Advertisement

ಪ್ರವಾಸಿ ತಾಣಗಳ ಆಸ್ತಿ ಹಸ್ತಾಂತರಕ್ಕೆ ಸುತ್ತೋಲೆ

07:00 AM Jul 17, 2018 | |

ಬೆಂಗಳೂರು: ರಾಜ್ಯದ ಪ್ರವಾಸಿ ತಾಣಗಳಲ್ಲಿ ಪಂಚಾಯಿತಿಗಳ ಮಾಲೀಕತ್ವಕ್ಕೆ ಒಳಪಟ್ಟಿರುವ ಜಮೀನು ಮತ್ತು ನಿವೇಶನಗಳ ಹಕ್ಕನ್ನು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸಲು ಕ್ರಮಕೈಗೊಳ್ಳುವಂತೆ ಎಲ್ಲ ಜಿಲ್ಲೆಗಳ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಗ್ರಾಮೀಣಾಭಿವೃದ್ಧಿ ಇಲಾಖೆ ಸೂಚನೆ ನೀಡಿದೆ.

Advertisement

ಪ್ರವಾಸೋದ್ಯಮ ಇಲಾಖೆಯು ರಾಜ್ಯದ ಬಹುತೇಕ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಯಾತ್ರಿ ನಿವಾಸ, ಡಾರ್ಮಿಟರಿ, ಶೌಚಾಲಯ ಸೇರಿ ಹಲವು ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸುತ್ತಿದೆ. ಆದರೆ, ಹಲವಾರು ಪ್ರವಾಸಿ ತಾಣಗಳಲ್ಲಿ ಜಮೀನು ಮತ್ತು ನಿವೇಶನಗಳು ಜಿ.ಪಂ., ತಾ.ಪಂ ಹಾಗೂ ಗ್ರಾಪಂಗಳ ಮಾಲೀಕತ್ವಕ್ಕೆ ಒಳಪಟ್ಟಿರುತ್ತವೆ. ಈ ಜಮೀನು, ನಿವೇಶನಗಳ ಹಕ್ಕು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಗೊಳ್ಳದಿದ್ದರೆ ಪ್ರವಾಸಿ ತಾಣಗಳ ಅಭಿವೃದ್ಧಿ ಕಷ್ಟವಾಗುತ್ತದೆ ಎಂದು ಸಚಿವ ಸಾ.ರಾ. ಮಹೇಶ್‌ ಪತ್ರ ಬರೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next