Advertisement

ಕ್ರಿಸ್ತಾವತಾರ

06:00 AM Dec 24, 2017 | |

ನಾಳೆ ಕ್ರಿಸ್‌ಮಸ್‌ ಸಂಭ್ರಮ. ಭಗವಾನ್‌ ಏಸುಕ್ರಿಸ್ತ ಹುಟ್ಟಿದ ದಿನವನ್ನು ಜಗದಗಲ ಆಚರಿಸುತ್ತಾರೆ. ಈ ಆಚರಣೆಗೆ ಬಡವ-ಸಿರಿವಂತನೆಂಬ ಭೇದವಿಲ್ಲ. ಯಾಕೆಂದರೆ, ದೇವರ ಲೋಕದಲ್ಲಿ ಬಡತನ ಮತ್ತು ಶ್ರೀಮಂತಿಕೆಗಳ ಲೆಕ್ಕಾಚಾರವೇ ಬೇರೆ. ಸಂಪತ್ತು ಇದ್ದವನು ಶ್ರೀಮಂತನೆನಿಸುವುದಿಲ್ಲ; ಹೃದಯವಂತಿಕೆ ಇದ್ದವನು ಬಡವನೆನಿಸುವುದಿಲ್ಲ. ದೇವನು ಭೂಮಿಯಲ್ಲಿ ಅವತರಿಸುವುದಕ್ಕೆ ಭೌತಿಕವಾಗಿ ಶ್ರೀಮಂತರಾಗಿರುವವರ ಮನೆಯನ್ನು ಆಯ್ದುಕೊಳ್ಳುವುದಿಲ್ಲ;  ಸಾಮಾನ್ಯರಲ್ಲಿ ಸಾಮಾನ್ಯರ ಜೊತೆಗೆ ಬೆಳೆಯುತ್ತಾನೆ. ನಿದರ್ಶನವಾಗಿ ನಮ್ಮ ಮುಂದೆ ಕ್ರಿಸ್ತನ ಬದುಕು ಇದೆ, ಕೃಷ್ಣನ ಬದುಕೂ ಇದೆ. ಒಬ್ಬ ಹುಟ್ಟಿ ಬೆಳೆದದ್ದು ಕುರಿ ಕಾಯುವವರ ನಡುವೆ, ಮತ್ತೂಬ್ಬನ ಜೀವನ ಆರಂಭವಾದದ್ದು ದನ ಕಾಯುವವರ ಮಧ್ಯೆ. ಇಬ್ಬರೂ ಲೌಕಿಕವಾದ ಅಧಿಕಾರವನ್ನು ತೊರೆದು ತ್ಯಾಗಮೂರ್ತಿಗಳಾಗಿದ್ದವರು, ಭೂಲೋಕದ ಮಂದಿಗೆ ನಿಜವಾದ ದೈವತ್ವವನ್ನು ಮನಗಾಣಿಸಿದವರು. ಪ್ರತಿ ಧಾರ್ಮಿಕ ಹಬ್ಬಗಳ ಆಚರಣೆಯಲ್ಲಿ  “ಸರಳ ಬದುಕಿನ’ ತಾತ್ತಿ$Ìಕತೆ ಅಡಗಿದೆ. ಕ್ರಿಸ್‌ಮಸ್‌ ಕೂಡ ಇದಕ್ಕೆ ಹೊರತಲ್ಲ.

Advertisement

ನಾಳೆ ಭಗವಾನ್‌ ಏಸುಕ್ರಿಸ್ತ ಹುಟ್ಟಿದ ದಿನ. ಹುಟ್ಟಿದ ದಿನವನ್ನು ಜಗತ್ತಿನಾದ್ಯಂತ ಇಷ್ಟೊಂದು ಸಂಭ್ರಮದಲ್ಲಿ ಆಚರಿಸಬೇಕಾದರೆ ಹುಟ್ಟಿದ ಸ್ಥಳಕ್ಕೂ ವಿಶೇಷ ಮಹಣ್ತೀವಿರಬೇಕಲ್ಲ ! ಏಸುಕ್ರಿಸ್ತ ಹುಟ್ಟಿದ ಪವಿತ್ರ ಭೂಮಿ ಯಾವುದೆಂದು ಬಲ್ಲಿರಾ?
ಬೆತ್ಲೆಹೆಮ್‌!

ಅಂದಿಗೆ ಅದೊಂದು ಸಣ್ಣ ಗ್ರಾಮ. ಇಂದು ಒಂದು ಪಟ್ಟಣ. ಬೈಬಲ್ಲಿನ ಹಳೆಯ ಒಡಂಬಡಿಕೆಯ ಆದಿಕಾಲದಲ್ಲೇ ಬೆತ್ಲೆಹೆಮ್‌ನ ಸುಂದರವಾದ ವರ್ಣನೆ ಇದೆ. 

ಎತ್ತರದ ಗುಡ್ಡದ ಮೇಲೆ ಶೋಭಾಯಮಾನವಾಗಿ ನಿಂತಿರುವ ಬೆತ್ಲಹೆಮ್‌ ಬೈಬಲ್ಲಿನ ಹಳೆಯ ಒಡಂಬಡಿಕೆಯ ಆದಿಕಾಂಡದಲ್ಲಿ ಪ್ರಸ್ತಾಪಿಸಲ್ಪಟ್ಟಿದೆ; ಯೇಸುವಿನ ವಂಶಾವಳಿಯಲ್ಲಿ ಪ್ರಮುಖ ಸ್ಥಾನ ಪಡೆದಿರುವ ದಾವೀದರಸನ (ಕ್ರಿ.ಪೂ. 800) ಮುತ್ತಜ್ಜಿ ರೂತಳು ತನ್ನ ಸಂಬಂಧಿ ಬೋವಜನನ್ನು ಸಂಧಿಸಿದ್ದು ಇಲ್ಲಿಯೇ. ಆಕೆಯ ಅತ್ತೆ ನೋವೊಮಿ ಹಾಗೂ ಮಾವ ಎಲಿಮೆಲಕನ ಹುಟ್ಟೂರು ಕೂಡ ಇದೇ ಆಗಿದೆ. ಅಷ್ಟೇ ಅಲ್ಲ , ದಾವೀದ ಹುಟ್ಟಿ ಬೆಳೆದ ಪಟ್ಟಣವಲ್ಲದೆ, ಇಲ್ಲಿನ ಹುಲ್ಲುಗಾವಲುಗಳಲ್ಲಿ ದಾವೀದ ತನ್ನ ತಂದೆಯ ಮಂದೆಯನ್ನು ಮೇಯಿಸುತ್ತ, ಅಲೆದಾಡಿದ ಸ್ಥಳವೂ ಹೌದು. ಗೊಲ್ಯಾತನು ಮೃತನಾದುದ್ದೂ ಇದರ ಆಸುಪಾಸಿನಲ್ಲೇ. ಪ್ರವಾದಿ ಸಮುವೇಲನು ದಾವೀದನನ್ನು ಯಹೂದ್ಯರ ಅರಸನನ್ನಾಗಿ ಅಭಿಷೇಕಿಸಿದ್ದೂ ಇದೇ ಸ್ಥಳದಲ್ಲಿ. 

ಬೆತ್ಲೆಹೆಮ್‌ ಇದು ಜೋರ್ಡಾನ್‌ ದೇಶದಲ್ಲಿದೆ. ಗುಡ್ಡಗಳ ನಡುವೆ ಇರುವ ಈ ಗ್ರಾಮದ ಆಚೀಚೆ  ಮೆಡಿಟರೇನಿಯನ್‌ ಮತ್ತು ಮೃತ್ಯು (ಡೆಡ್‌ ಸೀ) ಸಮುದ್ರಗಳಿವೆ. ಉತ್ತರ ಮತ್ತು ವಾಯುವ್ಯ ಭಾಗದಲ್ಲಿ ಪ್ರಪಾತದಾಳದ ಕಣಿವೆಗಳಿವೆ. ಬೈಬಲ್‌ನ ಕಾಲದಲ್ಲಿ ಬೆತ್ಲೆಹೆಮ್‌ಗೆ ಪೂರ್ವಭಾಗದ ಭಾಷೆಯಲ್ಲಿ Bet-Lahm  ಎಂದು ಕರೆಯುತ್ತಿದ್ದರು. ಅಂದರೆ, “ರೊಟ್ಟಿಯ ಮನೆ’ (House of bread) ಎಂದು ಅರ್ಥ. ಇದು ಏಸುಕ್ರಿಸ್ತರ ದಾರ್ಶನಿಕತೆಯ ತಾತ್ತಿ$Ìಕ ದೃಷ್ಟಿಕೋನವೂ ಹೌದು.

Advertisement

ಜೆರುಸಲೇಮ್‌ ನಗರದ ನೈರುತ್ಯಕ್ಕೆ ಸುಮಾರು 10 ಕಿ.ಮೀ. ದೂರದಲ್ಲಿರುವ ಬೆತ್ಲೆಹೆಮ್‌ನ ಜನಸಂಖ್ಯೆ ಸುಮಾರು 29,930. ಇದು ಕ್ರಿಶ್ಚಿಯನ್‌ ಧರ್ಮದ ಜಾಗತಿಕ ಕೇಂದ್ರ. ಹಳೆಯ ಸಾಂಪ್ರದಾಯಿಕ ಶೈಲಿಯಲ್ಲಿದ್ದ ಊರು ಇಂದು ಆಧುನೀಕರಣಗೊಂಡಿದೆ. ಸುಂದರವಾದ ಕಟ್ಟಡಗಳು, ಆಲಿವ್‌ ಮರಗಳ ತೋಪುಗಳು, ದ್ರಾಕ್ಷಿ ತೋಟಗಳು ಎಲ್ಲೆಡೆ ಕಂಡುಬರುತ್ತವೆ. ಇಲ್ಲಿಯ ಜನತೆಯು ಕುಶಲಕಲೆಗಾರರು. ಮರದಲ್ಲಿ ಸೂಕ್ಷ್ಮ ಕೆತ್ತನೆಗಳನ್ನು ಮಾಡಬಲ್ಲ ಕಲಾವಿದರೂ ಹೌದು. ಇಲ್ಲಿ ಸಿದ್ಧಗೊಳ್ಳುವ ದ್ರಾಕ್ಷಾರಸ ಬಲು ಪ್ರಸಿದ್ಧ. ಇಲ್ಲಿನ ಜನರ ಮುಖ್ಯ ವೃತ್ತಿಗಳು ಕಸೂತಿ, ಕೆತ್ತನೆಗಳಂಥ ಕರಕುಶಲ ಕರ್ಮಿಗಳು ಮತ್ತು ಧಾರ್ಮಿಕ ಕೈಂಕರ್ಯಗಳು.

ಬೆತ್ಲೆಹೆಮ್‌ ಪಟ್ಟಣಕ್ಕೆ ಡೇವಿಡ್‌ ದೊರೆಯ ಕಾಲದಲ್ಲಿ ಕೋಟೆ ಕಟ್ಟಲಾಯಿತು. ಮುಂದೆ ಗ್ರೀಕರ, ರೋಮನ್ನರ, ಅರಬ್‌ ಮುಸ್ಲಿಮರ ಆಳ್ವಿಕೆ ಒಳಪಟ್ಟಿತು. 1099ರಲ್ಲಿ ಕ್ರಿಶ್ಚಿಯನ್ನರು ಕ್ರುಸೇಡ್‌ನ‌ (ಧರ್ಮಯುದ್ಧದ ಮೂಲಕ) ಬೆತ್ಲೆಹೆಮ್‌ಅನ್ನು ವಶಪಡಿಸಿಕೊಂಡರು. 1500ರ ಸುಮಾರಿಗೆ ಇದು ಟರ್ಕಿಯನ್ನರ ವಶವಾಯಿತು. 1917ರಲ್ಲಿ ಬ್ರಿಟಿಶರು ಬೆತ್ಲೆಹೆಮ್‌ನಲ್ಲಿ ಪಾರುಪತ್ಯ ಸ್ಥಾಪಿಸಿದರು.
1923-48ರ ತನಕ ಪ್ಯಾಲೆಸ್ತೀನ್‌ ತನ್ನ ವಶದಲ್ಲಿಟ್ಟುಕೊಂಡಿತು. 1948ರಿಂದ ಜೋರ್ಡಾನ್‌ ದೇಶದ ಸುಪರ್ದಿಗೆ ಸೇರಿತು.

ಈ ಪುಟ್ಟ ಭೂಭಾಗ ಯಾರ್ಯಾರದೋ ಕೈವಶವಾಗುತ್ತ ಬಂದಿರಬಹುದು, ಆದರೆ, ಅದರ ಪಾವಿತ್ರ್ಯ ಹಾಗೆಯೇ ಅಂತರಗಂಗೆಯಾಗಿ ಹರಿಯುತ್ತ ಸ್ಥಿರವಾಗಿ ಇಲ್ಲಿಯವರೆಗೂ ಸಾಗಿಬಂದಿದೆ.

ರೋಮ್‌ ಸಾಮ್ರಾಜ್ಯದ ಕಾನ್‌ಸ್ಟಾಂಟೆನ್‌ ಚಕ್ರವರ್ತಿ ಕ್ರಿ.ಶ. 327ರಲ್ಲಿ  “ಚರ್ಚ್‌ ಆಫ್ ನೇಟಿವಿಟಿ’ ಎಂಬ ಪ್ರಸಿದ್ಧ ಇಗರ್ಜಿಯನ್ನು ಕಟ್ಟಿಸಿದ. ಭವ್ಯವಾದ ಈ ದೇವಮಂದಿರ ಈ ನಗರದ ಪ್ರಮುಖ ಆಕರ್ಷಣೆಯಾಗಿದೆ. ಇದರ ದಕ್ಷಿಣ ಭಾಗದಲ್ಲಿ ಏಸುಕ್ತಿಸ್ತನನ್ನು ಶಿಲುಬೆಗೆ ಏರಿಸುತ್ತಿರುವ ಅಮೃತಶಿಲೆಯ ಕೆತ್ತನೆ ಮನೋಹರವಾಗಿದೆ.

ಮೀಕ ಎಂಬ ಪ್ರವಾದಿ ಕ್ರಿ.ಪೂ. 700 ವರ್ಷಗಳ ಹಿಂದೆ ಬೆತ್ಲೆಹೆಮ್‌ ನಗರದಲ್ಲಿ ದೇವ ಪುರುಷನೊಬ್ಬ ಜನಿಸುವನೆಂದು ಭವಿಷ್ಯ ನುಡಿದಿದ್ದ. “”ಏಫ್ರಾತದ ಬೆತ್ಲೆಹೆಮ್‌, ಜುದೇಯರ ಕುಲದಲ್ಲಿ ನೀನು ತುಂಬ ಕಿರಿಯಳಾಗಿರಬಹುದು ಆದರೆ, ಇಡೀ ಇಸ್ರೇಲ್‌ನ್ನು ಆಳತಕ್ಕವನು ನಿನ್ನಿಂದಲೇ ಉದಯಿಸಲಿರುವನು. ಆತನ ಗೋತ್ರದ ಮೂಲ ಪುರಾತನವಾದುದು. ಅನಾದಿಯಿಂದಲೇ ಬಂದುದು. ಕ್ರಿ.ಪೂ. 600ರಲ್ಲೊಮ್ಮೆ ಯೆರೆಮೀಯದ ಪ್ರವಾದಿಯೂ ಹೀಗೆಯೇ ಹೇಳಿದವನು. 

ಶುಭದಿನಗಳು ಬರಲಿವೆ. ಆಗ ನಾನು ದಾವೀದನೆಂಬ ಮೂಲದಿಂದ ಒಂದು ಮೊಳಕೆಯನ್ನು ಚಿಗುರಿಸುವೆನು. ಆತರುಷನಾಗಿ ಮೆರೆಯುವನು. ಜಗತ್ತಿಗೆ ರಾಜನಾಗಿ ಬಾಳುವನು. ವಿವೇಕದಿಂದ ಆದರ್ಶನಾಗುವನು. ಧರೆಯಲ್ಲಿ ನ್ಯಾಯನೀತಿಯನ್ನು ಪರಿಪಾಲಿಸುವನು. ಆತನ ಕಾಲದಲ್ಲಿ ಯಹೂದ್ಯರು ಸುರಕ್ಷಿತವಾಗಿ ಇರುವರು. ಇಸ್ರೇಲರು ನೆಮ್ಮದಿಯಿಂದ ಬಾಳುವರು”.ಈ ವಾಕ್ಯಗಳು ಮೂಡಣ ದೇಶದ ಮೂವರು ಪಂಡಿತರ ಅರಿವಿಗೆ ಬಂತು. ಅವರು ಮಗುವನ್ನು ಕಾಣಲು ಬಂದರು.

ಜೋಸೆಫ‌ನು ದಾವೀದನ ಮನೆತನದವನು ಹಾಗೂ ಗೋತ್ರದವನು. ಆದುದರಿಂದ ಅವನೂ ಗಲಿಲೇಯ ಪ್ರಾಂತ್ಯದ ನಜರೇತ್‌ ಎಂಬ ಊರಿನಿಂದ ಹೊರಟು ಜುದೇಯನಾಡಿನ ಬೆತ್ಲೆಹೆಮ್‌ ಎಂಬ ದಾವೀದನ ಊರಿಗೆ ಹೋದನು. ಆತನ ಸಂಗಡ ಆತನಿಗೆ ನಿಶ್ಚಿತಾರ್ಥಳಾಗಿದ್ದ ಹಾಗೂ ಪೂರ್ಣ ಗರ್ಭವತಿಯಾಗಿದ್ದ ಮರಿಯಾಳು ಸಹ ಹೋದಳು. ಹೀಗೆ ಅವರು ಬೆತ್ಲೆಹೆಮ್‌ನಲ್ಲಿ ಇದ್ದಾಗ, ಮರಿಯಾಳಿಗೆ ಪ್ರಸವಕಾಲ ಸಮೀಪಿಸಿತು. ಆಕೆ ಚೊಚ್ಚಲು ಮಗನಿಗೆ ಜನ್ಮವಿತ್ತು, ಇದ್ದ ಬಟ್ಟೆಯಲ್ಲೇ ಸುತ್ತಿ, ಅದನ್ನು ಗೋದಲಿಯಲ್ಲಿ ಮಲಗಿಸಿದಳು. ಏಕೆಂದರೆ, ಛತ್ರದಲ್ಲಿ ಅವರಿಗೆ ಸ್ಥಳ ಸಿಗಲಿಲ್ಲ. 

ಅದೇ ನಾಡಿನಲ್ಲಿ ಕೆಲವು ಕುರುಬರು ಹೊಲಗಳಲ್ಲಿದ್ದುಕೊಂಡು ರಾತ್ರಿಯಲ್ಲಿ ಕುರಿಮಂದೆಗಳನ್ನು ಕಾಯುತ್ತಿದ್ದರು. ಇದ್ದಕ್ಕಿದ್ದಂತೆ ದೇವದೂತನೊಬ್ಬನು ಅವರೆದುರಿಗೆ ಪ್ರತ್ಯಕ್ಷ ಆಗಲು ಸರ್ವೆàಶ್ವರನ ಪ್ರಭೆ ಅವರ ಸುತ್ತಲೂ ಪ್ರಕಾಶಿಸಿತು. ಅವರು ಬಹಳವಾಗಿ ಹೆದರಿದರು. ಆ ದೂತನು ಅವರಿಗೆ, “ಭಯಪಡಬೇಡಿ, ಇಗೋ, ಜನರೆಲ್ಲರಿಗೂ ಪರಮಾನಂದವನ್ನು ತರುವ ಶುಭಸಂದೇಶವನ್ನು ನಿಮಗೆ ತಿಳಿಸುತ್ತೇನೆ. ಅದೇನೆಂದರೆ, ಇಂದೇ ದಾವೀದನ ಊರಿನಲ್ಲಿ ನಿಮಗೋಸ್ಕರ ಲೋಕೋದ್ಧಾರಕ ಜನಿಸಿದ್ದಾರೆ. ಅವರೇ ಪ್ರಭು ಕ್ರಿಸ್ತ. ಇಗೋ, ನಿಮಗೊಂದು ಸೂಚನೆ ಆ ಶಿಶುವನ್ನು ಬಟ್ಟೆಯಲ್ಲಿ ಸುತ್ತಿ ಗೋದಲಿಯೊಂದರಲ್ಲಿ ಮಲಗಿಸಿರುವುದನ್ನು ಕಾಣುವಿರಿ’ ಎಂದನು.

ತಕ್ಷಣವೇ ಆ ದೂತನ ಸಂಗಡ ಸ್ವರ್ಗದ ದೂತಪರಿವಾರವೊಂದು ಕಾಣಿಸಿಕೊಂಡಿತು. “ಭೂಲೋಕದಲ್ಲಿ ದೇವರೊಲಿದ ಮಾನವರಿಗೆ ಶಾಂತಿ-ಸಮಾಧಾನ’ ಎಂದು ಸರ್ವೆàಶ್ವರನ ಸ್ತುತಿ ಮಾಡಿತು. (ಬೈಬಲ್ಲಿನ ಹೊಸ ಒಡಂಬಡಿಕೆ; ಲೂಕ 2 : 1-14)

– ವಲ್ಲಿ ವಗ್ಗ, ಮೈಸೂರು

Advertisement

Udayavani is now on Telegram. Click here to join our channel and stay updated with the latest news.

Next