Advertisement

ಶಿಕ್ಷಕರ ವರ್ಗಾವಣೆಗೆ ಸುತ್ತೋಲೆ

11:40 PM Aug 20, 2019 | Team Udayavani |

ಬೆಂಗಳೂರು: ಹಲವು ಕಾರಣಗಳಿಂದ ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದ್ದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ಆ.23ರಿಂದ ಮುಂದುವರಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಇದಕ್ಕೆ ಸಂಬಂಧಿಸಿದಂತೆ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಲಾಗಿದ್ದು, ಹಾಗೆಯೇ ಕೆಲವೊಂದು ಪರಿಷ್ಕರಣೆಯನ್ನೂ ಮಾಡಲಾಗಿದೆ.

Advertisement

ಹೊಸ ಪರಿಷ್ಕರಣೆಗಳ ಅನುಸಾರ ಆಯಾ ಪ್ರಾಧಿಕಾರಗಳು ಅಗತ್ಯ ಕ್ರಮ ತೆಗೆದುಕೊಂಡು ನಿಗದಿತ ದಿನಾಂಕದೊಳಗೆ ಕೌನ್ಸೆಲಿಂಗ್‌ ಪ್ರಕ್ರಿಯೆ ಪೂರ್ಣಗೊಳಿಸಲು ಸಾರ್ವಜನಿಕ ಶಿಕ್ಷಣ ಇಲಾ ಞಖೆಯ ಆಯುಕ್ತರು ನಿರ್ದೇಶನ ನೀಡಿದ್ದಾರೆ. ಆ.23 ಮತ್ತು 24ರಂದು ಘಟಕದೊಳಗಿನ ಕೋರಿಕೆ ವರ್ಗಾವಣೆ ಕೌನ್ಸೆಲಿಂಗ್‌, 26ರಂದು ದೈಹಿಕ ಶಿಕ್ಷಕರು, ವಿಶೇಷ ಶಿಕ್ಷಕರ ಘಟಕದೊಳಗಿನ ಕೋರಿಕೆ ವರ್ಗಾವಣೆ ಕೌನ್ಸೆಲಿಂಗ್‌,

27ರಂದು ಘಟಕದ ಒಳಗಿನ ಪರಸ್ಪರ ವರ್ಗಾವಣೆ ಕೌನ್ಸೆಲಿಂಗ್‌, 28ರಂದು ಎ-ವಲಯದಿಂದ ಸಿ-ವಲಯದ ಕಡ್ಡಾಯ ವರ್ಗಾವಣೆಯು ಶೇ.20ರಷ್ಟು ಹುದ್ದೆ ಖಾಲಿ ಇರುವ ಘಟಕಕ್ಕೆ ಆದ್ಯತೆ ವರ್ಗಾವಣೆಗೆ ಕೌನ್ಸೆಲಿಂಗ್‌ ನಡೆಯಲಿದೆ. ಆ.29ರಿಂದ 31ರವರೆಗೆ ಎ-ವಲಯದಿಂದ ಬಿ-ವಲಯದ ಕಡ್ಡಾಯ ವರ್ಗಾವಣೆ ಕೌನ್ಸೆಲಿಂಗ್‌ ನಡೆಯಲಿದೆ. ಘಟಕದ ಹೊರಗಿನ ಕೋರಿಕೆ ಮತ್ತು ಪರಿಸ್ಪರ ವರ್ಗಾವಣೆಯು ಸೆ.6ರಿಂದ 16ರವರೆಗೆ ನಡೆಯಲಿದೆ ಎಂದು ಇಲಾಖೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next