಆಟೊ ಕಾರ್ ಪ್ಲೇ ಸಹಿತ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ.
ಐದು ವೇರಿಯಂಟ್‌ಗಳಲ್ಲಿ ಕಾರು ಲಭ್ಯವಿದೆ. “ಸಿ3 ಏರ್‌ಕ್ರಾಸ್ ಯು’ ಬೆಲೆ (ಎಕ್ಸ್ ಶೋರೂಮ್-ಹೊಸ ದಿಲ್ಲಿ) 9,99,000 ರೂ., “ಸಿ3 ಏರ್‌ಕ್ರಾಸ್ ಪ್ಲಸ್’ ಬೆಲೆ 11,34,000 ರೂ., “ಸಿ3 ಏರ್‌ಕ್ರಾಸ್ ಮ್ಯಾಕ್ಸ್ ‘ ಬೆಲೆ 11,99,000 ರೂ. ಹಾಗೂ 7 ಸೀಟರ್‌ಗಳ “ಸಿ3 ಏರ್‌ಕ್ರಾಸ್ ಪ್ಲಸ್’ ಬೆಲೆ 11,69,000 ರೂ. ಮತ್ತು 7 ಸೀಟರ್‌ಗಳ “ಸಿ3 ಏರ್‌ಕ್ರಾಸ್ ಮ್ಯಾ ಕ್ಸ್’ ಬೆಲೆ 12,34,000 ರೂ. ಇದೆ. ಇದೇ ವೇಳೆ ಕಾರಿಗೆ ಎಮರ್ಜೆನ್ಸಿ ಮೆಡಿಕಲ್ ಎಕ್ಸ್ ಪೆನ್ಸಸ್ ಕವರ್ ಹಾ ಗೂ ಇಎಂಐ ಪ್ರೊಟೆಕ್ಟ್ ಕವರ್ ಎಂಬ ವಿಶೇಷ ವಿಮೆ ಯನ್ನು ಸಿಟ್ರಾನ್ ಪರಿಚಯಿಸಿದೆ.
ಈ ಕಾರುಗಳ ಮುಂಗಡ ಬುಕ್ಕಿಂಗ್ ಆರಂಭವಾಗಿ ದ್ದು, ಅ.31 ರಿಂದ ಕಾರುಗಳನ್ನು ಡೆಲಿವರಿ ಮಾಡಲಾಗುತ್ತದೆ ಎಂದು ಕಂಪೆನಿ ತಿಳಿಸಿದೆ.