ಹೊಸದಿಲ್ಲಿ : ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಪೌರತ್ವ ಕುರಿತಾದ ದೂರುಗಳಿಗೆ ಸಂಬಂಧಿಸಿ ಕೇಂದ್ರ ಗೃಹ ಸಚಿವಾಲಯ ಅವರಿಗೆ (ರಾಹುಲ್ ಗಾಂಧಿಗೆ) ನೊಟೀಸ್ ಜಾರಿ ಮಾಡಿದೆ.
ಅಮೇಠಿಯಿಂದ ಲೋಕಸಭೆಗೆ ಸ್ಪರ್ಧಿಸುವ ಸಲುವಾಗಿ ನಾಮಪತ್ರ ಸಲ್ಲಿಸುವಾಗ ದಾಖಲಿಸಿದ್ದ ಅಫಿದಾವಿತ್ ನಲ್ಲಿ ರಾಹುಲ್ ಗಾಂಧಿ ತಾನು ಬಂಡವಾಳ ಹೂಡಿದ್ದ ಬ್ರಿಟಿಷ್ ಕಂಪೆನಿಯೊಂದರ ನೋಂದಾವಣೆ ದಾಖಲೆ ಪತ್ರದಲ್ಲಿ ತಾನು ಬ್ರಿಟಿಷ್ ಪ್ರಜೆ ಎಂದು ಘೋಷಿಸಿಕೊಂಡಿದ್ದುದು ಬಹಿರಂಗವಾಗಿತ್ತು.
ಆ ಪ್ರಕಾರ ರಾಹುಲ್ ಗಾಂಧಿ ಬ್ರಿಟಿಷ್ ಪ್ರಜೆ ಎಂದಾದರೆ ಅವರು ಭಾರತದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂದು ಅಮೇಠಿ ಚುನಾವಣಾ ಕಣದಲ್ಲಿದ್ದ ಪಕ್ಷೇತರ ಅಭ್ಯರ್ಥಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ರಾಹುಲ್ ಗಾಂಧಿ ಅವರ ಶೈಕ್ಷಣಿಕ ಅರ್ಹತಾ ಪತ್ರಗಳಲ್ಲಿ ಅವರ ಹೆಸರು ರಾವುಲ್ ವಿನ್ಸಿ ಎಂದಿದ್ದು ಆ ವ್ಯಕ್ತಿಯೇ ರಾಹುಲ್ ಗಾಂಧಿಯಾ ಎಂದೂ ದೂರಿನಲ್ಲಿ ಪ್ರಶ್ನಿಸಲಾಗಿತ್ತು.
ಈ ಸಂದೇಹಗಳನ್ನು ಪರಾಮರ್ಶಿಸಲು ಚುನಾವಣಾ ಆಯೋಗ ರಾಹುಲ್ ಅವರ ನಾಮಪತ್ರದ ಪರಿಶೀಲನೆಯನ್ನು ಮೂರು ದಿನಗಳ ಮಟ್ಟಿಗೆ ಮುಂದೂಡಿತ್ತು. ಕೊನೆಗೂ ರಾಹುಲ್ ಗಾಂಧಿ ನಾಮಪತ್ರ ಸ್ವೀಕೃತವಾಗಿತ್ತು !