ಪುತ್ತೂರು: ನಗ- ನಗದು ಕದಿಯುವ ಗ್ಯಾಂಗ್‌ಗಳ ಬಗ್ಗೆ ಕೇಳಿದ್ದೇವೆ. ಆದರೆ ಸಿಗರೇಟ್ ಕದಿಯುವ ಗ್ಯಾಂಗ್‌ಗಳಿವೆ ಎಂದು ಕೇಳಿದ್ದೀರಾ? ಇದು ಆಶ್ಚರ್ಯವಾದರೂ ಸತ್ಯ. ಸಿಗರೇಟ್ ಕದಿಯುವ ಗ್ಯಾಂಗ್‌ಗಳು ಸಕ್ರಿಯವಾಗಿದ್ದು, ಇವು ರಾಷ್ಟ್ರ ಮಟ್ಟದ ವರೆಗೂ ಸಂಪರ್ಕ ಹೊಂದಿವೆ ಎನ್ನುವುದೂ ವಾಸ್ತವ.
Advertisement
ಪುತ್ತೂರಿನಲ್ಲಿ 2015ರ ಆಗಸ್ಟ್ 20ರಂದು ಬೆಳಗ್ಗೆ ಸಿಗರೇಟ್ ಕಳ್ಳತನ ನಡೆದ ಪ್ರಕರಣ ಬೆಳಕಿಗೆ ಬಂದಿತ್ತು. ಬರೋಬ್ಬರಿ 16 ಲಕ್ಷ ರೂ. ಮೌಲ್ಯದ ಸಿಗರೇಟ್ ಕಳ್ಳತನ ಮಾಡಲಾಗಿತ್ತು. ಕುತೂಹಲದ ವಿಷಯ ಏನೆಂದರೆ, ಗೋಡೌನ್‌ನಲ್ಲಿದ್ದ ಬ್ರಿಸ್ಟಲ್ ಕಂಪೆನಿಯ ಸಿಗರೇಟನ್ನು ಬಿಟ್ಟು, ವಿಲ್ಸ್ ಕಂಪೆನಿಯ ಸಿಗರೇಟನ್ನು ಮಾತ್ರ ಕಳವು ಮಾಡಿದ್ದರು. ಕೃತ್ಯ ಎಸಗಿರುವುದು ಒಂದು ಗ್ಯಾಂಗ್ ಮಾತ್ರವಾದರೂ, ಇದರ ಹಿಂದೆ ಏಜೆನ್ಸಿ, ಡೀಲರ್‌ಗಳು ಶಾಮೀಲಾಗಿರುವುದು ನಿಚ್ಚಳ.
ಪೊಲೀಸ್ ಶ್ವಾನ ಸಾಮೆತ್ತಡ್ಕಕ್ಕೆ ಒಂದು ಸುತ್ತು ಹಾಕಿ ಹಿಂದಿರುಗಿತು. ಬೆರಳಚ್ಚು ತಜ್ಞರು ತಮ್ಮ ಕೆಲಸ ಮುಗಿಸಿದರು. ಆದರೂ ಕಳ್ಳರ ಸುಳಿವು ಪತ್ತೆ ಆಗಲಿಲ್ಲ. ಗೋದಾಮು ಹೊರಭಾಗದಲ್ಲಿ ಅಂಗಡಿಗೆ ಮುಖ ಮಾಡಿದ್ದ ಸಿಸಿ ಕೆಮರಾ ಹಾಳುಗೆಡ ವಲಾಗಿತ್ತು. ಮಾರ್ಗಕ್ಕೆ ಮುಖ ಮಾಡಿ ಯಾವುದೇ ಕೆಮರಾ ಇರಲಿಲ್ಲ. ಇದ್ದಿದ್ದರೆ ವಾಹನದ ನಂಬರ್ ದಾಖಲಾಗುತ್ತಿತ್ತು. ಸಮೀಪದ ಇನ್ನೊಂದು ಸಿಸಿ ಕೆಮರಾದ ಅಸ್ಪಷ್ಟ ಚಿತ್ರವನ್ನು ನೋಡಿ, ಕೃತ್ಯಕ್ಕೆ ಇನ್ನೋವಾ ಕಾರು ಬಳಸಲಾಗಿದೆ ಎಂದು ತೀರ್ಮಾನಿಸಲಾಯಿತು. ಗೋದಾಮಿನ ಹೊರಭಾಗದಲ್ಲಿ ಓರ್ವ ವ್ಯಕ್ತಿ ನಿಂತಿದ್ದ. ಮತ್ತೂಬ್ಬ ಒಳಭಾಗಕ್ಕೆ ಬಂದಿದ್ದರೂ, ರಾತ್ರಿ ಹೊತ್ತಾದ ಕಾರಣ ಸಿಸಿ ಕೆಮರಾ ಸರಿಯಾದ ಚಹರೆ ಸೆರೆಹಿಡಿದಿಲ್ಲ. ಇಷ್ಟು ಅಸ್ಪಷ್ಟ ಮಾಹಿತಿಯನ್ನು ಹಿಡಿದು ಕೊಂಡ ಪೊಲೀಸರು, ನೆರೆ ರಾಜ್ಯ ಕೇರಳದ ಗ್ಯಾಂಗ್ ಕೃತ್ಯ ಇದಾಗಿರಬಹುದು ಎಂದು ಶಂಕಿಸಿದರು. ಕೇರಳದಲ್ಲಿ ಒಂದಷ್ಟು ತನಿಖೆ ಮಾಡುತ್ತಿದ್ದಂತೆ, ಆಂಧ್ರ ಪ್ರದೇಶದ ಗ್ಯಾಂಗ್‌ನ ಕೃತ್ಯ ಇದೆಂಬ ತೀರ್ಮಾನಕ್ಕೆ ಬಂದು, ಆಂಧ್ರಕ್ಕೂ ಮುಖ ಮಾಡಿದರು. ಬಳಿಕ ಮುಂಬೈ, ಪುಣೆ ಎಂದು ತಲೆಕೆಡಿಸಿಕೊಂಡರು. ಈ ನಡುವೆ ಕೇಂದ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಸಂಪರ್ಕಿಸಿ ದಾಗ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದ ಕಡೆ ಬೊಟ್ಟು ಮಾಡಿತು.
Related Articles
Advertisement
ಕೆಲಸದ ಒತ್ತಡದಲ್ಲಿರುವ ಪೊಲೀಸರು ಇಷ್ಟು ತನಿಖೆ ನಡೆಸುವಾಗಲೇ ಒಂದು ವರ್ಷ ಸಮೀಪಿಸಿತ್ತು. ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ನೇತೃತ್ವದಲ್ಲಿ 4 ತಂಡ ಮಾಡಲಾಗಿತ್ತು. ಪ್ರತಿ ತಂಡದಲ್ಲೂ ಓರ್ವ ಎಸ್‌ಐ ಅಥವಾ ಎಎಸ್‌ಐ ಸಹಿತ ಐವರಿದ್ದರು. ಬಹಳ ಶ್ರಮಪಟ್ಟು ನಿರಾಶೆ ಹೊಂದಿದ ಪೊಲೀಸರು, ಇದು ಪತ್ತೆ ಯಾಗದ ಪ್ರಕರಣ ಎಂದು ಸಿ ರಿಪೋರ್ಟ್ ಹಾಕಿದರು.
ಹಾಸನದಲ್ಲೂ ದರೋಡೆಇದಕ್ಕೂ ಒಂದು ವರ್ಷ ಮೊದಲು ಕಲ್ಲಾರೆಯ ಡ್ಯಾಶ್ ಮಾರ್ಕೆಟಿಂಗ್ ಸಂಸ್ಥೆಗೆ ಸಿಗರೇಟು ಹೊತ್ತು ತರುತ್ತಿದ್ದ ಲಾರಿಯನ್ನು ಹಾಸನದ ಬಳಿ ನಿಲ್ಲಿಸಲಾಗಿತ್ತು. ಚಾಲಕ ನಿದ್ರೆಗೆ ಜಾರುತ್ತಿದ್ದಂತೆ, ಲಾರಿಯ ಟರ್ಪಾ ಲು ಹರಿದು 12 ಲಕ್ಷ ರೂ.ಗಳ ಬಂಡಲ್ ಕದಿಯಲಾಗಿತ್ತು. ಇದರ ತನಿಖೆಯನ್ನು ಹಾಸನ ಪೊಲೀಸರು ಕೈಗೆತ್ತಿಕೊಂಡಿದ್ದರು. 16.24 ಲಕ್ಷ ರೂ. ಮೌಲ್ಯದ ಸಿಗರೇಟ್ ಕಳ್ಳತನ!
2015ರ ಆಗಸ್ಟ್ 20ರಂದು ಬೆಳಗ್ಗೆ ಪುಷ್ಪರಾಜ್ ಶೆಟ್ಟಿ ಅವರು ಪುತ್ತೂರಿನ ಕಲ್ಲಾರೆಯಲ್ಲಿರುವ ತನ್ನ ಡ್ಯಾಶ್ ಮಾರ್ಕೆಟಿಂಗ್ ಸಂಸ್ಥೆಯ ಗೋದಾಮಿಗೆ ಬಂದಾಗ, ಬಾಗಿಲು ಮುರಿದಿರುವುದು ಗಮನಕ್ಕೆ ಬಂದಿತು. ಬಳಿ ಹೋದಾಗ ಶಟರ್ ಮುರಿದು, ಒಳಗಿನಿಂದ ಲಕ್ಷಾಂತರ ರೂ.ಗಳ ಸಿಗರೇಟ್ ಕಳವು ಮಾಡಿದ್ದು ಗೊತ್ತಾಗಿ, ಪೊಲೀಸರಿಗೆ ವಿಷಯ ತಿಳಿಸಲಾಯಿತು. ಪೊಲೀಸರು ಪರಿಶೀಲನೆ ನಡೆಸುವಾಗ 16,24,827 ರೂ. ಮೌಲ್ಯದ ಸಿಗರೇಟುಗಳು ಕಳವಾಗಿದ್ದವು. ಗೋದಾಮಿನಲ್ಲಿದ್ದ ಬ್ರಿಸ್ಟಲ್ ಸಿಗರೇಟ್ ಬಿಟ್ಟು, ಕೇವಲ ವಿಲ್ಸ್ ಕಂಪೆನಿಯ ಸಿಗರೇಟನ್ನು ಮಾತ್ರ ಕದಿಯಲಾಗಿತ್ತು. ಅದರ ವಿವಿಧ ಬ್ರಾಂಡ್, ಕದ್ದ ಮಾಲು ಹೀಗಿವೆ- ಕ್ಲಾಸಿಕ್ ಮಿಲ್ಡ್ 18 ಬಂಡಲ್, ಅಲ್ಟ್ರಾ ಕ್ಲಾಸಿಕ್ ಮಿಲ್ಡ್ 6 ಬಂಡಲ್, ಗೋಲ್ಡ್ ಫ್ಲೆàಕ್ ಕಿಂಗ್ 6 ಕೇಸ್, ಗೋಲ್ಡ್ ಫ್ಲೆàಕ್ ಕಿಂಗ್ ಎಲ್‌ಟಿಎಸ್ 3 ಕೇಸ್, ಗೋಲ್ಡ್ ಫ್ಲೆàಕ್ ಕಿಂಗ್ ಎಸ್‌ಎಂಎಲ್‌ಆರ್ 7 ಕೇಸ್, ಗೋಲ್ಡ್ ಫ್ಲೆàಕ್ ಸೆಂಚುರಿ 1 ಕೇಸ್, ಗೋಲ್ಡ್ ಫ್ಲೆàಕ್ ಕಾಂಪ್ಯಾಕ್ಟ್ ಸಿಗರೇಟು 23 ಬಂಡಲ್, ಕಿಂಗ್ ಕಂಪೆನಿಯ ಎಲ್‌ಟಿಎಸ್ ಕಂಪೆಕ್ಟ್ 2 ಬಂಡಲ್ ಕಳವಾಗಿತ್ತು. ಗಣೇಶ್ ಎನ್. ಕಲ್ಲಪೆ