Advertisement

ದೇವರ ಸ್ಮರಣೆಗೂ ಲಿಂಗತಟಸ್ಥ ಪದ ! ಇಂಗ್ಲೆಂಡ್‌ ಚರ್ಚ್‌ ಧರ್ಮಗುರುಗಳ ಸಲಹೆ

07:37 PM Feb 08, 2023 | Team Udayavani |

ಲಂಡನ್‌ :ಸಂಕಷ್ಟ ಎದುರಾಗುತ್ತಿದ್ದಂತೆ ಜನರು ದೇವರನ್ನು ಸ್ಮರಿಸುತ್ತಾರೆ. ಈ ವೇಳೆ ದೇವ ನನ್ನ ಕಾಪಾಡಿದ, ಸಂಕಷ್ಟದಲ್ಲಿ ತಂದೆ ನನ್ನ ಕೈ ಹಿಡಿದ ಎನ್ನುವಂಥ ಪದಗಳನ್ನು ಬಳಸುತ್ತಾರೆ. ಆದರೆ, ಈ ಪದಗಳು ಪುರುಷ ಪ್ರಾಧಾನ್ಯತೆಯ ಸೂಚಕವಾಗಿರುವ ಹಿನ್ನೆಲೆ ಇನ್ನು ಮುಂದೆ ದೇವರನ್ನು ಸ್ಮರಿಸಲು ಲಿಂಗತಟಸ್ಥ ಪದಗಳನ್ನು ಬಳಸಬೇಕಂತೆ.ಅಂಥ ಪದಗಳನ್ನು ಹುಡುಕುತ್ತಿರುವುದಾಗಿ ಇಂಗ್ಲೆಂಡ್‌ನ‌ ಚರ್ಚ್‌ ಒಂದು ತಿಳಿಸಿದೆ.

Advertisement

ಹೌದು, ಚರ್ಚ್‌ ಆಫ್ ಇಂಗ್ಲೆಂಡ್‌ನ‌ಲ್ಲಿ ಪಾದ್ರಿ ಈ ರೀತಿಯ ಕರೆ ನೀಡಿದ್ದಾರೆ. ದೇವರ ಪ್ರಾರ್ಥನೆ ಸಮಯದಲ್ಲಿ ಓ ನನ್ನ ತಂದೆಯೇ ಎಂದು ಹೇಳಲಾಗುತ್ತದೆ. ದೇವರನ್ನು ಯಾವುದೇ ಲಿಂಗಸೂಚಕವಾಗಿ ಗುರುತಿಸುವ ಅಗತ್ಯವಿಲ್ಲ. ದೇವರಿಗೆ ಪರಿಧಿ ಇಲ್ಲ ಹೀಗಾಗಿ ದೇವರನ್ನು ಲಿಂಗತಟಸ್ಥ ಪದಗಳಿಂದ ಪ್ರಾರ್ಥಿಸಬೇಕು. ಅಂಥ ಪದದ ಹುಡುಕಾಟಕ್ಕಾಗಿ ಸಮಿತಿ ರಚಿಸಲಾಗಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next