Advertisement

“ಚುಟು ಚುಟು’ನಂತರ “ಕುಟು ಕುಟು’ಎಂದ ಶರಣ್: Watch

03:59 PM Oct 05, 2018 | |

“ರ‍್ಯಾಂಬೋ’ 2 ಚಿತ್ರದ ನಂತರ ನಟ ಶರಣ್ ಅಭಿನಯದ “ವಿಕ್ಟರಿ 2′ ಚಿತ್ರದ ಟ್ರೈಲರ್ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದರೆ, ಇತ್ತ ಚಿತ್ರತಂಡ ಚಿತ್ರದ “ಕುಟು ಕುಟು’ ಎಂಬ ಹಾಡನ್ನು ಬಿಡುಗಡೆ ಮಾಡಿದ್ದು, ಜಬರ್ದಸ್ತ್ ಆಗಿ ಶರಣ್ ಹಾಗೂ ಅಪೂರ್ವ ಜವಾರಿ ಟಿಪಿಕಲ್​ ಉತ್ತರ ಕನ್ನಡ ಶೈಲಿಯ ಸಾಂಗ್‍ಗೆ ಹೆಜ್ಜೆ ಹಾಕಿದ್ದಾರೆ.

Advertisement

ಅರ್ಜುನ್​ ಜನ್ಯಾ ಮ್ಯೂಸಿಕ್​ ಕಂಪೋಸ್​ ಮಾಡಿರೋ ಈ ಹಾಡಿಗೆ ಶಿವು ಬೆರ್ಗಿ ಸಾಹಿತ್ಯ ರಚಿಸಿದ್ದು, ಹಾಡನ್ನ ಶಮಿತಾ ಮಲ್ನಾಡ್​ ಹಾಗೂ ಶಬ್ಬಿರ್​ ಧಂಗೆ ಹಾಡಿದ್ದಾರೆ. ಅಲ್ಲದೇ ರಷ್ಯಾದ ಬಾಕುವಿನಲ್ಲಿ ಚಿತ್ರೀಕರಣ ಆಗಿರೋ ಈ ಎನರ್ಜಿಟಿಕ್​​ ಹಾಡಿಗೆ ಧನು ಮಾಸ್ಟರ್ ಕೊರಿಯೋಗ್ರಾಫ್​​ ಮಾಡಿದ್ದಾರೆ. ಚಿತ್ರವು ಪಕ್ಕಾ ಕಾಮಿಡಿ ಎಂಟರ್​ಟ್ರೈನರ್ ಆಗಿದ್ದು, ಡಬಲ್ ಮಿನಿಂಗ್ ಡೈಲಾಗ್ ಅಬ್ಬರ ಜೋರಾಗಿದೆ. ಶರಣ್ ಜತೆ ಸಾಧು ಕೋಕಿಲಾ ಹಾಗೂ ರವಿಶಂಕರ್ ವಿಶೇಷ ಗೆಟಪ್‍ನಲ್ಲಿ ಮಿಂಚಿರುವುದು ಮತ್ತಷ್ಟು ಹಾಸ್ಯಭರಿತವನ್ನಾಗಿಸಿದೆ.

ಇನ್ನು ಶರಣ್ ಎದುರಿಗೆ ನಾಯಕಿಯರಾಗಿ ಅಸ್ಮಿತಾ ಸೂದ್‌ ಹಾಗೂ ಅಪೂರ್ವ ನಟಿಸಿದ್ದಾರೆ. ಚಿತ್ರವನ್ನು ತರುಣ್‌ ಶಿವಪ್ಪ ನಿರ್ಮಿಸುತ್ತಿದ್ದು, ತರುಣ್ ಸುಧೀರ್ ಅವರ ಕಥೆ ಇದೆ. ಬಹುತೇಕ “ವಿಕ್ಟರಿ’ ತಂಡವೇ ಇಲ್ಲೂ ಕೆಲಸ ಮಾಡಿದೆ. ಹರಿ ಸಂತೋಷ ನಿರ್ದೇಶನ, ಅರ್ಜುನ್ ಜನ್ಯ ಸಂಗೀತ ಚಿತ್ರಕ್ಕಿದ್ದು, ತಬಲಾ ನಾಣಿ, ನಾಸೀನ್, ಅವಿನಾಶ್, ಮಿತ್ರಾ, ಕಲ್ಯಾಣಿ, ಅರಸು ಮತ್ತು ಸಿದ್ದಿ ಸೇರಿದಂತೆ ದೊಡ್ಡ ತಾರಾಬಳಗವಿದೆ.

Advertisement

Udayavani is now on Telegram. Click here to join our channel and stay updated with the latest news.

Next