Advertisement

ಚೌಕೀದಾರ್‌ ಹೀ ಚೋರ್‌: ಪ್ರಧಾನಿ ಮೋದಿ ಬಗ್ಗೆ ರಾಹುಲ್‌ ಪುನರುಚ್ಚಾರ

04:33 PM Nov 20, 2018 | Team Udayavani |

ಹೊಸದಿಲ್ಲಿ : ಸಿಬಿಐ ಒಳಗಿನ ವೈಷಮ್ಯ ಮತ್ತು ಒಳಜಗಳವನ್ನೇ ದಾಳವಾಗಿ ಬಳಸಿಕೊಂಡು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟ್ವಿಟರ್‌ನಲ್ಲಿ ತನ್ನ ವಾಕ್ಸಮರವನ್ನು ಮುಂದುವರಿಸಿದ್ದಾರೆ. 

Advertisement

ಹೊಸದಿಲ್ಲಿಯು ಈಗ “ಚೌಕೀದಾರ್‌ ಹೀ ಚೋರ್‌” ಎಂಬ ಹೊಸ ಕ್ರೈಮ್‌ ಥ್ರಿಲ್ಲರ್‌ ವೀಕ್ಷಿಸುತ್ತಿದೆ ಎಂದು ರಾಹುಲ್‌ ಲೇವಡಿ ಮಾಡಿದ್ದಾರೆ. 

ಈ ಕ್ರೈಮ್‌ ಥ್ರಿಲ್ಲರ್‌ ನ ಹೊಸ ಕಂತಿನಲ್ಲಿ ಓರ್ವ ಸಿಬಿಐ ಡಿಐಜಿ, ಓರ್ವ ಸಚಿವರು, ಎನ್‌ಎಸ್‌ಎ ಮತ್ತು ಕಾನೂನು ಮತ್ತು ಕ್ಯಾಬಿನೆಟ್‌ ಕಾರ್ಯದರ್ಶಿ  ವಿರುದ್ಧವೇ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಇದೇ ವೇಳೆ ಇವರ ಗುಜರಾತ್‌ ಭಾಗೀದಾರ ಕೋಟಿಗಟ್ಟಲೆ ಸುಲಿಗೆ ಮಾಡುತ್ತಿದ್ದಾರೆ; ಅಧಿಕಾರಿಗಳು ಸುಸ್ತಾಗಿದ್ದಾರೆ, ವಿಶ್ವಾಸಾರ್ಹತೆ ಕೊರೆದು ಹೋಗಿದೆ; ಪ್ರಜಾಸತ್ತೆಯು ಅಳುತ್ತಿದೆ’ ಎಂದು ಹಿಂದಿಯಲ್ಲಿ ರಾಹುಲ್‌ ಟ್ವೀಟ್‌ ಮಾಡಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next