Advertisement
25ರ ಹರೆಯದ ಜೆಕ್ ಗಣರಾಜ್ಯದ ಪ್ಲಿಸ್ಕೋವಾ ಮೊದಲಿಗೆ ಇಟಲಿಯ ಅರ್ಹತಾ ಆಟಗಾರ್ತಿ ಜಿಯೋರ್ಗಿ ಅವರನ್ನು 6-3, 4-6, 6-0 ಸೆಟ್‌ಗಳಿಂದ ಸೋಲಿಸಿದರು. ಈ ಪಂದ್ಯ ಮಳೆಯಿಂದ ಮುಂದೂಡಲಾಗಿತ್ತು. ಎರಡು ಗಂಟೆಯ ಬಳಿಕ ಮತ್ತೆ ಅಂಗಣಕ್ಕೆ ಆಗಮಿಸಿದ ಪ್ಲಿಸ್ಕೋವಾ ಡೆನ್ಮಾರ್ಕ್‌ನ ಐದನೇ ಶ್ರೇಯಾಂಕದ ಕ್ಯಾರೋಲಿನ್ ವೋಜ್ನಿಯಾಕಿ ಅವರನ್ನು 6-2, 6-4 ನೇರ ಸೆಟ್‌ಗಳಿಂದ ಉರುಳಿಸಿ ಅಂತಿಮ ನಾಲ್ಕರ ಸುತ್ತಿಗೇರಿದರು.
Related Articles
Advertisement
ನಡಾಲ್‌ಗೆ ಆಘಾತಸಿನ್ಸಿನಾಟಿ: ಮುಂದಿನ ವಾರ ವಿಶ್ವದ ನಂಬರ್ ವನ್ ರ್‍ಯಾಂಕ್ ಪಡೆಯಲಿರುವ ಸ್ಪೇನ್‌ನ ರಫೆಲ್ ನಡಾಲ್ ಅವರನ್ನು ನೇರ ಸೆಟ್‌ಗಳಿಂದ ಉರುಳಿಸಿದ ಆಸ್ಟ್ರೇಲಿಯದ ನಿಕ್ ಕಿರ್ಗಿಯೋಸ್ ಅವರು ಸಿನ್ಸಿನಾಟಿ ಓಪನ್ ಟೆನಿಸ್ ಕೂಟದ ಸೆಮಿಫೈನಲ್ ಹಂತಕ್ಕೇರಿದರು. 15 ಬಾರಿಯ ಗ್ರ್ಯಾನ್ ಸ್ಲಾಮ್ ಚಾಂಪಿಯನ್ ಆಗಿರುವ ನಡಾಲ್ ಅವರನ್ನು 6-2, 7-5 ಸೆಟ್‌ಗಳಿಂದ ಸೋಲಿಸಿದ ಕ್ಯಾನ್‌ಬೆರಾದ 22ರ ಹರೆಯದ ಕಿರ್ಗಿಯೋಸ್ ಅಂತಿಮ ನಾಲ್ಕರ ಸುತ್ತಿಗೇರಿದರು. ಸೆಮಿಫೈನಲ್‌ನಲ್ಲಿ ಅವರು ಸ್ಪೇನ್‌ನ ಡೇವಿಡ್ ಫೆರರ್ ಅವರ ಸವಾಲನ್ನು ಎದುರಿಸಲಿದ್ದಾರೆ. ಇನ್ನೊಂದು ಸೆಮಿಫೈನಲ್ ಪಂದ್ಯ ಬಲ್ಗೇರಿಯದ ಗ್ರಿಗರ್ ದಿಮಿತ್ರೋವ್ ಮತ್ತು ಅಮೆರಿಕದ ಜಾನ್ ಇಸ್ನರ್ ನಡುವೆ ನಡೆಯಲಿದೆ. ಈ ಮೊದಲು ನಡೆದ ಪಂದ್ಯದಲ್ಲಿ ಕಿರ್ಗಿಯೋಸ್ ಕ್ರೊವೇಶಿಯದ ಇವೊ ಕಾರ್ಲೋವಿಕ್ ಅವರನ್ನು 5-6, 7-6 (8-6), 6-3 ಸೆಟ್‌ಗಳಿಂದ ಸೋಲಿಸಿದ್ದರೆ ನಡಾಲ್ ತನ್ನ ದೇಶದವರೇ ಆದ ಆಲ್ಬರ್ಟ್ ರಾಮೋಸ್ ವಿನೋಲಾಸ್ ಅವರನ್ನು 7-6 (7-1), 6-2 ಸೆಟ್‌ಗಳಿಂದ ಕೆಡಹಿದ್ದರು. ಎರಡು ವರ್ಷಗಳ ಬಳಿಕ ತನ್ನ ಶ್ರೇಷ್ಠ ನಿರ್ವಹಣೆ ನೀಡಿದ ಕಿರ್ಗಿಯೋಸ್ ತನ್ನ ಬಾಳ್ವೆಯ ನಾಲ್ಕನೇ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದಾರೆ. 2016ರಲ್ಲಿ ಅವರು ಮಾರ್ಸೆಲ್ಲೆ, ಅಟ್ಲಾಂಟಾ ಮತ್ತು ಟೋಕಿಯೋದಲ್ಲಿ ಪ್ರಶಸ್ತಿ ಜಯಿಸಿದ್ದರು.