Advertisement

ಮಣಿಪಾಲ್‌ ಪ್ರೊಲರ್ನ್ನಿಂದ ಸಿಟಿಜನ್‌ಪ್ರೊ ಕೋರ್ಸ್‌ ಆರಂಭ

12:24 AM Apr 10, 2019 | Team Udayavani |

ಬೆಂಗಳೂರು: ನಗರದಲ್ಲಿ ಮಣಿಪಾಲ್‌ ಗ್ಲೋಬಲ್‌ ಎಜುಕೇಷನ್‌ ಸರ್ವೀಸಸ್‌(ಎಂಎಜಿಇ)ನ ಭಾಗವಾಗಿರುವ ಹಾಗೂ ವೃತ್ತಿಪರ ಕಲಿಕಾ ವೇದಿಕೆಯಾಗಿರುವ ಮಣಿಪಾಲ್‌ ಪ್ರೊಲರ್ನ್ ಈಗ ಜನಾಗ್ರಹ ಸೆಂಟರ್‌ ಫಾರ್‌ ಸಿಟಿಜನ್‌ಶಿಪ್‌ ಆ್ಯಂಡ್‌ ಡೆಮಾಕ್ರೆಸಿಯೊಂದಿಗೆ “ಸಿಟಿಜನ್‌ಪ್ರೊ’ ಎಂಬ ಉಚಿತ ಆನ್‌ಲೈನ್‌ ಕೋರ್ಸ್‌ ಆರಂಭಿಸಿದೆ.

Advertisement

ಈ ಆನ್‌ಲೈನ್‌ ಕೋರ್ಸ್‌ ಭಾರತದೆಲ್ಲೆಡೆ ಇರುವ ನಾಗರಿಕರಿಗೆ ತಮ್ಮ ನಾಗರಿಕ ಹಕ್ಕುಗಳು, ಕರ್ತವ್ಯಗಳ ಬಗ್ಗೆ ಜಾಗೃತಿ ಮೂಡಿಸುವ ಹಾಗೂ ಮಾಹಿತಿ ನೀಡುವ ಉದ್ದೇಶ ಹೊಂದಿದೆ. ಭಾರತದ ನಾಗರಿಕ ಆಡಳಿತ ಪ್ರಕ್ರಿಯೆ ನೀತಿಗಳನ್ನು ಅರಿತುಕೊಳ್ಳಲು ಸೂಕ್ತ ಮಾರ್ಗದರ್ಶನ ನೀಡಲಿದೆ. 2019ರ ಸಾರ್ವಜನಿಕ ಚುನಾವಣೆಯ ಮೊದಲ ಹಂತದ ಮತ ನೀಡುವುದರ ಪ್ರಾಮುಖ್ಯತೆ ಬಗ್ಗೆ ಒತ್ತು ನೀಡಲಿದೆ. ಮತದಾನದ ಹಕ್ಕನ್ನು ಅರ್ಥ ಮಾಡಿಕೊಳ್ಳಲು, ಅದಕ್ಕೆ ಸಂಬಂಧಿಸಿದಂತೆ ಎಲ್ಲ ರೀತಿಯ ಮಾಹಿತಿ ನೀಡಲಿದೆ.

ಇದಲ್ಲದೆ ಈ ಕೋರ್ಸ್‌ ನಾಗರಿಕರು ತಮ್ಮ ಅಂಶಗಳನ್ನು ಅರಿತುಕೊಳ್ಳಲು, ನಗರದ ಸವಾಲುಗಳು, ತಮ್ಮ ಸರ್ಕಾರವನ್ನು ತಿಳಿದುಕೊಳ್ಳುವ ಯಶಸ್ಸಿನ ಕಥೆಗಳು ಹಾಗೂ ಇತರ ಮಾದರಿಗಳನ್ನು ಹೊಂದಿರುತ್ತದೆ. ಅಲ್ಲದೆ, ಸ್ಥಳೀಯ ಸರ್ಕಾರಗಳು, ಬಹುಭಾಗಗಳು ಮತ್ತು ಏಜೆನ್ಸಿಗಳ ರಚನೆ ಬಗ್ಗೆಯೂ ಜಾಗೃತಿ ಹರಡಲಿದೆ. ನೀರು, ಸಾರಿಗೆ, ತ್ಯಾಜ್ಯ ನಿರ್ವಹಣೆ, ಒಳಚರಂಡಿ, ಆರೋಗ್ಯ, ಸಾರ್ವಜನಿಕ ಮೂಲಸೌಕರ್ಯ, ಶಿಕ್ಷಣ ಮುಂತಾದ ಸೇವೆಗಳನ್ನು ಪೂರೈಸುವ ಇಲಾಖೆಗಳು ಇದರಲ್ಲಿವೆ.

ಈ ಕೋರ್ಸ್‌ನ ಆರಂಭದ ಬಗ್ಗೆ ಎಂಎಜಿಇನ ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಿಇಒ ಪಂಚನಾಥನ್‌ ಮಾತನಾಡಿ, ಶತಕೋಟಿ ದೇಶವಾಸಿಗಳ ನಾಗರಿಕ ಸಮಸ್ಯೆಗಳನ್ನು ಪರಿಹರಿಸುವುದು ಕಠಿಣ ಸವಾಲಾಗಿದೆ. ಆನ್‌ಲೈನ್‌ನಲ್ಲಿ ವಸ್ತು ವಿಷಯ ವಿತರಣೆ ನಮ್ಮ ಶಕ್ತಿಯಾಗಿದೆ. ಇದರೊಂದಿಗೆ ನಗರಗಳಲ್ಲಿನ ಜೀವನ ಮಟ್ಟವನ್ನು ವಿಸ್ತರಿಸುವ ಗುರಿಯಿಂದ ಉತ್ತಮ ಭಾರತ ಸೃಷ್ಟಿಸುವ ಧ್ಯೇಯವಿದೆ ಎಂದರು.

ಚುನಾವಣೆ ಸಮಯದಲ್ಲಿ ಪ್ರತಿ ಅರ್ಹ ಭಾರತೀಯ ಮುಂದೆ ಬಂದು ಮತದಾನ ಮಾಡಲು ಮಣಿಪಾಲ್‌ ಸಮೂಹ ಆಗ್ರಹಿಸುತ್ತದೆ. ಅಲ್ಲದೆ, ನಾಗರಿಕರಿಗೆ ಮಾಹಿತಿ ಪೂರ್ಣ ನಿರ್ಣಯ ಕೈಗೊಳ್ಳುವಲ್ಲಿ ಈ ಕೋರ್ಸ್‌ ನೆರವಾಗಲಿದೆ ಹಾಗೂ ಈ ಬಗ್ಗೆ ಸಿಟಿಜನ್‌ಪ್ರೊ ಆಗುವ ಖಾತ್ರಿ ಮಾಡಿಕೊಳ್ಳಲಿದೆ ಎಂದರು.

Advertisement

ಜನಾಗ್ರಹದ ನಾಗರಿಕ ಭಾಗವಹಿಸುವಿಕೆ ವಿಭಾಗದ ಮುಖ್ಯಸ್ಥೆ ಸಪ್ನಾ ಖರೀಮ್‌ ಅವರು, ನಾಗರಿಕ ಸಮಸ್ಯೆಗಳನ್ನು ಪರಿಹರಿಸುವತ್ತ ನಾಗರಿಕರು ಮತ್ತು ಸರ್ಕಾರಗಳು ಒಂದುಗೂಡಿ ಕೆಲಸ ಮಾಡುವ ಸಹಭಾಗಿತ್ವದ ವಾತಾವರಣವು ಪ್ರಜಾಪ್ರಭುತ್ವವನ್ನು ಆಳವಾಗಿಸಲು ಮತ್ತು ಎಲ್ಲಾ ನಾಗರಿಕರಿಗೆ ಅದ್ಭುತ ಗುಣಮಟ್ಟದ ಜೀವನ ಪೂರೈಸಲು ಏಕೈಕ ಮಾರ್ಗವಾಗಿದೆ.

ಸಕ್ರಿಯ ನಾಗರಿಕತ್ವಕ್ಕೆ ಚಾಲನೆ ನೀಡುವ ಮೌಲ್ಯಗಳ ಕುರಿತಂತೆ ಯುವ ಮನಸ್ಸುಗಳನ್ನು ಪರಿವರ್ತಿಸುವಲ್ಲಿ ಮಣಿಪಾಲ್‌ ಗ್ಲೋಬಲ್‌ ಎಜುಕೇಷನ್‌ನೊಂದಿಗಿನ ಪಾಲುದಾರಿಕೆ ಪ್ರಮುಖ ಪಾತ್ರವಹಿಸಲಿದೆ ಎಂದರು. ಕೋರ್ಸ್‌ ಮುಕ್ತಾಯವಾದ ನಂತರ ಅಭ್ಯರ್ಥಿಗಳಿಗೆ ಅಧಿಕೃತವಾಗಿ ಸಿಟಿಜನ್‌ಪ್ರೊ ಪ್ರಮಾಣಪತ್ರ ನೀಡಲಾಗುತ್ತದೆ. ಮಣಿಪಾಲ್‌ ಪ್ರೊಲರ್ನ್ ಈ ಕಾರ್ಯಕ್ರಮಕ್ಕಾಗಿ ನೋಂದಣಿ ಪ್ರಕ್ರಿಯೆ ತೆರೆದಿದ್ದು, www.manipalprolearn.cim/citizenpro ವೆಬ್‌ಸೈಟ್‌ನಲ್ಲಿ ವಿವರಗಳನ್ನು ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next