Advertisement

Dinesh Phadnis: ʼಸಿಐಡಿʼ ಧಾರಾವಾಹಿಯ ನಟನಿಗೆ ಹೃದಯಾಘಾತ

11:13 AM Dec 03, 2023 | Team Udayavani |

ಮುಂಬಯಿ: ಹಿಂದಿಯ ಜನಪ್ರಿಯ ಧಾರಾವಾಹಿ ʼಸಿಐಡಿʼಯ ನಟ ದಿನೇಶ್ ಫಡ್ನಿಸ್(57) ಅವರಿಗೆ ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ಡಿಸೆಂಬರ್‌ 1 ರಂದು ಅವರಿಗೆ ಹೃದಯಾಘಾತವಾಗಿದ್ದು, ಕೂಡಲೇ ಅವರನ್ನು  ಮುಂಬೈನ ತುಂಗಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರು ಚೇತರಿಕೆ ಕಾಣುತ್ತಿದ್ದಾರೆ ಎಂದು . ʼಸಿಐಡಿʼಯಲ್ಲಿ ದಯಾ ಪಾತ್ರವನ್ನು ನಿರ್ವಹಿಸಿದ ದಯಾನಂದ ಶೆಟ್ಟಿ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.

‘ಸಿಐಡಿ’ ಧಾರಾವಾಹಿ ಕಾರ್ಯಕ್ರಮದಲ್ಲಿ ನಟಿಸಿ ಅಪಾರ ಜನಪ್ರಿಯತೆಯನ್ನು ಪಡೆದುಕೊಂಡವರಲ್ಲಿ ನಟ ದಿನೇಶ್ ಫಡ್ನಿಸ್ ಕೂಡ ಒಬ್ಬರು. ʼಸಿಐಡಿʼಯಲ್ಲಿ ಅವರು ಫ್ರೆಡೆರಿಕ್ಸ್ ಎನ್ನು ಪಾತ್ರವನ್ನು ಮಾಡುತ್ತಿದ್ದರು. 20 ವರ್ಷ ಅವರು ಸಿಐಡಿಯಲ್ಲಿ ಸರಣಿಯಲ್ಲಿ ತಂಡದ ಭಾಗವಾಗಿದ್ದರು.

ಸಿಐಡಿಯಲ್ಲಿ ಮಾತ್ರವಲ್ಲದೆ, ಮತ್ತೊಂದು ಜನಪ್ರಿಯ ಧಾರಾವಾಹಿ ‘ತಾರಕ್ ಮೆಹ್ತಾ ಕಾ ಊಲ್ಟಾ ಚಶ್ಮಾ’ ದಲ್ಲಿ ಕೆಲ ಅವರು ಸಣ್ಣ ಪಾತ್ರವನ್ನು ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next