Advertisement

India ದಿಂದ ಕ್ರಿಶ್ಚಿಯನ್ ಧರ್ಮವನ್ನು ತೊಡೆದುಹಾಕಲು ಸಾಧ್ಯವಿಲ್ಲ: ಆರ್ಚ್ ಬಿಷಪ್

05:48 PM Jul 09, 2023 | Team Udayavani |

ಎರ್ನಾಕುಲಂ : ಮಣಿಪುರದಲ್ಲಿ ಮೈಟೇಯಿ ಸಮುದಾಯ ಮತ್ತು ಬುಡಕಟ್ಟು ಕುಕಿಗಳ ನಡುವಿನ ಘರ್ಷಣೆಯ ಅಶಾಂತಿಯ ನಡುವೆ, ಕೇರಳ ಕ್ಯಾಥೋಲಿಕ್ ಬಿಷಪ್ ಕೌನ್ಸಿಲ್ (ಕೆಸಿಬಿಸಿ) ಅಧ್ಯಕ್ಷ ಕಾರ್ಡಿನಲ್ ಮಾರ್ ಬಸೆಲಿಯೋಸ್ ಕ್ಲೀಮಿಸ್ ಅವರು “ಭಾರತದಿಂದ ಕ್ರಿಶ್ಚಿಯನ್ ಧರ್ಮವನ್ನು ಅಳಿಸಿಹಾಕಬಹುದು ಎಂದು ಯಾರೂ ಭಾವಿಸಬಾರದು” ಎಂದು ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.

Advertisement

ಎರ್ನಾಕುಲಂ ಜಿಲ್ಲೆಯ ಮುವಾಟ್ಟುಪ್ಝಾದಲ್ಲಿ ಮಣಿಪುರ ಹಿಂಸಾಚಾರ ವಿರೋಧಿಸಿ ಕಾಂಗ್ರೆಸ್ ಶಾಸಕ ಮ್ಯಾಥ್ಯೂ ಕುಜಲ್ನಾಡನ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಿರೋ-ಮಲಂಕಾರ ಕ್ಯಾಥೋಲಿಕ್ ಚರ್ಚ್‌ನ ಆರ್ಚ್‌ಬಿಷಪ್ ಕ್ಲೀಮಿಸ್ ಮಾತನಾಡಿದರು.

ಮಣಿಪುರದಲ್ಲಿ ಶಾಂತಿ ಸ್ಥಾಪನೆಯ ಪ್ರಯತ್ನಗಳನ್ನು ಮಾಡದಿರುವ ಬಗ್ಗೆ ಆಕ್ರೋಶ ಹೊರ ಹಾಕಿದ ಅವರು ಪ್ರಧಾನಿ ನರೇಂದ್ರ ಮೋದಿ ಅವರು ಈ ವಿಚಾರದಲ್ಲಿ ತತ್ ಕ್ಷಣ ಮಧ್ಯಪ್ರವೇಶ ಮಾಡಬೇಕು. ಭಾರತದಲ್ಲಿ ಪ್ರಜಾಪ್ರಭುತ್ವ ಚಾಲ್ತಿಯಲ್ಲಿದೆ ಎಂಬ ಸಂದೇಶವನ್ನು ಜಗತ್ತಿಗೆ ಸಾರಲು ಇದು ಅವರಿಗೆ ಉತ್ತಮ ಅವಕಾಶವಾಗಿದೆ. ನಮ್ಮ ಸಂವಿಧಾನದಲ್ಲಿ ಬರೆಯಲಾದ ಸೆಕ್ಯುಲರಿಸಂ ಎಂಬುದು ಒಂದು ಅಲಂಕಾರಿಕ ಪದವಲ್ಲ, ಅದು ಜಾರಿಗೆ ತಂದ ತತ್ವಶಾಸ್ತ್ರವಾಗಿದೆ. ಯಾವುದೇ ಧರ್ಮವನ್ನು ಅನುಸರಿಸುವ ಮತ್ತು ಆಚರಿಸುವ ಹಕ್ಕನ್ನು ನೀಡುವ ನಮ್ಮ ಶ್ರೇಷ್ಠ ಸಂವಿಧಾನವನ್ನು ಏಕೆ ಮರೆಮಾಡಲಾಗಿದೆ? ಎಂದು ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next