Advertisement

ಅಗಸ್ಟಾ: ಕ್ರಿಶ್ಚಿಯನ್‌ ಮೈಕೆಲ್‌ ಗೆ ಡಿ.28ರ ವರೆಗೆ ನ್ಯಾಯಾಂಗ ಕಸ್ಟಡಿ

04:23 PM Dec 19, 2018 | Team Udayavani |

ಹೊಸದಿಲ್ಲಿ : ಅಗಸ್ಟಾ  ವೆಸ್ಟ್‌ಲ್ಯಾಂಡ್‌ ವಿವಿಐಪಿ ಹೆಲಿಕಾಪ್ಟರ್‌ ಖರೀದಿ ಹಗರಣದಲ್ಲಿನ ಮಧ್ಯವರ್ತಿ ಕ್ರಿಶ್ಚಿಯನ್‌ ಮೈಕೆಲ್‌ ನನ್ನು ಇಂದು ಬುಧವಾರ ದಿಲ್ಲಿ ಕೋರ್ಟ್‌ ಡಿ.28ರ ವರೆಗಿನ ಅವಧಿಯಲ್ಲಿ ಹತ್ತು ದಿನಗಳ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿದೆ.

Advertisement

57ರ ಹರೆಯದ ಬ್ರಿಟಿಷ್‌ ಪ್ರಜೆಯ ಸಿಬಿಐ ಕಸ್ಟಡಿ ಇಂದು ಬುಧವಾರ ಕೊನೆಗೊಂಡಿದೆ. ಆತನ ಲಾಯರ್‌ ಆಲ್‌ಜೊà ಕೆ ಜೋಸೆಫ್ ಅವರು ಮೈಕೆಲ್‌ ಡಿಸ್‌ಲೆಕ್ಸಿಯಾ ಕಾಯಿಲೆಯಿಂದ ಬಳಲುತ್ತಿದ್ದಾನೆ ಎಂದು ಕೋರ್ಟಿಗೆ ತಿಳಿಸಿದರು. 

3,600 ಕೋಟಿ ರೂ. ವಿವಿಐಪಿ ಹೆಲಿಕಾಪ್ಟರ್‌ ಖರೀದಿ ಹಗರಣದಲ್ಲಿ ಮೈಕಲ್‌ ಹೆಸರು 2012ರಲ್ಲಿ ಕಾಣಿಸಿಕೊಂಡಿತ್ತು. ಆತನು ಮೂವರು ಮಧ್ಯವರ್ತಿಗಳಲ್ಲಿ ಒಬ್ಬನಾಗಿದ್ದ. ಇನ್ನಿಬ್ಬರು ಮಧ್ಯವರ್ತಿಗಳೆಂದರೆ ರಾಲ್‌ಫ್ ಗಿಡೋ ಹೆಶ್‌ಕ್‌ ಮತ್ತು ಕಾರ್ಲೋ ಗೆರೋಸಾ. 

Advertisement

Udayavani is now on Telegram. Click here to join our channel and stay updated with the latest news.

Next