Advertisement
ಗ್ರಾಮದಲ್ಲಿ ಮಹದೇವಮ್ಮನವರಿಗೆ ಸೇರಿದ ಜಮೀನಿನಲ್ಲಿ ಕುಮಾರಸ್ವಾಮಿ ಭತ್ತ ನಾಟಿ ಮಾಡಲಿದ್ದಾರೆ. ಇವರಿಗೆ 130 ಮಂದಿ ಕೂಲಿ ಕಾರ್ಮಿಕರು ನಾಟಿ ಕಾರ್ಯದಲ್ಲಿ ಸಾಥ್ ನೀಡುವರು.
Related Articles
Advertisement
ಉಳಿದ ಒಂದು ಎಕರೆಯಲ್ಲಿ ಬಿತ್ತನೆಗೆ ಸಜ್ಜುಗೊಳಿಸಲಾಗಿತ್ತು. ಅಷ್ಟರಲ್ಲಿ ಜೆಡಿಎಸ್ ಮುಖಂಡರು-ಮಹದೇವಮ್ಮ ಪುತ್ರರಾದ ಯೋಗೇಂದ್ರ ಮತ್ತು ಲೋಕೇಶ್ ಅವರನ್ನು ಭೇಟಿಯಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಭತ್ತ ನಾಟಿ ಕಾರ್ಯಕ್ರಮಕ್ಕೆ ನಿಮ್ಮ ಜಮೀನನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಅದಕ್ಕೆ ಅವಕಾಶ ಮಾಡಿಕೊಡುವಂತೆ ಕೋರಿದರು.ಅದಕ್ಕೆ ಸಂತೋಷದಿಂದ ಒಪ್ಪಿಕೊಂಡಿದ್ದಾಗಿ ಲೋಕೇಶ್ “ಉದಯವಾಣಿ’ಗೆ ತಿಳಿಸಿದರು.
ಮುಖ್ಯಮಂತ್ರಿ ನಾಟಿ ಮಾಡುವ ಸ್ಥಳದಲ್ಲಿ ಮೂರು ಮಂದಿ ನಿಲ್ಲುವಂತೆ ವೇದಿಕೆ ನಿರ್ಮಿಸಲಾಗುವುದು.ಅಲ್ಲಿಂದಲೇ ಸಿಎಂ ಭತ್ತ ನಾಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಇವರೊಂದಿಗೆ ಪುರುಷ ಹಾಗೂ ಮಹಿಳಾ ಕೂಲಿ ಕಾರ್ಮಿಕರು ಸಾಥ್ ನೀಡಲಿದ್ದಾರೆ.
ಭರದ ಸಿದ್ಧತೆ: ಮುಖ್ಯಮಂತ್ರಿ ಆಗಮನದ ಹಿನ್ನೆಲೆಯಲ್ಲಿ ಸೀತಾಪುರ ಗ್ರಾಮವನ್ನು ನವ ವಧುವಿನಂತೆ ಸಿಂಗರಿಸಲಾಗುತ್ತಿದೆ. ಸಿಎಂ ಆಗಮನದ ದಾರಿಯುದ್ದಕ್ಕೂ ಸ್ವತ್ಛತಾ ಕಾರ್ಯ ಕೈಗೊಳ್ಳಲಾಗಿದೆ.ರಸ್ತೆ ಬದಿಯಲ್ಲಿ ಬೆಳೆದಿದ್ದ ಗಿಡ-ಗಂಟಿ ತೆರವು ಮಾಡಿದ್ದು, ಕಲ್ಲು-ಗುಂಡಿಗಳಿಂದ ತುಂಬಿದ್ದ ರಸ್ತೆಗೆ ಮಣ್ಣು ಹಾಕಿ ಮಟ್ಟ ಮಾಡಿ ಅದರ ಮೇಲೆಡಾಂಬರೀಕರಣ ಮಾಡಲಾಗಿದೆ. ಸಿಡಿಎಸ್ ನಾಲೆಯ ಮೇಲ್ಭಾಗದಲ್ಲಿ ಬೆಳೆದು ನಿಂತಿದ್ದ ಗಿಡಗಳೆಲ್ಲವನ್ನು ಕಿತ್ತುಹಾಕಿ ಸ್ವತ್ಛಗೊಳಿಸಲಾಗಿದೆ. ಸಿಎಂ ಕುಮಾರಸ್ವಾಮಿ ಆಗಮಿಸುವ ಸೀತಾಪುರ ಗ್ರಾಮದ ಹಾದಿಯುದ್ದಕ್ಕೂ ತಳಿರು-ತೋರಣಗಳನ್ನುಕಟ್ಟಲಾಗಿದೆ. ಗ್ರಾಮದ ಮುಖ್ಯ ರಸ್ತೆಯಿಂದ ಜಮೀನಿನವರೆಗೆ ಅಲಂಕೃತ ಹತ್ತು ಎತ್ತಿನ ಗಾಡಿಗಳಲ್ಲಿ ಕುಮಾರಸ್ವಾಮಿ ಅವರನ್ನು ಮೆರವಣಿಗೆ ಮೂಲಕ ಕರೆತರಲು ಸಿದ್ಧತೆ ನಡೆಸಲಾಗಿದೆ. ಮೊದಲ ಬಾರಿಗೆ ಮುಖ್ಯಮಂತ್ರಿಯೊಬ್ಬರು ಭತ್ತ ನಾಟಿ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿರುವುದು ಜನರ ಕುತೂಹಲ ಹೆಚ್ಚಿಸಿದೆ. ಸಿಎಂ ಭತ್ತ ನಾಟಿ ಕಾರ್ಯಕ್ರಮ ನಡೆಯುತ್ತದೆ ಎಂದು ಗೊತ್ತಿತ್ತು. ಆದರೆ, ನಮ್ಮ ಜಮೀನನ್ನು ಆಯ್ಕೆ
ಮಾಡಿಕೊಳ್ಳುವರೆಂದು ಖಂಡಿತ ನಿರೀಕ್ಷಿಸಿರಲಿಲ್ಲ. ನಮ್ಮ ಜಮೀನಿನಲ್ಲಿ ಸಿಎಂ ನಾಟಿ ಮಾಡಲು ಬರುತ್ತಿರುವುದು ಖುಷಿ ತಂದಿದೆ.
– ಲೋಕೇಶ್, ಮಹದೇವಮ್ಮನ ಮಗ – ಕುಮಾರಸ್ವಾಮಿ