Advertisement

PCMB ಪಠ್ಯ ಕಡಿತದ ಬಗ್ಗೆ ಸುತ್ತೋಲೆ

08:49 PM Apr 06, 2023 | Team Udayavani |

ಬೆಂಗಳೂರು: ಎನ್‌ಸಿಇಆರ್‌ಟಿ ಅಳವಡಿಸಿಕೊಂಡ ವಿಜ್ಞಾನ ಸಂಯೋಜನೆಯಲ್ಲಿನ ಪಿಸಿಎಂಬಿ, ವಾಣಿಜ್ಯ ಸಂಯೋಜನೆಯ ಲೆಕ್ಕಶಾಸ್ತ್ರ , ವ್ಯವಹಾರ ಅಧ್ಯಯನ ಮತ್ತು ಅರ್ಥಶಾಸ್ತ್ರ ವಿಷಯಗಳಲ್ಲಿ ಪಠ್ಯ ಕಡಿತ ಮಾಡಿರುವ ಬಗ್ಗೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

Advertisement

2023-24ನೇ ಸಾಲಿಗೆ ಎನ್‌ಸಿಇಆರ್‌ಟಿಯು ಪಠ್ಯವಸ್ತುವಿನಲ್ಲಿ ಕಡಿತಗೊಳಿಸಿರುವುದರಿಂದ ಪದವಿಪೂರ್ವ ಶಿಕ್ಷಣ ಇಲಾಖೆಯು ಎನ್‌ಸಿಇಆರ್‌ಟಿಯಿಂದ ಅಳವಡಿಸಿಕೊಂಡ ವಿಜ್ಞಾನ ಸಂಯೋಜನೆಯಲ್ಲಿನ ಪಿಸಿಎಂಬಿ, ವಾಣಿಜ್ಯ ವಿಷಯದ ಲೆಕ್ಕಶಾಸ್ತ್ರ, ವ್ಯವಹಾರ ಅಧ್ಯಯನ ಮತ್ತು ಅರ್ಥಶಾಸ್ತ್ರ ವಿಷಯಗಳಲ್ಲಿ ಸ್ವಲ್ಪ ಪ್ರಮಾಣದ ಪಠ್ಯ ಕಡಿತಗೊಳಿಸಿರುತ್ತದೆ. ಆದ್ದರಿಂದ 2023-24ನೇ ಸಾಲಿಗೆ ಮೇಲ್ಕಂಡ 7 ವಿಷಯಗಳ ಪರಿಷ್ಕೃತ ಪಠ್ಯವಸ್ತುವನ್ನು ಪರಿಗಣಿಸಲಾಗುವುದು. ಉಳಿದ ವಿಷಯಗಳ ಪಠ್ಯಕ್ರಮದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಈಗಾಗಲೇ ವಿದ್ಯಾರ್ಥಿಗಳು ಹಿಂದಿನ ಸಾಲಿನ ಪಠ್ಯಪುಸ್ತಕ ಖರೀದಿಸಿದ್ದರೆ ಕಡಿತಗೊಳಿಸಲಾಗಿರುವ ಪಠ್ಯ ವಸ್ತುವಿನ ಅಂಶಗಳು, ಅಧ್ಯಾಯಗಳನ್ನು ಹೊರತುಪಡಿಸಿ ಬಳಕೆ ಮಾಡಬಹುದು. ಕಡಿತವಾಗಿರುವ ಪಠ್ಯ ವಸ್ತುವನ್ನು ಇಲಾಖೆಯ ಜಾಲತಾಣದಲ್ಲಿ ಅಳವಡಿಸಲಾಗುವುದು ಎಂದು ಸುತ್ತೋಲೆಯಲ್ಲಿ ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next