Advertisement

ಚೌಕೇಶ್ವರ -ಘಟ್ಟಗಿ ಬಸವೇಶ್ವರ ರಥೋತ್ಸವ

01:11 PM Apr 17, 2022 | Team Udayavani |

ಮೂಡಲಗಿ: ಕೊರೊನಾ ಕಾರಣ ಯಾದವಾಡ ಗ್ರಾಮದಲ್ಲಿ ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಂಡಿದ ಯಾದವಾಡದ ಶ್ರೀ ಚೌಕೇಶ್ವರ ಹಾಗೂ ಘಟ್ಟಗಿ ಬಸವೇಶ್ವರ ಜಾತ್ರಾ ಮಹೋತ್ಸವ ಏ. 12ರಿಂದ ಆರಂಭವಾಗಿದ್ದು, 22ರವರೆಗೆ ನಡೆಯಲಿದೆ.

Advertisement

ಶನಿವಾರ ಚೌಕಿಮಠದ ಶ್ರೀ ಶಿವಯೋಗಿ ದೇವರು ಸಾನ್ನಿಧ್ಯದಲ್ಲಿ ಹಾಗೂ ಶ್ರೀ ಘಟಗಿ ಬಸವೇಶ್ವರ ದೇವಸ್ಥಾನ ಅಭಿವೃದ್ಧಿ ಸೇವಾ ಸಮಿತಿ ಆಶ್ರಯದಲ್ಲಿ ಸಡಗರ ಸಂಭ್ರಮದಿಂದ ಅಪಾರ ಜನಸ್ತೋಮದ ನಡುವೆ ಶ್ರೀ ಚೌಕೇಶ್ವರ ಹಾಗೂ ಘಟ್ಟಗಿ ಬಸವೇಶ್ವರ ರಥೋತ್ಸವ ಜರುಗಿತು.

ಯಾದವಾಡ ಕ್ಷೇತ್ರಾ ಪತಿ ಶ್ರೀ ಚೌಕೇಶ್ವರ ಹಾಗೂ ಶ್ರೀ ಘಟ್ಟಗಿ ಬಸವೇಶ್ವರ ಮೂರ್ತಿಗಳಿಗೆ ವಿಶೇಷ ಅಭಿಷೇಕ ಮತ್ತು ಪೂಜೆ ಹಾಗೂ ಪುಷ್ಪಗಳಿಂದ ಶೃಂಗರಿಸಲಾಗಿತ್ತು. ಸಂಜೆ ಯಾದವಾಡ ಗ್ರಾಮದ ಚೌಕೇಶ್ವರ ಮಂದಿರದಿಂದ ಬಸ್‌ ನಿಲ್ದಾಣ ಹತ್ತಿರದ ಹೊನ್ನಮ್ಮ ಪಾದಗಟ್ಟೆಯವರೆಗೆ ಮತ್ತು ಬಸವೇಶ್ವರ ದೇವಸ್ಥಾನದವರೆಗೆ ಶ್ರೀ ಚೌಕೇಶ್ವರ ರಥೋತ್ಸವ ಜರುಗಿತು.

ನಂತರ ಘಟಗಿ ಬಸವೇಶ್ವರ ದೇವಸ್ಥಾನ ಹತ್ತಿರ ತಳಿರು ತೋರಣ, ಬೃಹತ್ತಾಕಾರ ರುದ್ರಾಕ್ಷಿ ಹಾಗೂ ಹೂ ಮಾಲೆಗಳಿಂದ ಶೃಂಗರಿಸಿದ ಶ್ರೀ ಘಟಗಿ ಬಸವೇಶ್ವರ ರಥೋತ್ಸವಕ್ಕೆ ಶ್ರೀಗಳು ಪೂಜೆ ಸಲ್ಲಿಸಿದರು. ನಂತರ ಅಪಾರ ಜನಸ್ತೋಮ ಮತ್ತು ಜಯಘೋಷಗಳ ಮಧ್ಯ ಶ್ರೀ ಘಟಗಿ ಬಸವೇಶ್ವರ ರಥೋತ್ಸವ ಬಸವನ ಕಟ್ಟೆ ವರೆಗೆ ಸಾಗಿ ಮರಳಿ ದೇವಸ್ಥಾನಕ್ಕೆ ಆಗಮಿಸಿತ್ತು. ಭಕ್ತರು ರಥೋತ್ಸವಕ್ಕೆ ಬಾಳೆ ಹಣ್ಣು, ಬೆಂಡು-ಬೆತ್ತಾಸು, ಕಾರಿಕು, ತೆಂಗಿನಕಾಯಿ ಹಾರಿಸಿ ತಮ್ಮ ಹರಕೆ ತೀರಿಸಿ ಪುನೀತರಾದರು.

ರಥೋತ್ಸವದಲ್ಲಿ ಝಾಂಜ್‌ ಪಥಕ, ಕರಡಿ ಮೇಳಗಳು ಮೆರಗು ನೀಡಿದವು. ಜಾತ್ರಾ ಕಮಿಟಿ ಅಧ್ಯಕ್ಷ ಶಿವಪ್ಪಗೌಡ ನ್ಯಾಮಗೌಡರ, ಸದಸ್ಯರು, ಸಮಾಜ ಸೇವಕ ಕಲ್ಮೇಶ ಗಾಣಗಿ ಹಾಗೂ ಯಾದವಾಡ, ಕೊಪ್ಪದಟ್ಟಿ, ಕಮನಕಟ್ಟಿ, ಗಿರಿಸಾಗರ, ಗುಲಗೋಜಿಕೊಪ್ಪ, ಕುರಬಟ್ಟಿ, ಮಾನೋಮ್ಮಿ ಸೇರಿದಂತೆ ಅನೇಕ ಗ್ರಾಮಗಳ ಭಕ್ತರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next