Advertisement

ದೇಶದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 1.9 ಲಕ್ಷಕ್ಕೆ ಏರಿಕೆ: ಸಹಜ ಸ್ಥಿತಿಗೆ ಮರಳಿದ ಜನಜೀವನ

02:55 PM Jun 02, 2020 | Mithun PG |

ನವದೆಹಲಿ: ದೇಶದ 5ನೇ ಹಂತದ ಲಾಕ್ ಡೌನ್ ಅವಧಿಯಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳಿದ್ದು, ವೈರಸ್ ಆರ್ಭಟವಿರುವ ಪ್ರದೇಶಗಳಲ್ಲಿ ಮಾತ್ರ ನಿರ್ಬಂಧಗಳು ಮುಂದುವರೆದಿದೆ. ಸೋಮವಾರ ಅತೀ ಹೆಚ್ಚು  ಜನರು ಮಾರುಕಟ್ಟೆ ಸೇರಿದಂತೆ ಹಲವೆಡೆ ಪ್ರಯಾಣಿಸಿದ್ದರಿಂದ  ರಸ್ತೆಗಳಲ್ಲಿ ಸಂಚಾರ ದಟ್ಟನೆಯೂ ಕಂಡುಬಂದವು.

Advertisement

ಏತನ್ಮಧ್ಯೆ  ಭಾರತದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 1.9 ಲಕ್ಷ ತಲುಪಿದ್ದು, ಸೋಮವಾರ ಒಂದೇ ದಿನ 8,400 ಜನರು ಸೋಂಕಿಗೆ ತುತ್ತಾಗಿರುವುದು ದಾಖಲೆಯಾಗಿದೆ. ಮತ್ತೊಂದೆಡೆ ಮರಣ ಪ್ರಮಾಣವೂ ಏರುಗತಿಯಲ್ಲಿ ಸಾಗಿದ್ದು ಒಟ್ಟಾರೆಯಾಗಿ 5,394 ಜನರು ಮೃತಪಟ್ಟಿದ್ದಾರೆ. ಕಳೆದ 24 ಗಂಟೆಗಳ ಅವಧಿಯಲ್ಲಿ 230 ಜನರು ಸೋಂಕಿನ ಕಾರಣದಿಂದ ಪ್ರಾಣ ತ್ಯೆಜಿಸಿದ್ದಾರೆಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ದೇಶದಲ್ಲಿ ಒಟ್ಟಾರೆ ವೈರಾಣು ಪೀಡಿತರ ಸಂಖ್ಯೆ 1,90,535 ಇದ್ದರೆ, ಗುಣಮುಖರಾದವರ ಪ್ರಮಾಣ 92,000 ಎಂದು ವರದಿಯಾಗಿದೆ. ಭಾರತವೂ ಕೋವಿಡ್ 19 ಹಾಟ್ ಸ್ಪಾಟ್ ದೇಶಗಳಲ್ಲಿ 7ನೇ ಸ್ಥಾನದಲ್ಲಿ ಗುರುತಿಸಕೊಂಡಿದ್ದು ಅಮೆರಿಕಾ, ಬ್ರೆಜಿಲ್, ರಷ್ಯಾ, ಯುಕೆ, ಸ್ಪೇನ್, ಇಟಲಿ ಮೊದಲ 6 ಸ್ಥಾನಗಳಲ್ಲಿವೆ.

ಗಮನಾರ್ಹ ಸಂಗತಿಯೆಂದರೇ ಇತರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಸೋಂಕಿನಿಂದ ಗುಣಮುಖರಾಗುವವರ ಸಂಖ್ಯೆ ಹೆಚ್ಚಿದ್ದು ಮೃತರ ಪ್ರಮಾಣ ಕಡಿಮೆಯಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

Advertisement

ಜಾಗತಿಕವಾಗಿ 63 ಲಕ್ಷಕ್ಕಿಂತ ಹೆಚ್ಚು ಜನರು ಸೋಂಕಿಗೆ ತುತ್ತಾಗಿದ್ದು 3,77 ಲಕ್ಷದಷ್ಟು ಜನರು ಮೃತಪಟ್ಟಿದ್ದಾರೆ. ಅಮೆರಿಕಾವೊಂದರಲ್ಲೇ 1ಲಕ್ಷಕ್ಕಿಂತ ಹೆಚ್ಚು ಜನರು ಅಸುನೀಗಿದ್ದು, 18 ಲಕ್ಷ ಜನರು ವೈರಾಣುವಿಗೆ ಭಾಧಿತರಾಗಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next