Advertisement
ಇವು ಸಾಲಿಗ್ರಾಮ ತಾಲೂಕಿನ ಇತಿ ಹಾಸ ಪ್ರಸಿದ್ಧ ಚುಂಚನಕಟ್ಟೆಯ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದ ಕಥೆ ಮತ್ತು ವ್ಯಥೆ. ಅಲ್ಲದೆ ನಿಲ್ದಾಣದಲ್ಲಿ ಪ್ರಯಾಣಿಕ ರಿಗೆ ಸಮರ್ಪಕವಾದ ಅಗತ್ಯ ಮೂಲ ಭೂತ ಸವಲತ್ತುಗಳನ್ನು ಒದಗಿಸುವಲ್ಲಿ ಇಲ್ಲಿನ ಸಂಬಂಧಪಟ್ಟ ಅಧಿಕಾರಿ ವರ್ಗ ಸಂಪೂರ್ಣವಾಗಿ ವಿಫಲವಾಗಿದೆ. ಸಾರಿಗೆ ಇಲಾಖೆ ಸಿಬ್ಬಂದಿ ವರ್ಗದವರು ಮಾಡಿದ ತಪ್ಪಿನಿಂದ ಪ್ರಯಾಣಿಕರು ಸಂಕಷ್ಟದ ಪರಿಸ್ಥಿತಿ ಎದುರಿಸಬೇಕಾಗಿದೆ.
Related Articles
Advertisement
ಶುದ್ಧ ಕುಡಿಯುವ ನೀರಿಗೆ ಪರದಾಟ: ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಶುದ್ಧ ಕುಡಿಯುವ ನೀರು ಲಭ್ಯವಿರುವುದಿಲ್ಲ. ಬಸ್ ಏರು ವುದಕ್ಕಿಂತ ಮೊದಲು ನಿಲ್ದಾಣದಲ್ಲಿ ಬಾಯಾರಿಕೆಯಾದರೆ ಸಂಪಿನಿಂದ ಬರುವ ನೀರನ್ನೇ ಕುಡಿದು ದಾವು ಇಂಗಿಸಿಕೊಳ್ಳಬೇಕಾಗಿದೆ. ಇಲ್ಲದಿದ್ದರೆ ದುಡ್ಡು ಕೊಟ್ಟು ನೀರು ಖರೀದಿಸಿ ಕುಡಿ ಯಬೇಕಾಗಿದೆ. ಅಲ್ಲದೆ ನಿಲ್ದಾಣ ನಿರ್ಮಾಣ ವಾದಂದಿನಿಂದ ಇಲ್ಲಿಯವರೆಗೆ ಸಂಪನ್ನು ಸ್ವತ್ಛಗೊಳಿ ಸಿಯೇ ಇಲ್ಲ. ಪ್ರಯಾಣಿಕರಿಗೆ ಅಧಿಕಾರಿಗಳು ಅದೇ ನೀರನ್ನು ಕುಡಿಯಲು ಸರಬರಾಜು ಮಾಡಿ ಕೈತೊಳೆದುಕೊಳ್ಳುತ್ತಿದ್ದಾರೆ.
ಕಚೇರಿಯ ಬಾಗಿಲಿಗೆ ಬೀಗ: ನಿಲ್ದಾಣ ಸಂಚಾರ ನಿಯಂತ್ರಕರನ್ನು ಸಾರಿಗೆ ಇಲಾಖೆ ನೇಮಕ ಮಾಡಿದೆ. ಅವರು ಪ್ರತಿದಿನ ನಿಲ್ದಾಣದಲ್ಲಿ ಕರ್ತವ್ಯದ ಸಮಯ ದಲ್ಲಿ ಹಾಜರಿದ್ದು, ಪ್ರಯಾಣಿಕರ ಅಹವಾಲುಗಳನ್ನು ಆಲಿಸಿ ಅವುಗಳಿಗೆ ಸೂಕ್ತ ಪರಿಹಾರ ಕಂಡು ಹಿಡಿ ಯಬೇಕು. ಆದರೆ ಯಾವಾಗಲೂ ಸಂಚಾರ ನಿಯಂ ತ್ರಕರ ಕಚೇರಿಯ ಬಾಗಿಲಿಗೆ ಬೀಗ ಜಡಿದಿರುತ್ತದೆ. ಪ್ರಯಾಣಿಕರನ್ನು ಪ್ರಶ್ನಿಸಿದರೆ ಕೇವಲ ವಾರಕ್ಕೊಮ್ಮೆ ಮಾತ್ರ ಕಚೇರಿಗೆ ಆಗಮಿಸಿ ಕರ್ತವ್ಯ ನಿರ್ವಹಿಸುತ್ತಾರೆ ಎಂದು ಉತ್ತರಿಸುತ್ತಾರೆ.
ಸಮರ್ಪಕವಾದ ವ್ಯವಸ್ಥೆ ಇಲ್ಲ: ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸಮರ್ಪಕವಾದ ವ್ಯವಸ್ಥೆ ಇರುವು ದಿಲ್ಲ. ನಿಲ್ದಾಣಕ್ಕೆ ಆಗಮಿಸುವ ಬಸ್ಸುಗಳು ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ಇದರಿಂದ ಪ್ರಯಾಣಿಕರು ಗಂಟೆಗಟ್ಟಲೆ ಕಾದು ಕುಳಿತಿರಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ರಾತ್ರಿಯ ವೇಳೆ ಸಮರ್ಪಕ ವಾದ ಬೆಳಕಿನ ವ್ಯವಸ್ಥೆ ಇರುವುದಿಲ್ಲ. ಪ್ರಯಾಣಿಕರು ಮಬ್ಬು ಬೆಳಕಿನ ಭಯದ ವಾತಾವರಣದಲ್ಲಿ ಬಸ್ಸುಗಳನ್ನು ಕಾದು ಏರಬೇಕಾಗಿದೆ.
ಬಸ್ ನಿಲ್ದಾಣದಲ್ಲಿ ಕ್ಯಾಂಟೀನ್ ಇಲ್ಲ :
ನಿಲ್ದಾಣದಲ್ಲಿ ಉಪಾಹಾರ ಗೃಹವಿದ್ದು, ಅಲ್ಲಿ ಯಾವುದೇ ಹೋಟೆಲು ಅಥವಾ ಕ್ಯಾಂಟೀನು ನಡೆಯುತ್ತಿಲ್ಲ. ಇದರಿಂದ ಬಸ್ಸುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಉಪಾಹಾರ ಅಥವಾ ಊಟಕ್ಕೆ ಪರದಾಡಬೇಕಾಗಿದೆ. ವಿಶೇಷವಾಗಿ ವಯೋವೃದ್ಧರು ಮತ್ತು ಮಕ್ಕಳು ಊಟ, ಉಪಾಹಾರ ಬಯಸಿದರೆ ನಿಲ್ದಾಣದಿಂದ ದೂರದಲ್ಲಿರುವ ಹೋಟೆಲುಗಳಿಗೆ ತೆರಳಿ ಖರೀದಿಸಿ ಬಳಸಬೇಕಿದೆ. ಕರ್ತವ್ಯದ ವೇಳೆ ಲಭ್ಯವಿರುವ ಸಂಚಾರ ನಿಯಂತ್ರಕರು ಪ್ರಯಾಣಿಕರ ಅಹವಾಲುಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುವುದಿಲ್ಲ. ಪ್ರಶ್ನಿಸಿದರೆ ಹಾರಿಕೆಯ ಉತ್ತರ ನೀಡಿ ನುಣುಚಿಕೊಳ್ಳುತ್ತಾರೆಂಬುದು ಪ್ರಯಾಣಿಕರ ದೂರು. ಒಟ್ಟಾರೆಯಾಗಿ ರಾಜ್ಯದಲ್ಲಿಯೇ ಜಾನುವಾರು ಜಾತ್ರೆಗೆ ಅತ್ಯಂತ ಪ್ರಸಿದ್ಧಿ ಪಡೆದಿರುವ ಚುಂಚನಕಟ್ಟೆಯ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣ ಮಾತ್ರ ಅವ್ಯವಸ್ಥೆಗಳ ಆಗರವಾಗಿದೆ.
ನಾನು ಕಳೆದ ಮೂರು ದಿನಗಳ ಹಿಂದೆ ಇಲ್ಲಿಗೆ ಬಂದಿದ್ದು, ಚುಂಚನಕಟ್ಟೆಯ ಬಸ್ ನಿಲ್ದಾಣದ ಸಮಸ್ಯೆಗಳ ಅರಿವು ನನಗೆ ಇಲ್ಲ. ಸೋಮವಾರ ಅಲ್ಲಿಗೆ ಭೇಟಿ ನೀಡಿ ಪರಿಶೀಲಿಸಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಪ್ರಯತ್ನಿಸುವುದರ ಜತೆಗೆ ಸರಿಯಾಗಿ ಕರ್ತವ್ಯ ನಿರ್ವಹಿಸದಿರುವ ಸಂಚಾರ ನಿಯಂತ್ರಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.-ವೀರಭದ್ರಸ್ವಾಮಿ, ಪ್ರಭಾರ ಘಟಕ ವ್ಯವಸ್ಥಾಪಕರು, ಕೆ.ಆರ್.ನಗರ ಘಟಕ
ನಿಲ್ದಾಣದಲ್ಲಿ ಸ್ವತ್ಛತೆಯಿಲ್ಲ. ಶುದ್ಧ ಕುಡಿಯುವ ನೀರಂತೂ ಇಲ್ಲವೇ ಇಲ್ಲ. ರಾತ್ರಿಯ ವೇಳೆ ಪ್ರಯಾಣಿಕರಿಗೆ ಸೂಕ್ತ ರಕ್ಷಣೆಯಿಲ್ಲ. ಸಂಚಾರ ನಿಯಂತ್ರಕರು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. -ತಮ್ಮೇಗೌಡ, ಗ್ರಾಪಂ ಮಾಜಿ ಅಧ್ಯಕ್ಷ, ಲಕ್ಷ್ಮೀಪುರ, ಸಾಲಿಗ್ರಾಮ ತಾಲೂಕು
ಸಂಚಾರ ನಿಯಂತ್ರಕರು ನಿರಂತರವಾಗಿ ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ಮೇಲಧಿಕಾರಿಗಳು ಗೈರಾಗುವ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಬೇಕು. ಸ್ವತ್ಛತೆಯ ಕೊರತೆಯಿಂದ ನಿಲ್ದಾಣ ಸೊಳ್ಳೆಗಳ ವಾಸಸ್ಥಾನವಾಗಿದೆ. ಪ್ರಯಾಣಿಕರಿಗೆ ವಿರಾಮದ ಕೊಠಡಿ ಲಭ್ಯವಿಲ್ಲ. ಉಪಾಹಾರ ಗೃಹವೂ ಇಲ್ಲ.-ಸಿ.ಎಚ್.ಸೋಮಶೇಖರ್, ಪ್ರಯಾಣಿಕ, ಚಿಕ್ಕಕೊಪ್ಪಲು, ಸಾಲಿಗ್ರಾಮ ತಾಲೂಕು
– ಗೇರದಡನಾಗಣ್ಣ