Advertisement

ವಲಯ ಮಟ್ಟದ ಕರಾಟೆ ಸ್ಪರ್ಧೆ ಉದ್ಘಾಟನೆ

05:40 AM Jul 20, 2017 | Team Udayavani |

ಬಸ್ರೂರು: ಸಾರ್ವಜನಿಕ ಶಿಕ್ಷಣ ಇಲಾಖೆ, ಕೆ.ಜೆ. ಜಗನ್ನಾಥ್‌ ರಾವ್‌ ಸರಕಾರಿ ಪ್ರೌಢ ಶಾಲೆ ಕೋಣಿ ಇವರ ಆಶ್ರಯದಲ್ಲಿ ಕುಂದಾಪುರ ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಭಾಗದ ಕರಾಟೆ ಸ್ಪರ್ಧೆ ಬುಧವಾರ ಜರಗಿತು.
ಜಿ.ಪಂ. ಸದಸ್ಯೆ ಲಕ್ಷ್ಮೀ ಮಂಜು ಬಿಲ್ಲವ ಅವರು ಕರಾಟೆ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿ, ಕೋಣಿಯಂತಹ ಗ್ರಾಮೀಣ ಪ್ರದೇಶದಲ್ಲಿ ವಲಯ ಮಟ್ಟದ ಕರಾಟೆ ಸ್ಪರ್ಧೆ ನಡೆಯುತ್ತಿರುವುದು ಶ್ಲಾಘನೀಯ. ಊರ ದಾನಿಗಳ ಸಹಕಾರದಿಂದ ಉತ್ತಮ ಗುಣ ಮಟ್ಟದ ಶಿಕ್ಷಣ ನೀಡುತ್ತಿರುವ ಕೆ.ಜೆ.ಜಗನ್ನಾಥ್‌ ರಾವ್‌ ಸರಕಾರಿ ಪ್ರೌಢ ಶಾಲೆ ಪರಿಸರದಲ್ಲಿ ಗಮನಾರ್ಹ ಕಾರ್ಯ ನಿರ್ವಹಿಸುತ್ತಿದೆ ಎಂದರು.

Advertisement

ಕೋಣಿ ಗ್ರಾ.ಪಂ. ಅಧ್ಯಕ್ಷ ಕೆ.ಸಂಜೀವ ಮೊಗವೀರ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದು, ವಿದ್ಯಾರ್ಥಿಗಳಿಗೆ ರಕ್ಷಣೆಯ ದೃಷ್ಟಿಯಿಂದ ಕರಾಟೆ ಮಹತ್ವ ಪಡೆಯುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ಕೋಣಿ ತಾ.ಪಂ. ಸದಸ್ಯೆ ಚಂದ್ರಲೇಖಾ ಎಸ್‌. ಪೂಜಾರಿ, ಸಮಾಜ ಸೇವಕ  ಕೃಷ್ಣ ದೇವ ಕಾರಂತ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕುಂದಾಪುರ ವಲಯ ಅಧ್ಯಕ್ಷ  ಮಲ್ಯಾಡಿ ಸದಾರಾಮ ಶೆಟ್ಟಿ, ಕರಾಟೆ ಶಿಕ್ಷಕ ಕಿರಣ ಕುಂದಾಪುರ,ಉಡುಪಿ ಜಿಲ್ಲಾ  ಕರಾಟೆ ಎಸೋಸಿಯೇಶನ್‌ ಅಧ್ಯಕ್ಷ  ರವಿ ಸಾಲಿಯಾನ್‌, ಕಾರ್ಯದರ್ಶಿ ರೋಹಿತ್‌, ಗ್ರಾ.ಪಂ.ಸದಸ್ಯೆ ಸುಮತಿ, ಎಸ್‌.ಡಿ.ಎಂ.ಸಿ. ಸದಸ್ಯ ಬಾಬು ಪೂಜಾರಿ ಉಪಸ್ಥಿತರಿದ್ದು ಶುಭಕೋರಿದರು.
ಶಾಲಾ ಮುಖ್ಯೋಪಾಧ್ಯಾಯ ಸುರೇಶಪ್ಪ ಎಂ.ಸ್ವಾಗತಿಸಿದರು.ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ದತ್ತಾತ್ರೇಯ ನಾಯಕ್‌ ಪ್ರಾಸ್ತಾವಿಕ ಮಾತಗಳನ್ನಾದರು. ಶಿಕ್ಷಕಿ ಅಖೀಲ್‌ ಕುಮಾರಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. 
ದೈ. ಶಿಕ್ಷಣ ನಿರ್ದೇಶಕಿ ಕಾಂತಿಮಣಿ ಅವರು ವಂದಿಸಿದರು. ಬಳಿಕ ಕರಾಟೆ ಪಂದ್ಯ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next