Advertisement
ನೀಟ್ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಭದ್ರತೆಯ ದೃಷ್ಟಿಯಿಂದ ಸಿಬಿಎಸ್‌ಇ ಈ ಹಿಂದೆಯೇ ಕೆಲವೊಂದು ಸ್ಪಷ್ಟ ಸೂಚನೆ ನೀಡಿತ್ತು. ಸೂಚನೆ ಪಾಲನೆ ಮಾಡಿದ ಅಭ್ಯರ್ಥಿಗಳಲ್ಲಿ ಮುಜುಗರ ಅಥವಾ ಗೊಂದಲ ಇರಲಿಲ್ಲ. ನಿಯಮ ಉಲ್ಲಂ ಸಿದ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದಲ್ಲಿ ಫಜೀತಿಗೆ ಒಳಗಾದರು.
Related Articles
Advertisement
ಭಾನುವಾರ ಪರೀಕ್ಷಾ ಕೇಂದ್ರಕ್ಕೆ ತಡವಾಗಿ ಬಂದ ಯಾವ ಅಭ್ಯರ್ಥಿಗೂ ಪರೀಕ್ಷೆ ಬರೆಯಲು ಅವಕಾಶ ನೀಡಿಲ್ಲ. ಕೇವಲ 5 ರಿಂದ 10 ನಿಮಿಷ ತಡವಾಗಿ ಬಂದವರು ಕೂಡ ನೀಟ್‌ನಿಂದ ವಂಚಿತರಾಗಿದ್ದಾರೆ. ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜು, ಬಸವನಗುಡಿ ಕಾಲೇಜು, ಬಿಜಿಎಸ್ ಸೇರಿದಂತೆ ರಾಜ್ಯದ ವಿವಿಧ ಭಾಗದ ಪರೀಕ್ಷಾ ಕೇಂದ್ರಕ್ಕೆ ತಡವಾಗಿ ಹೋದ ಸುಮಾರು 20ಕ್ಕೂ ಅಧಿಕ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಕೊಟ್ಟಿಲ್ಲ.
ಲೇಸ್ ಕಟ್ಟುವ ಶೂ ಧರಿಸಿ ಪರೀಕ್ಷಾ ಕೇಂದ್ರಕ್ಕೆ ಬಂದಿರುವ ಅಭ್ಯರ್ಥಿಗಳ ಶೂ ಹಾಗೂ ಸಾಕ್ಸ್ ತೆಗೆಸಿ ಪರಿಶೀಲನೆ ಮಾಡಿದ್ದಾರೆ. ಹಾಗೆಯೇ ಪರೀಕ್ಷೆಯ ಪ್ರವೇಶ ಪತ್ರದಲ್ಲಿ ಭಾವಚಿತ್ರ ಹಾಗೂ ಸಹಿ ಸ್ಪಷ್ಟವಾಗಿ ಕಾಣದ ಅಭ್ಯರ್ಥಿಗಳು ಕಡ್ಡಾಯವಾಗಿ ಆಧಾರ್ ಕಾರ್ಡ್ ಅಥವಾ ಸರ್ಕಾರ ನೀಡಿರುವ ಯಾವು ದಾದರೊಂದು ಗುರುತಿನ ಚೀಟಿಯ ಮೂಲ ಪ್ರತಿಯನ್ನು ಕೊಂಡೊಯ್ಯುವಂತೆ ಸೂಚನೆ ನೀಡಿದ್ದರು.
ಇಂಥ ಸಂದರ್ಭದಲ್ಲಿ ಆಧಾರ್ ಅಥವಾ ಸರ್ಕಾರ ಸೂಚಿಸಿದ್ದ ಗುರುತಿನ ಚೀಟಿಯ ಮೂಲ ಪ್ರತಿ ತೋರಿಸದ ಅಭ್ಯರ್ಥಿಗಳಿಗೂ ಪರೀಕ್ಷೆ ಬರೆಯಲು ಅವಕಾಶ ನೀಡಿರಲಿಲ್ಲ ಎಂದು ಮೂಗಳು ತಿಳಿಸಿವೆ. ದೇಶದ 104 ನಗರದ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ನಡೆದಿದ್ದು, 11,35,104 ಅಭ್ಯರ್ಥಿಗಳು ಪರೀಕ್ಷೆ ನೋಂದಣಿ ಮಾಡಿಕೊಂಡಿದ್ದರು. ನೀಟ್‌ನಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ರಾಷ್ಟ್ರ ಮಟ್ಟದ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಪಡೆಯಲು ಅನುಕೂಲವಾಗಲಿದೆ.