Advertisement
ಭಾವಿ ಪರ್ಯಾಯ ಮಠಾಧೀಶ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು, ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು, ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು, ಶ್ರೀ ವಿದ್ಯಾ ರಾಜೇಶ್ವರ ತೀರ್ಥರು, ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಕಾಣಿಯೂರು ಮಠದ ಶ್ರೀ ವಿದ್ಯಾ ವಲ್ಲಭ ತೀರ್ಥ ಶ್ರೀಪಾದರು, ಸೋದೆ ಮಠದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು, ಶೀರೂರು ಮಠದ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಪಾಲ್ಗೊಂಡಿದ್ದರು. ಬ್ರಹ್ಮರಥದಲ್ಲಿ ಕೃಷ್ಣ ಮುಖ್ಯಪ್ರಾಣ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
Related Articles
Advertisement
ಅದಮಾರು ಮಠ ಪರ್ಯಾಯದ ಕೊನೆಯ ಉತ್ಸವ ಇದಾಗಿದ್ದು ಸೋಮವಾರ ಮಧ್ಯರಾತ್ರಿ ಬಳಿಕ ಮಂಗಳವಾರ ಬೆಳಗ್ಗೆ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರ ಪರ್ಯಾಯ ಉತ್ಸವ ನಡೆಯಲಿದೆ.
ಗರುಡ ಪ್ರದಕ್ಷಿಣೆಚೂರ್ಣೋತ್ಸವದಂದು ಗರುಡ ಆಗಸದಲ್ಲಿ ಪ್ರದಕ್ಷಿಣೆ ಬರುತ್ತದೆ ಎಂಬ ನಂಬಿಕೆ ಇದೆ. ಅದರಂತೆ ಶ್ರೀಕೃಷ್ಣನಿಗೆ ಬ್ರಹ್ಮರಥೋತ್ಸವ ನಡೆಯುವಾಗ ಗರುಡನೂ ಆಗಸದಲ್ಲಿ ಬಂದು ಪ್ರದಕ್ಷಿಣೆ ಹಾಕಿದ. ಉರುಳುಸೇವೆ
ರಥ ಮುಂದೆ ಸಾಗಿದಂತೆ ಅದರ ಹಿಂದೆ ಕೆಲವು ಭಕ್ತರು ಉರುಳುಸೇವೆ ನಡೆಸಿದರು.