Advertisement
ಮೂಲಂಗಿ ಚಟ್ನಿ ಬೇಕಾದ ಸಾಮಗ್ರಿ:
ಮೂಲಂಗಿ ತುರಿ-1 ಕಪ್, ಒಣಮೆಣಸಿನಕಾಯಿ-5-6, ತೆಂಗಿನಕಾಯಿ ತುರಿ-1/2 ಕಪ್, ಉಪ್ಪು-ರುಚಿಗೆ ತಕ್ಕಷ್ಟು, ಕರಿಬೇವಿನ ಎಲೆಗಳು- 8-10, ಹುಣಸೆ ಹಣ್ಣು- 1 ಇಂಚಿನಷ್ಟು, ಬೆಲ್ಲದ ತುರಿ- 1 ಚಮಚ, ಎಣ್ಣೆ-4 ಚಮಚ, ಸಾಸಿವೆ- 1 ಚಮಚ, ಇಂಗು- 1/4 ಚಮಚ
ಬೇಕಾಗುವ ಸಾಮಗ್ರಿ: ಕ್ಯಾರೆಟ್ ಹೋಳು- 2 ಕಪ್, ತೆಂಗಿನಕಾಯಿ ತುರಿ-1 ಕಪ್, ಒಣಮೆಣಸಿನಕಾಯಿ- 4-5, ಹುಣಸೆ ಹಣ್ಣು- 1 ಇಂಚಿನಷ್ಟು, ಉಪ್ಪು- ರುಚಿಗೆ ತಕ್ಕಷ್ಟು, ಕರಿಬೇವಿನ ಸೊಪ್ಪು- 7-8 ಎಲೆಗಳು, ಎಣ್ಣೆ- 3 ಚಮಚ, ಸಾಸಿವೆ- 1 ಚಮಚ, ಇಂಗು- 1/4 ಚಮಚ
Related Articles
Advertisement
ಕರಿಬೇವು ಸೊಪ್ಪಿನ ಚಟ್ನಿ ಬೇಕಾದ ಸಾಮಗ್ರಿ: ಕರಿಬೇವಿನ ಎಲೆಗಳು-1 ಕಪ್, ಜೀರಿಗೆ-3 ಚಮಚ, ಹಸಿಮೆಣಸಿನಕಾಯಿ- 5-6, ಹುಣಸೆ ಹಣ್ಣು- 2 ಇಂಚಿನಷ್ಟು, ಉಪ್ಪು- ರುಚಿಗೆ ತಕ್ಕಷ್ಟು, ತೊಗರಿಬೇಳೆ- 4 ಚಮಚ, ತೆಂಗಿನಕಾಯಿ ತುರಿ- 1 ಕಪ್, ಎಣ್ಣೆ- 1/4 ಕಪ್, ಸಾಸಿವೆ- 1 ಚಮಚ, ಇಂಗು- 1/4 ಚಮಚ ಮಾಡುವ ವಿಧಾನ- ತೊಗರಿಬೇಳೆ, ಹುಣಸೆಹಣ್ಣು, ಹಸಿಮೆಣಸಿನಕಾಯಿ, ಕರಿಬೇವಿನ ಎಲೆಗಳನ್ನು ಎಣ್ಣೆಯಲ್ಲಿ ಹುರಿದಿರಿಸಿ. ಹುರಿದ ಸಾಮಗ್ರಿಗಳಿಗೆ, ತೆಂಗಿನಕಾಯಿ ತುರಿ, ಜೀರಿಗೆ, ಉಪ್ಪು ಸೇರಿಸಿ ಚಟ್ನಿಯ ಹದಕ್ಕೆ ಅರೆದಿರಿಸಿ. ಅರೆದ ಮಿಶ್ರಣಕ್ಕೆ, ಸಾಸಿವೆ- ಇಂಗಿನ ಒಗ್ಗರಣೆ ಕೊಟ್ಟರೆ, ಕರಿಬೇವಿನ ಸೊಪ್ಪಿನ ಚಟ್ನಿ ರೆಡಿ. ಆಮಸೋಲ್(ಕೋಕಮ್ ಚಟ್ನಿ)
ಬೇಕಾದ ಸಾಮಗ್ರಿ: ಆಮಸೋಲ್- 5-6, ಬೆಲ್ಲ- 1/2 ಕಪ್, ಉಪ್ಪು- ರುಚಿಗೆ ತಕ್ಕಷ್ಟು, ಲವಂಗ- 3-4, ಏಲಕ್ಕಿ ಪುಡಿ- 1/4 ಚಮಚ ಮಾಡುವ ವಿಧಾನ: ಆಮಸೋಲ್‌ಗಳನ್ನು ಎರಡು ಗಂಟೆ ಸಮಯ ನೀರಿನಲ್ಲಿ ನೆನೆಸಿ ಬಸಿದಿಡಿ. ಬಸಿದ ಆಮಸೋಲ್‌ಗಳಿಗೆ, ಬೆಲ್ಲ, ಏಲಕ್ಕಿ ಪುಡಿ, ಲವಂಗದ ಪುಡಿ, ಉಪ್ಪು ಸೇರಿಸಿ. ತರಿತರಿಯಾಗಿ ಅರೆದರೆ, ಸಿಹಿ- ಹುಳಿ ಮಿಶ್ರಿತ ಆಮಸೋಲ್ ಚಟ್ನಿ ತಯಾರು. ನೆಲ್ಲಿಕಾಯಿ ಚಟ್ನಿ
ಬೇಕಾದ ಸಾಮಗ್ರಿ: ಬೀಜ ತೆಗೆದು ಕತ್ತರಿಸಿದ ನೆಲ್ಲಿಕಾಯಿ ಹೋಳುಗಳು-1 ಕಪ್, ಒಣಕೊಬ್ಬರಿ ತುರಿ- 1 ಕಪ್, ಉಪ್ಪು- ರುಚಿಗೆ ತಕ್ಕಷ್ಟು, ಒಣಮೆಣಸಿನಕಾಯಿ- 7-8, ಜೀರಿಗೆ- 2 ಚಮಚ, ಕರಿಬೇವಿನ ಎಲೆಗಳು- 8-10, ಬೆಲ್ಲದ ತುರಿ- 1/4 ಕಪ್, ಎಣ್ಣೆ- 1/4 ಕಪ್, ಸಾಸಿವೆ- 1 ಚಮಚ, ಇಂಗು- 1/4 ಚಮಚ ಮಾಡುವ ವಿಧಾನ: ನೆಲ್ಲಿಕಾಯಿ ಹೋಳುಗಳನ್ನು ಸ್ವಲ್ಪ ನೀರು ಹಾಕಿ ಬೇಯಿಸಿಡಿ. ಒಣಮೆಣಸಿನಕಾಯಿ, ಕರಿಬೇವಿನ ಎಲೆಗಳು, ಒಣಕೊಬ್ಬರಿ ತುರಿಗಳನ್ನು ಬೇರೆಬೇರೆಯಾಗಿ ಹುರಿದಿಡಿ. ನೆಲ್ಲಿಕಾಯಿ ಹೋಳುಗಳಿಗೆ, ಹುರಿದ ಸಾಮಗ್ರಿಗಳು, ಜೀರಿಗೆ, ಉಪ್ಪು, ಬೆಲ್ಲದ ತುರಿ ಹಾಕಿ ನುಣ್ಣಗೆ ಅರೆದಿರಿಸಿ. ಅರೆದ ಮಿಶ್ರಣಕ್ಕೆ, ಸಾಸಿವೆ- ಇಂಗಿನ ಒಗ್ಗರಣೆ ಕೊಟ್ಟರೆ, ರುಚಿಯಾದ ನೆಲ್ಲಿಕಾಯಿ ಚಟ್ನಿ ಸವಿಯಲು ಸಿದ್ಧ. ಜಯಶ್ರೀ ಕಾಲ್ಕುಂದ್ರಿ